ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೨೯.] ಏಕಾದಶೆಸ್ಕಂಧನ. ೨೬೫೭ ಮತ್ತು ನನ್ನ ಭಕ್ತನು ಶುದ್ಧ ಮನಸ್ಸುಳ್ಳವನಾಗಿ, ತನ್ನ ಮತ್ತು ಇತರ ಸಮಸ್ತಭೂತಗಳ ಒಳಗೂ, ಹೊರಗೂ ಆಕಾಶದಂತೆ ನಾನು ವ್ಯಾಪಿಸಿರುವೆ ನೆಂಬುದನ್ನು ವಿಮರ್ಶಿಸಿ ತಿಳಿದಿರಬೇಕು. ಹೀಗೆ ನಾನು ಸಾಂತರಾಮಿ ಯಾದುದರಿಂದ, ಸಮಸ್ತಭೂತಗಳನ್ನೂ ನನ್ನಂತೆಯೇ ಭಾವಿಸಿ, ಎಲ್ಲವನ್ನೂ ಸಮಬುದ್ದಿಯಿಂದ ಗೌರವಿಸುತ್ತಿರಬೇಕು. ಬ್ರಾಹ್ಮಣನಾಗಿದ್ದರೂ, ಅಥವಾ ಚಂಡಾಲನಾಗಿದ್ದರೂ, ಬ್ರಾಹ್ಮಣಪ್ರಿಯನಾಗಿದ್ದರೂ, ಬ್ರಹ್ಮ ಸ್ವಾಪಹಾರಿಯಾಗಿದ್ದರೂ, ಶೂರನಾಗಿದ್ದರೂ, ಸಾಧುವಾಗಿದ್ದರೂ, ಎಲ್ಲರನ್ನೂ ಸಮವಾಗಿ ಭಾವಿಸುತ್ತ, ತೇಜೋನಿಧಿಯಾದ ಸೂ‌ನಲ್ಲಿಯೂ ಒಂದು ಸಣ್ಣ ಕಿಡಿಯಲ್ಲಿಯೂ ತಾರತಮ್ಯಬುದ್ಧಿಯಿಲ್ಲದವನು ಯಾವನೋ ಅಂತವನೇ ಮಹಾಜ್ಞಾನಿಯಾದ ಪಂಡಿತನೆಂದು ನನ್ನ ಮತವು. ಸಮಸ್ತ ಭೂತಗಳನ್ನೂ ನನ್ನಂತೆ ಭಾವಿಸತಕ್ಕವನಿಗೆ ಬೇರೆಯವರಲ್ಲಿ ದ್ವೇಷ, ಅಸೂಯೆ, ತಿರಸ್ಕಾರ, ದಂಭ, ಮುಂತಾದ ದುರ್ಗುಣಗಳೆಂದೂ ತಲೆ ದೋರಲಾರವು. ಮನಸ್ಸಿನಲ್ಲಿ ತಾನೇ ದೊಡ್ಡವನೆಂಬ ಅಹಂಕಾರವನ್ನೂ, ಬಂಧುಗಳು ತನ್ನನ್ನು ಹಾಸ್ಯಮಾಡಿ ನಗಬಹುದೆಂಬ ಲಜ್ಜೆಯನ್ನೂ ಎಣಿಸದೆ, ಕತ್ತೆ, ನಾಯಿ, ಚಂಡಾಲರು, ಪಶುಗಳು ಮುಂತಾದ ನೀಚಪ್ರಾಣಿಗ ಇನ್ನೂ ನನ್ನ ಶರೀರವೆಂದೇ ಭಾವಿಸಿ ಅವುಗಳಿಗೆ ನಮಸ್ಕರಿಸಬೇಕು ! ಹೀಗೆ ಸಮಸ್ತಭೂತಗಳೂ ನಾನೇ ಎಂಬ ದೃಢಜ್ಞಾನವು ಹುಟ್ಟುವವ ರೆಗೂ, ಕಂಡಕಂಡ ಭೂತಗಳಿಗೆಲ್ಲಾ ಮನೋವಾಕ್ಯಾಯಗಳೆಂಬ ತ್ರಿಕರಣ ಗಳಿಂದಲೂ ನನ್ನನ್ನೇ ಉದ್ದೇಶಿಸಿ ನಮಸ್ಕರಿಸಬೇಕು. ಹೀಗೆ ಎಡೆಬಿಡದೆ ಉಪಾಸನಮಾಡತಕ್ಕವನಿಗೆ, ಸಮಸ್ತವೂ ಬ್ರಹ್ಮಾತ್ಮಕವೆಂಬ ದೃಢಾಧ್ಯವ ಸಾಯವು ಹುಟ್ಟುವುದು. ಈ ಅಧ್ಯವಸಾಯವು ಯಾವಾಗ ಹುಟ್ಟು ವುದೋ, ಆಗ ಪುರುಷನಿಗೆ ದೇಹಾತ್ಮಭ್ರಮೆ, ಸ್ವತಂತ್ರಾತ್ಮಭ್ರಮೆ, ಮುಂತಾದ ಭಾವನೆಗಳೆಲ್ಲವೂ ಬಿಟ್ಟು ಹೋಗುವುವು. ಮನೋವಾಕ್ಕಾಯಗ ಲೆಂಬ ತ್ರಿಕರಣಗಳಿಂದಲೂ, ಸಮಸ್ತಭೂತಗಳೂ ನಾನೇ ಎಂಬ ಭಾವನೆ ಯನ್ನಿಟ್ಟು ಉಪಾಸಿಸುವುದೇ ಪುರುಷಾರ ಸಾಧನೆಗೆ ಅತ್ಯುತ್ತಮವಾದ ಉಪಾಯವೆಂದು ನನ್ನ ಮತವು, ಉದ್ಧನಾ ! ಹೀಗೆ ಸಮಸ್ತವನ್ನೂ