ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩8 ಅಧ್ಯಾ, ೨೯. ಏಕಾದಶಸ್ಕಂಧವು. ವಾಗಿಯೂ ಇರುವ ಪರಬ್ರಹ್ಮದ ಸಾಯುಜ್ಯವನ್ನು ಹೊಂದುವನು. ಮತ್ತು ಈ ತತ್ವವನ್ನು ಯಾವನ ಅನುಕೂಲರಾದವರಿಗೆ ಯಥಾಕ್ರಮ ವಾಗಿ ಉಪದೇಶಿಸುವನೋ,ಅವನಿಗೆ ನಾನು ನನ್ನನ್ನೇ ಒಪ್ಪಿಸಿಕೊಡುವೆನು. ಆತ್ಮವನ್ನು ಪವಿತ್ರೀಕರಿಸತಕ್ಕ ಪರಮಪವಿತ್ರವಾದ ಈ ತತ್ವವನ್ನು ಅನು ಸಂಧಾನಮಾಡತಕ್ಕವನು, ದಿನದಿನಕ್ಕೆ 'ಪ್ರಕಾಶಹೊಂದತಕ್ಕ ಜ್ಞಾನದೀಪ ದಿಂದ, ನನ್ನನ್ನು ಸಾಕ್ಷಾತ್ಕರಿಸುತ್ತ, ಮೋಕ್ಷ ಪ್ರತಿಬಂಧಕಗಳಾದ ಎಲ್ಲಾ ದೋಷಗಳಿಂದಲೂ ಬಿಡಲ್ಪಡುವನು. ಈ ತತ್ವವನ್ನು ಪ್ರತಿದಿನವೂ ಶ್ರದ್ಧೆ ಯಿಂದ ಶ್ರವಣಮಾಡತಕ್ಕವನು ನನ್ನಲ್ಲಿ ಭಕ್ತಿಪರಿಪಾಕವನ್ನು ಹೊಂದಿ ಕರಗಳಿಂದ ಮುಕ್ತನಾಗುವನು. ಓ ಮಿತ್ರಾ! ಉದ್ಯವಾ ' ಇದುವರೆಗೆ ನಾನು ಹೇಳಿದ ವಿಷಯಗಳಿಂದ ನಿನಗೆ ಬ್ರಹ್ಮಸ್ವರೂಪವೂ, ಆ ಬ್ರಹ್ಮ ಪ್ರಾಪ್ತಿಗೆ ಸಾಧನಗಳೂ ಚೆನ್ನಾಗಿ ತಿಳಿಯಿತಲ್ಲವೆ ? ದೇಹಾತ್ಮ ಭಮಾಡಿ ರೂಪವಾದ ಮೋಹಗಳೂ, ತಾಪತ್ರಯದಿಂದಲೂ, ಅಜ್ಞಾನದಿಂದಲೂ ನಿನ್ನ ಮನಸ್ಸಿನಲ್ಲಿ ಹುಟ್ಟಿದ ಶೋಕವೂ ಸಂಪೂರ್ಣವಾಗಿ ನೀಗಿದುವ ಲ್ಲವೆ ? ಸೀನು ಇತರರಿಗೆ ಈ ಜ್ಞಾನೋಪದೇಶವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ದಾಂಭಿಕರಿಗೂ, ನಾಸ್ತಿಕರಿಗೂ, ಮೂರ್ಖರಿಗೂ, ಶ್ರದ್ದೆಯಿಲ್ಲದವರಿಗೂ, ಅಭಕ್ತರಿಗೂ, ಅವಿನೀತರಿಗೂ ನೀನು ಈ ಬ್ರಹ್ಮ ಜ್ಞಾನವನ್ನು ಪದೇಶಿಸಬಾರದು. ಮೇಲೆ ಹೇಳಿದ ದೋಷಗಳೊಂದೂ ಇಲ್ಲ ದವರಾಗಿಯೂ, ಬ್ರಾಹ್ಮಣಪ್ರಿಯರಾಗಿಯೂ, ಸಿನ್ನಲ್ಲಿ ನಿಜವಾದ ಪ್ರೀತಿ ಯುಳ್ಳವರಾಗಿಯೂ, ಸಾಧುಗಳಾಗಿಯೂ, ಶುದ್ಧರಾಗಿಯೂ ಇರುವವರಿಗೆ ಮಾತ್ರವೇ ಇದನ್ನು ಪದೇಶಿಸಬಹುದು. ಕೊನೆಗೆ ಶೂದ್ರನಾಗಲಿ, ಸಿಯಾ ಗಲಿ, ಶ್ರದ್ಧೆಯುಳ್ಳವರಾಗಿದ್ದರೆ, ಅಂತವರಿಗೂಕೂಡ ಇದನ್ನು ಪದೇಶಿಸಬಹು ದು, ತತ್ವಜ್ಞಾನವನ್ನು ಪಡೆಯಬೇಕೆಂಬ ಅಪೇಕ್ಷೆಯುಳ್ಳವರಿಗೆ, ನಾನು ಹೇಳಿದ ಈ ವಿಷಯವನ್ನು ತಿಳಿದುಕೊಂಡಮೇಲೆ, ಬೇರೆ ತಿಳಿಯಬೇಕಾದು ದೊಂದೂ ಇರುವುದಿಲ್ಲ ! ಅಮೃತವನ್ನು ಕುಡಿದಮೇಲೆ, ಕುಡಿಯಬೇಕಾದ ಬೇರೆ ಪಾನದ್ರವ್ಯವಾವುದುಂಟು ? ಅಪ್ಪಾ ! ಉದ್ಯವಾ ! ಕರಜ್ಞಾನ ಯೋಗಗಳಿಂದಾಗಲಿ,ಕೃಷಿವಾಣಿಜ್ಯಾದಿ ವೃತ್ತಿಗಳಿಂದಾಗಲಿ, ರಾಜನೀತಿಯಲ್ಲಿ