ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೨೮.] ಏಕಾದಶಂಥವು. ೨೬೫೧ ಈ ಅಸಹನವೆಂಬುದು ಸಹಜಸ್ವಭಾವವು. ಆದುದರಿಂದ ಅವರೇ ಯೋಗಿಯ ಮನಸ್ಸನ್ನು ಕೆಡಿಸುವುದಕ್ಕಾಗಿ, ಮನುಷ್ಯರೂಪದಿಂದ ಕಾಮುಕರನ್ನು ಸೃಷ್ಟಿಸಿ ಕಳುಹಿಸುವರು. ಆ ಕಾಮುಕರು ಬಂದು ನಾನಾವಿಧವಿಘ್ನು ಗ ಳಿಂದ ಯೋಗಿಯ ಮನಸ್ಸನ್ನು ಕೆಡಿಸುವುದಕ್ಕೆ ಯತ್ನಿ ಸುವರು. ಇಂತಹ ಸಂದರ್ಭಗಳಲ್ಲಿ ಯೋಗಪರಿಪಾಕವಿಲ್ಲದ ಕುತಯೋಗಿಗಳು, ಪೂವಾ ಸನೆಯಿಂದ ಆಕರ್ಷಿಸಲ್ಪಟ್ಟು, ತಮ್ಮ ಯೋಗದಲ್ಲಿ ಗಮನವಿಲ್ಲದೆ, ತಿರುಗಿ ಕರ ತಂತ್ರವನ್ನೇ ಅವಲಂಬಿಸಿ ಸಂಸಾರದಲ್ಲಿ ಬಿಳುವರು. ಸಾಮಾನ್ಯ ವಾಗಿ ಯಾವ ಜಂತುವಾದರೂ, ಶರೀರವು ಬಿದ್ದು ಹೋಗುವವರೆಗೆ, ತಾನಾ ಗಿಯೋ, ಅಥವಾ ಬೇರೆ ಯವರಿಂದ ಪ್ರೇರಿತವಾಗಿ, ಯಾವುದಾದರೂ ಕರವನ್ನು ನಡೆಸುತ್ತಲೇ ಇರುವುದು.ಇದು ಲೋಕಸ್ವಭಾವವು.ಆದುದರಿಂದ ಶರೀರವನ್ನೆತ್ತಿದಮೇಲೆ ಯಾವನೂ ಕರರಹಿತನಾಗಿರಲಾರನು. ಹಾಗಿ ದರೂ, ಕರೆಗಳಿಂದುಂಟಾಗುವ ಅನರವನ್ನು ತಿಳಿದ ವಿದ್ವಾಂಸನು, ವಿಷ ಯಾಭಿಲಾಷೆಯನ್ನು ನೀಗಿ, ಆತ್ಮಾನುಭವವೆಂಬ ಆನಂದದಲ್ಲಿಯೇ ಮಗ್ನ ನಾಗಿರುವುದರಿಂದ, ತಾನು ದೇಹದಲ್ಲಿದ್ದಾಗಲೂ, ಆ ದೇಹಸಂಬಂಧ ವಿಲ್ಲದವನಂತೆಯೂ, ಕಾವ್ಯಗಳನ್ನು ನಡೆಸುವಾಗಲೂ ಕರರಹಿತನಂತೆಯೂ ಇರುವನು. ಇಂತವನು ತಾನು ನಿಂತಿದ್ದರೂ, ಕುಳಿತಿದ್ದರೂ, ಮಲಗಿದ್ದರೂ ಸಂಚರಿಸುತ್ತಿದ್ದರೂ, ಮಲಮೂತ್ರಗಳನ್ನು ಬಿಡುತ್ತಿದ್ದರೂ, ಭೋಜನ ಮಾಡುತಿದ್ದರೂ, ಹೀಗೆಯೇ ತನಗೆ ಸ್ವಭಾವಪ್ರಯುಕ್ತವಾದ ಬೇರೆ ಯಾವ ಕಾಠ್ಯಗಳನ್ನು ಮಾಡುತಿದ್ದರೂ, ಅವನ ಬುದ್ಧಿಯು ಯಾವಾಗಲೂ ಆತ್ಮಧ್ಯಾನದಲ್ಲಿಯೇ ತಗುಲಿರುವುದರಿಂದ,ಆ ದೇಹವ್ಯಾಪಾರಗಳೊಂದನ್ನೂ ತಿಳಿಯಲಾರನು. ಇಂತಹ ತತ್ವಜ್ಞಾನವುಳ್ಳ ವಿದ್ವಾಂಸನು, ತನ್ನ ಶರೀರ ವನ್ನಾಗಲಿ, ಸುಖದುಃಖಕಾರಣಗಳಾದ ಶಬ್ದಾದಿವಿಷಯಗಳನ್ನಾಗಲಿ, ನೋಡುತಿದ್ದರೂ, ನಿದ್ರೆಯಿಂದೆಚ್ಚರಗೊಂಡವನು, ಸ್ವಪ್ರ ವಿಷಯಗಳನ್ನು ಹೇಗೋಹಾಗೆ, ತನ್ನ ವಿವೇಚನೆಯಿಂದ ಅವುಗಳನ್ನು ನಿಜವೆಂದು ಗ್ರಹಿಸ ಲಾರನು. ಸತ್ಕಾಹಿಗುಣಮೂಲಕಗಳಾದ ಕರಗಳಿಗೆ ತಕ್ಕಂತೆ ನಾನಾ ವಿಧಗಳಾದ ದೇವಮನುಷ್ಯಾದಿಶರೀರಗಳೂ, ದೇಹಾತ್ಮಾಭಿಮಾನರೂಪ