ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೨ ಶ್ರೀಮದ್ಭಾಗವತವು [ಅಧ್ಯಾ, ೨೮. ವಾದ ಅಜ್ಞಾನವೂ,ಜ್ಞಾನೋತ್ಪತ್ತಿಗೆ ಮೊದಲು ಆತ್ಮನಲ್ಲಿ ಸಹಜವೆಂದು ತೋರತಿದ್ದರೂ, ಜ್ಞಾನೋದಯವಾದಮೇಲೆ ಆ ಭ್ರಾಂತಿಯು ಬಿಟ್ಟು ಹೋಗುವುದು. ಆಗ ಆತ್ಮನಲ್ಲಿ ದೇಹಕ್ಕೆ ಸಂಬಂಧಪಟ್ಟ ಆಕಾರಭೇದಗ ಳಾಗಲಿ, ವೃಕ್ಷಯಗಳಾಗಲಿ ತೋರಲಾರವು. ಸೂರೋದಯವು ಪ್ರಾಣಿಗಳ ಕಣ್ಣಿಗೆ ಕತ್ತಲೆಯನ್ನು ನೀಗಿಸುವುದೇಹೊರತು, ಅದಕ್ಕೆ ಅವ ಕಾಶಕೊಡಲಾರದಷ್ಟೆ ? ಅದರಂತೆಯೇ ನನ್ನ ವಿಷಯವಾದ ಜ್ಞಾನವು ಮನುಷ್ಯನ ಬುದ್ದಿಯಲ್ಲಿರುವ ಮೋಹಾಂಧಕಾರವನ್ನು ನಿಶ್ಲೇಷವಾಗಿ ನೀಗಿ ಸುವುದು. ಈ ಮೋಹಾಂಧಕಾರವನ್ನು ನೀಗಿದ ಶುದ್ಧಾತ್ಮಸ್ವರೂಪವು ಸ್ವಯಂಪ್ರಕಾಶವುಳ್ಳುದು. ಜನ್ಮಾದಿವಿ ಕಾರರಹಿತವಾದುದು. ಪ್ರತ್ಯಕ್ಷಾದಿ ಪ್ರಮಾಣಗಳಿಂದ ನಿರ್ಣಯಿಸಲಸಾಧ್ಯವಾದುದು. ಅಪರಿಚ್ಛಿನ್ನ ಜ್ಞಾನ ಸ್ವರೂಪವಾದುದು. ಸರಾದ್ಯಗಳನ್ನೂ ಗೋಚರಿಸತಕ್ಕ ಶಕ್ತಿಯುಳ್ಳುದು. ಎಲ್ಲೆಲ್ಲಿಯೂ ಏಕಸ್ವರೂಪವಾದುದು. ದೇಹಾದಿಗಳಿಲ್ಲದುದು. ದೇವಮನು ಹ್ಯಾದಿವ್ಯವಹಾರಗಳಿಲ್ಲದುದು. ಇಂತಹ ಆತ್ಮನ ಪ್ರೇರಣೆಯಿಂದಲೇ ಪ್ರಾಣಗಳೂ, ವಾಕ್ಕೂ ಕಾರವನ್ನು ನಡೆಸಬಲ್ಲುವು. (ಜೀವಾತ್ಮನಿಗೆ ಸಂಸಾರಕಾರಣವಾದ ಮೋಹವೆಂಬುದಾವುದು ? ” ಎಂದು ಕೇಳುವೆಯಾ ? ಜ್ಞಾನೈಕಾಕಾರವಾದ ಆತ್ಮಸ್ವರೂಪವನ್ನು ತಿಳಿಯಲಾರದೆ, ಆ ಆತ್ಮನಲ್ಲಿ ದೇವಮನುಷ್ಯಾದ್ಯಾಕಾರಗಳನ್ನಾ ರೋಪಿಸಿ “ ನಾನು ದೇವನು, ನಾನು ಮನುಷ್ಯನು; ನಾನು ದೊಡ್ಡವನು, ಅವನು ಸಣ್ಣವನು” ಎಂಬೀ ಅಭಿ ಮಾನಭೇದವನ್ನಿಡುವುದೂ, ಮತ್ತು ದೇವಮನುಷ್ಟಾದ್ಯಾಕಾರಭೇದಗ ಳಿಂದ ಗೋಚರಿಸತಕ್ಕುದಾಗಿಯೂ, ಪಂಚಭೂತಾತ್ಮಕವಾಗಿಯೂ ಇರುವ ದೇಹವನ್ನೂ, ಆ ಶರೀರಕ್ಕೆ ಭೋಗ್ಯವೆನಿಸಿದ ಸ್ವರ್ಗಾದಿಪುರುಷಾರಗ ಇನ್ನೂ ನಿತ್ಯವೆಂದು ತಿಳಿಯುವುದೂ, ಆತ್ಮಗತವಾದ ಮೋಹವೆನಿಸುವುದು, ಹೀಗೆ ದೇಹಗತವಾದ ಆಕಾರಭೇದಗಳನ್ನು ಆತ್ಮನಲ್ಲಿ ಆರೋಪಿಸುವುದೂ ಅನಿತ್ಯವಾದ ಆ ಶರೀರವನ್ನು ನಿತ್ಯವೆಂದು ತಿಳಿಯುವುದೂ ಇವೆರಡೂ `ಕೇವಲಬ್ರಾಂತಿಯೇಹೊರತು ವಾಸ್ತವವಲ್ಲ ! ತತ್ವವನ್ನು ತಿಳಿಯಲಾರ “ಡಿದ್ದರೂ, ತಾವೇ ಪಂಡಿತರೆಂಬ ಅಭಿಮಾನವುಳ್ಳವರು ಮಾತ್ರ ಹೀಗೆ