ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಶ್ರೀಮದ್ಭಾಗವತವು [ಅಧ್ಯಾ, ೨೮, ಅದರಿಂದ ಹಾನಿಯಿಲ್ಲ. ಆದರೆ, ಸೂಯ್ಯನಿಗೂ, ಮೇಘಗಳಿಗೂ ಅನ್ನೋನ್ಯ ಸಂಬಂಧವೇ ಇಲ್ಲದುದರಿಂದ, ಆ ಮೇಘಗಳ ಮರೆಯಿಂದ ಅವನಿಗೆ ದೋಷವಿಲ್ಲದಿರಬಹುದು. ಆತ್ಮಕ್ಕೂ ಇಂದ್ರಿಯಗಳಿಗೂ ಇರುವ ಸಂಬಂ ಧವು ವಿಶೇಷಸಮೀಪವಾದುದಲ್ಲವೆ?” ಎಂದರೆ, ಆಕಾಶದೃಷ್ಟಾಂತದಿಂದ ಇದನ್ನು ಇನ್ನೂ ವ್ಯಕ್ತವಾಗಿ ತಿಳಿಯಬಹುದು. ವಾಯುವು ಶೋಷಿಸು ತಿದ್ದರೂ, ಗ್ರಿ ಯು ದಹಿಸಿದರೂ, ಮಳೆಯ ನೀರಿನಿಂದ ನೆನೆದರೂ, ನೆಲದ ಧೂಳು ಮುಚ್ಚಿಕೊಂಡರೂ ಆಕಾಶವ, ಅವುಗಳ ಗುಣಗಳನ್ನಾಗಲಿ,ಶೀತೋ ಹ್ಯಾದಿ ಋತುಧರಗಳನ್ನಾಗಲಿ ತನ್ನಲ್ಲಿ ಅಂಟಿಸಿಕೊಳ್ಳದಂತೆ, ಪ್ರಕೃತಿ ವಿಲಕ್ಷಣವಾಗಿಯೂ, ಯಾವಾಗಲೂ ಒಂದೇರೂಪವುಳ್ಳುದಾಗಿಯೂ, ಇರುವ ಆತ್ಮಸ್ವರೂಪವೂಕೂಡ, ಸಂಸಾರಕಾರಣಗಳಾದ ಸತ್ಯಾದಿ ಗುಣಗಳಿಂದಲಾಗಲಿ, ಅವುಗಳ ಕಾರದಿಂದಾಗಲಿ ಸಂಬಂಧಿಸಲಾರದು. ಆದುದರಿಂದ, ಪರಮಾತ್ಮನಿಷ್ಠೆಯುಳ್ಳ ಆತ್ಮಕ್ಕೆ, ಕಾಮುಕರ ಸಂಬಂಧ ವಿದ್ದಾಗಲೂ ಆ ದೋಷವು ಆಂಟಲಾರದು. ಆದರೆ ನನ್ನಲ್ಲಿ ದೃಢವಾದ ಭಕ್ತಿಯೋಗವು ಹುಟ್ಟಿ, ಆದರಿಂದ, ಮನಃಕಷಾಯರೂಪವಾದ ರಜೋ ಗಣವೂ, ಆ ರಜೋಗುಣಕಾರಗಳೆನಿಸಿದ ಕಾಮಕ್ರೋಧಾದಿಗಳೂ ಪೂರ್ಣವಾಗಿ ಬಹಿಷ್ಕರಿಸಲ್ಪಡುವವರೆಗೆ ಮಾತ್ರ, ಶಬ್ದಾದಿವಿಷಯಗಳ ಸಂಗವಿಲ್ಲದಂತೆ ಎಚ್ಚರಿಕೆಯಿಂದಿರಬೇಕು. ಭಕ್ತಿಯೋಗವು ನಿಷ್ಪನ್ನವಾಗ ಬೇಕಾದರೆ, ಅದಕ್ಕೆ ವಿರೋಧಿಯಾದ ರಜೋಗುಣವನ್ನು ನೀಗಿಸುವುದೇ ಉತ್ತಮವಾದ ಉಪಾಯವೆನಿಸಿರುವುದು, ಆ ರಜಸ್ಸನ್ನು ನೀಗಿಸದೆ ಭಕ್ತಿ ಯೋಗವು ಕೈಗೂಡದು. ಆದುದರಿಂದ ಆ ರಜೋಗುಣವು ನೀಗುವವರೆಗೆ ಶಬ್ದಾದಿವಿಷಯಗಳಲ್ಲಿ ಸಂಗವಿಲ್ಲದಂತಿರಬೇಕು. ರೋಗವನ್ನು ನಿಶೇಷವಾಗಿ ಮುರಿಯದಿದ್ದರೆ, ಅದು ಆಗಾಗ ಮನುಷ್ಯನನ್ನು ಬಾಧಿಸುತ್ತಲೇ ಇರುವು ದಲ್ಲವೆ ? ಅದರಂತೆಯೇ ಮೋಕ್ಷಪಾಯವಿರೋಧಿಗಳಾದ ಪ್ರಾಚೀನ ಕರಗಳನ್ನು ಕಳೆಯದ ಕುಯೋಗಿಯ ಮನಸ್ಸು, ಆಗಾಗ ವಿಷಯಾಸಕ್ಕೆ ವಾಗಿ, ಅವನ ಯೋಗವನ್ನು ಕೆಡಿಸುವುದು. ಉದ್ದವಾ ! ಇಂದ್ರಾದಿ ದೇವತೆಗಳು ಇತರರ ಶ್ರೇಯಸ್ಸನ್ನು ನೋಡಿ ಸಹಿಸಲಾರರು. ದೇವತೆಗಳಿಗೆ