ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


94೫೮ ಶ್ರೀಮದ್ಭಾಗವತನ [ಅನ್ಯಾ, ೨೯. ಬ್ರಹ್ಮಾತ್ಮಕವೆಂದು ತಿಳಿದು ಉಪಾಸಿಸತಕ್ಕ ಈ ಧರವನ್ನು ಉಕ್ರಮಿಸಿದ ಮೇಲೆ, ಇದಕ್ಕೆ ಯಾವವಿಧವಾದ ವಿಷ್ಣು ಗಳೂ ಭಂಗವನ್ನುಂಟು ಮಾಡ ಲಾರವು. ಈ ಧರವು ಯಾವ ವಿಧದಿಂದಲೂ ನಿಷ್ಪಲವಾಗಿ ಹೋಗ ಲಾರದು. ಏಕೆಂದರೆ, ಈ ಧರವು ಯಾವಫಲವನ್ನೂ ಉದ್ದೇಶಿಸದೆ ನಡೆಸ ತಕ್ಕುದಾದುದರಿಂದ, ಗುಣಸಂಬಂಧವಿಲ್ಲದುದು.ರಜಸ್ಸು ಮೊದಲಾದ ಗುಣ ಗಳೇ ಮನಸ್ಸನ್ನು ಕಲಗಿಸತಕ್ಕವುಗಳಾದುದರಿಂದ, ಆ ಗುಣಗಳ ಸಂಬಂಧ ವಿಲ್ಲದ ಧಕ್ಕೆ ಎಂದಿಗೂ ಲೋಪವು ಬಾರದು. ಇದಲ್ಲದೆ ಲೋಕದಲ್ಲಿ ನಿಷ್ಟ್ರಯೋಜನಗಳೆಂದು ತೋರಿಬಂದ ವ್ಯಾಪಾರಗಳನ್ನೂ ಕೂಡ, ಫಲಾ ಭಿಸಂಧಿಯಿಲ್ಲದೆ ನನ್ನ ಸ್ನೇ ಉದ್ದೇಶಿಸಿ ನಡೆಸಿದಪಕ್ಷದಲ್ಲಿ, ಅವೂ ಫಲಕಾರಿ ಗಳೇ ಆಗುವುವು. ಹೇಗೆಂದರೆ,ಕಂಸನು ನನ್ನ ವಿಷಯರಾದ ಭಯದಿಂದಲೂ, ಗೋಪಸ್ತ್ರೀಯರು ಮೋಹದಿಂದಲೂ, ಶಿಶುಪಾಲನು ದ್ವೇಷದಿಂದಲೂ ಉತ್ತಮಫಲವನ್ನು ಹೊಂದಿದರಲ್ಲವೆ ? ಮುಖ್ಯವಾಗಿ ಅನಿತ್ಯವೆನಿಸಿಕೊಂಡ ಈ ಮನುಷ್ಯ ಶರೀರದಿಂದ, ನಿತ್ಯನೂ, ಸಿ ಕಾರನೂ ಆದ ನನ್ನನ್ನು ಪಡೆಯುವುದಕ್ಕೆ ತಕ್ಕ ಸಾಧನಗಳನ್ನು ಸಮರ್ಥಿಸುವುದೇ ಬುದ್ದಿವಂತರ ಬುದ್ಧಿಗೂ, ವಿವೇಕಿಗಳಲ್ಲಿರುವ ಯುಕ್ತಾಯುಕ್ತ ವಿವೇಚನೆಗೂ ಫಲವೆಂದು ತಿಳಿ ! ಉದ್ಯವಾ! ವೇದಾಂತಾರ್ಮಗಳ ಸಾರವೆಲ್ಲವೂ ಇವೆ : ದೇವತೆ ಗಳಿಗೂ ದುರ್ಲಭವಾದ ಈ ಜ್ಞಾನಪಾರವನ್ನು ನಿನಗೆ ಪೂರ್ಣವಾಗಿ ವಿಸ್ತ ರಿಸಿಯೂ, ಸಂಗ್ರಹವಾಗಿ ಕೊಡೀಕರಿಸಿ ಯೂ ಹೇಳಿರುವೆವು. ಇದಲ್ಲದೆ ನಿನಗೆ ಇದುವರೆಗೆ ನಾನು ಮಾಡಿದ ಉಪದೇಶಗಳಿಂದ, ಪ್ರಕೃತಿ ಪುರುಷ ಶ್ವರರೆಂಬ ತತ್ವತ್ರಯವಿವೇಚನಾತ್ಮಕವಾಗಿಯೂ, ಈಶ್ವರೋಪಾಸ ನಾತ್ಮಕವಾಗಿಯೂ ಇರುವ ಜ್ಞಾನಪ್ರಕಾರವನ್ನೂ ಸ್ಪಷ್ಟವಾದ ಯಕಿ ಗಳಿಂದ ಚೆನ್ನಾಗಿ ಉಪರಾರಿಸಿರುವೆನು. ಈ ಜ್ಞಾನವನ್ನು ಪಡೆದ ಮನು ಹೈನು,ಸಮಸ್ಯಸಂಶಯಗಳನ್ನೂ ನೀಗಿ, ಮುಕ್ತಿಯನ್ನು ಹೊಂದುವುದರಲ್ಲಿ ಸಂದೇಹವಿಲ್ಲ! ನೀನು ಕೇಳಿದ ಆಯಾಪ್ರಶ್ನೆಗಳಿಗೆ ನಾನು ವಿವರವಾಗಿ ತಿಳಿಸಿದ ಉಪಪಾದನೆಗಳೆಲ್ಲವನ್ನೂ ಯಾವನು ಮನಸ್ಸಿನಲ್ಲಿ ಚೆನ್ನಾಗಿ ಧಾರಣ ಮಾಡುವನೋ, ಅವನು ಸನಾತನವಾಗಿಯೂ, ವೇದಾಂತೈಕವೇದ್ಯ