ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೫a ಅಧ್ಯಾ, ೨೮.] ಏಕಾದಶೆಸ್ಕಂಧವು. ಭ್ರಮಿಸುವರು. ಆದರೆ, ಜ್ಞಾನಯೋಗವು ಪರಿಪಕ್ವವಾಗಿ, ಪರಮಾತ್ಮ ಸ್ವರೂಪವನ್ನು ಯಥಾಸ್ಥಿತವಾಗಿ ತಿಳಿದಮೇಲಲ್ಲವೇ ಶರೀರಾಭಿಮಾನವು ಬಿಟ್ಟು ಹೋಗಬೇಕು ? ಅಷ್ಟರಲ್ಲಿಯೇ ಆಥಿ, ವ್ಯಾಧಿ, ಮೊದಲಾದ ವಿಷ್ಣು ಗಳಿಂದ ಯೋಗಕ್ಕೆ ಭಂಗವುಂಟಾದರೆ ಮಾಡುವುದೇನು ?” ಎಂದು ನೀನು ಶಂಕಿಸಬಹುದು. ಯೋಗವು ಪರಿಪಕ್ವವಾಗುವುದರೊಳಗಾಗಿ ದೇಹಕ್ಕೆ ರೋಗಾದ್ಯುಪದ್ರವಗಳುಂಟಾಗಿ, ಆ ಯೋಗಕ್ಕೆ ನಡುನಡುವೆ ವಿಫುಗ ಳುಂಟಾಗುವುದೇನೋ ಸಹಜವೇ ! ಇಂತಹ ವಿಷ್ಣುಗಳಿಗೆ ನಾನಾಬಗೆಯ ಪ್ರತೀಕಾರಗಳೂ ಏರ್ಪಟ್ಟಿರುವುವು. ಧಾರಣಾಯೋಗದಿಂದ ಶೀತೋಷ್ ಗಳನ್ನೂ, ವಾಯುವನ್ನು ತಡೆಯತಕ್ಕ ಆಸನಯೋಗದಿಂದ ವಾತಾದಿ ರೋಗಗಳನ್ನೂ , ತಪಸ್ಸು, ಮಂತ್ರಶಕ್ತಿ, ಮುಂತಾದುವುಗಳಿಂದ ದುಷ್ಟ ಗ್ರಹಬಾಧೆ, ಸರ್ಪಬಾಧೆ ಮುಂತಾದುವುಗಳನ್ನೂ , ಮದೇಕಧ್ಯಾನದಿಂದಲೂ, ನನ್ನ ನಾಮಸಂಕೀರ್ತನಾದಿಗಳಿಂದಲೂ ಕಾಮಕ್ರೋಧಾದಿಕಲ್ಮಷಗ ಇನ್ನೂ , ಸದಾಚಾರಸೇವಾನುವರ್ತನಗಳಿಂದ ಡಂಭಾದಿಗಳನ್ನೂ, ನಿಗ್ರ ಹಿಸಬಹುದು. ಯೋಗನಿಷ್ಠನಾದವನು ಹೀಗೆ ಬೇರೆಬೇರೆ ಸದುಪಾ ಯಗಳಿಂದ ತನ್ನ ಯೋಗಸಿದ್ಧಿಗೆ ಸಂಭವಿಸುವ ವಿಷ್ಣು ಗಳನ್ನು ತಡೆದು, ಆ ಯೋಗವು ಪರಿಪೂರ್ಣವಾಗುವವರೆಗೆ ದೃಢಚಿತ್ತನಾಗಿರಬೇಕು. ಇದನ್ನು ಬಿಟ್ಟು, ಕೆಲವರು, ಮೊದಲು ತಮ್ಮ ದೇಹಪೋಷಣೆಯನ್ನೇ ಮುಖ್ಯೋ ದೇಶವಾಗಿಟ್ಟು,ಮುಪ್ಪಿನಿಂದ ಜೀರ್ಣವಾದ ಶರೀರವನ್ನೂ ಕೂಡ,ಮಂತ್ ಷಧಗಳೇ ಮೊದಲಾದ ವಿವಿಧೋಪಾಯಗಳಿಂದ ದೃಢಪಡಿಸಿಕೊಂಡು, ಆಮೇಲೆ ಪರಕಾಯಪ್ರವೇಶಾದಿಗಳಿಗಾಗಿಯೇ ಯೋಗವನ್ನಾಚರಿಸುವರು. ವಿದ್ವಾಂಸರಾದರೋ ಈ ವಿಧವಾದ ಯೋಗವನ್ನಾಚರಿಸಲಾರರು. ಏಕೆಂ ದರೆ,ಆದೇಹದಾರ್ಡ್ಯಕ್ಕಾಗಿ ಶ್ರಮಪಡುವುದು ಕೇವಲನಿಷ್ಟ್ರಯೋಜನವು. ಶರೀರವೆಂಬುದು ಎಂದಿದ್ದರೂ ಬಿದ್ದು ಹೋಗತಕ್ಕುದೆ ! ಆದುದರಿಂದ ಈ ಮಂತ್ಷ ಧಾರಿಗಳು ಕೆಲವು ಕಾಲದವರೆಗೆ ಇಂದ್ರಿಯಗಳನ್ನು ಬಲ ಪಡಿಸಬಹುದಾದರೂ, ಮನುಷ್ಯನ ಆಯುಸ್ಸನ್ನು ಹೆಚ್ಚಿಸಲಾರದು, ಹೀಗಿರುವಾಗ ತಮಗಿರುವ ಅಲ್ಪಾಯುಸ್ಸಿನಲ್ಲಿ ಆ ಯೋಗಾ