ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೨೦ ಶ್ರೀಮದ್ಭಾಗವತವು [ಅಧ್ಯಾ, ೨ ದುಮಾರ್ಗವೂ ಉಂಟು. ಏನೆಂದರೆ, ಆಕಾಶ, ವಾಯು, ಅಗ್ನಿ, ಜಲ, ಭೂಮಿ, ಜ್ಯೋತಿಸ್ಸುಗಳು, ಜಂತುಗಳು, ದಿಕ್ಕುಗಳು, ವೃಕ್ಷವರ್ಗಗಳು, ನದಿಗಳು, ಸಮುದ್ರಗಳು, ಮುಂತಾಗಿ ಯಾವ ಭೂತಗಳನ್ನು ಕಂಡರೂ, ಅವೆಲ್ಲವನ್ನೂ ಆ ಭಗವಂತನ ಸ್ವರೂಪವೆಂದೇ ಭಾವಿಸಿ ನಮಸ್ಕರಿಸಬೇಕು. ಕೊನೆಗೆ ತನ್ನನ್ನೂ ಅದೇಭಾವದಿಂದ ತಿಳಿದು ತನಗೆತಾನೇ ನಮಸ್ಕರಿಸ ಬೇಕು ! ಆದರೆ ಹೀಗೆ ಮನಸ್ಸನ್ನು ಸ್ವಾಧೀನಕ್ಕೆ ತರುವಪ್ರಯತ್ನದಲ್ಲಿ ಯೇ ಅತ್ಯಲ್ಪವಾದ ಮನುಷ್ಯನ ಆಯಸ್ಸು ಕಳೆದುಹೋಗುವಂತಿರು ವಾಗ, ಸಂಪೂರ್ಣವಾಗಿ ಮನಸ್ಸನ್ನು ನಿರೋಧಿಸಿ,ಭಕ್ತಿಯನ್ನು ಸಂಪಾದಿಸು ವುದಕ್ಕೆ ಅವಕಾಶವೆಲ್ಲಿ ?” ಎಂದು ನೀನು ಶಂಕಿಸಬೇಡ ! ಆಹಾರವನ್ನು ತೆಗೆದುಕೊಳ್ಳುವಾಗ, ಒಂದೊಂದು ತುತ್ತನ್ನು ಭುಜಿಸುವುದರಿಂದಲೂ, ಮನಸ್ಸಿಗೆ ತುಷ್ಟಿ, ದೇಹಕ್ಕೆ ಪುಷ್ಟಿ, ಹಸಿವಡಗುವುದು, ಈ ಮೂರುಕಾರ ಗಳೂ ಏಕಕಾಲದಲ್ಲಿ ನಡೆಯುವಂತೆ, ಭಗವಾನಪರನಾದವನಿಗೆ, ಆ ಭ ಗವಂತನ ಸ್ವರೂಪಗುಣಾದಿಗಳನ್ನು ಕುರಿತ ತತ್ವಜ್ಞಾನವೂ, ಆತನಲ್ಲಿ ಭಕ್ತಿಯೂ, ಇತರ ಶಬ್ಯಾವಿಷಯಗಳಲ್ಲಿ ವಿರಕ್ತಿಯೂ ಏಕಕಾಲದಲ್ಲಿಯೇ ಹುಟ್ಟುವುವು. ಹೀಗೆ ತತ್ವಜ್ಞಾನ, ಭಕ್ತಿ, ವಿರಕ್ತಿಗಳು ಹುಟ್ಟುವುದರಿಂದ ತಾನಾಗಿ ಶಾಂತಿಯೂ ಮೋಕ್ಷವೂ ಲಭಿಸುವುದು. ಭೂತದೋಹವನ್ನು ಬಿಟ್ಟು, ಸಮಸ್ಯಪ್ರಾಣಿಗಳಲ್ಲಿಯೂ ಮೈತ್ರಿಯುಳ್ಳವನಾಗಿ, ಭಗವಂತನಲ್ಲಿ ಯೇ ಮನಸ್ಸಿಟ್ಟು, ಅದರಿಂದ ಪರಿಶುದ್ಧಸ್ವಭಾವವುಳ್ಳವರು, ಸೂಯ್ಯನು ತನ್ನ ಕಿರಣಗಳಿಂದ ಹೇಗೋ ಹಾಗೆ, ತಮ್ಮ ಪಾದರೇಣುಗಳಿಂದ ಲೋಕ ವನ್ನೆಲ್ಲಾ ಪಾವನಮಾಡಬಲ್ಲರು.” ಎಂದನು. ಆಗ ವಿದೇಹನು ತಿರುಗಿ ಆ ಮ ಹರ್ಷಿಗಳನ್ನು ಕುರಿತು. “ಓ ಮಹಾತ್ಮರೆ! ಭಾಗವತರೆಂದರೆ ಎಂತವರು ? ಅವರ ಧಮ್ಮಗಳಾವುವು ? ಮನುಷ್ಯರಲ್ಲಿ ಅವರ ವೈಲಕ್ಷಣ್ಯವೇನು? ಅವರ ಆಚಾರವೆಂತದು? ಅವರು ಹೇಳತಕ್ಕ ವಿಷಯಗಳೇನು ? ಭಗವತ್ನಿಯ ನೆಂಬುದನ್ನು ಪ್ರತ್ಯೇಕಿಸಿ ತಿಳಿಸುವ ಚಿಹ್ನಗಳಾವುವು?” ಈ ವಿಚಾರಗಳನ್ನು ನನಗೆ ತಿಳಿಸಬೇಕು.” ಎಂದನು.