ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬d೨ ಶ್ರೀಮದ್ಭಾಗವತನ [ಅಧ್ಯಾ. ೨೯. ಶ್ರೀಕೃಷ್ಣನು ಹೀಗೆಂದು ಹೇಳಿದಮೇಲೆ, ಉದ್ದವನು ಅವನಿಗೆ ಪ್ರ ದಕ್ಷಿಣಮಾಡಿ, ಅವನ ಪಾದಗಳನ್ನು ಹಿಡಿದು ನಮಸ್ಕರಿಸಿದನು. ಆ ಉದ್ಧ ವನು ಭಗವದಾಜ್ಞೆಯಂತೆ ತಾನು ಸುಖದುಃಖಗಳನ್ನು ಜಯಿಸಿದವನಾಗಿದ್ಧ ರೂ, ಆ ಶ್ರೀಕೃಷ್ಣನನ್ನು ಬಿಟ್ಟು ಹೊರಡುವಾಗ, ಅವನಿಗೆ ಆತನಲ್ಲಿರುವ ಭಕ್ತಿವಿಶೇಷದಿಂದ, ಕಣ್ಣುಗಳಲ್ಲಿ ಧಾರೆಧಾರೆಯಾಗಿ ನೀರು ತುಳುಕುತ್ತಿತ್ತು. ಕೃಷ್ಣನಲ್ಲಿ ತನಗಿದ್ದ ಗುಜವಾದ ಸ್ನೇಹದಿಂದ, ಉದ್ಯವನು ಆತನನ್ನು ಬಿಟ್ಟು ಹೋಗಲಾರದೆ, ಸಂಕಟದಿಂದಲೂ, ಭಯದಿಂದಲೂ ತಳಿಸುತ್ತ, ಕೊನೆಗೆ ಪ್ರಯತ್ನ ಪೂರಕವಾಗಿ ಮನಸ್ಸನ್ನು ದೃಢಪಡಿಸಿಕೊಂಡು, ಆಗಾ ಗ ಆ ಪ್ರಭುವಿನ ಪಾದುಕೆಗಳನ್ನು ಶಿರಸ್ಸಿನಲ್ಲಿಟ್ಟು ಒತ್ತಿಕೊಳ್ಳುತ್ತ, ಮ ತೊಮ್ಮೆ ಆತನ ಪಾದಗಳನ್ನು ಹಿಡಿದು ನಮಸ್ಕರಿಸಿ, ಬಹಳ ಕಷ್ಟದಿಂದ ಆ ಸ್ಥಳವನ್ನು ಬಿಟ್ಟು ಹೊರಟನು. ಮಹಾ ಭಾಗವತೋತ್ತಮನಾದ ಉ ವನು, ತನ್ನ ಪ್ರಭುವಾದ ಆ ಕೃಷ್ಣನನ್ನ ಹೃದಯದಲ್ಲಿಟ್ಟು ಧ್ಯಾನಿ ಸುತ್ತ, ಆತನ ಆಜ್ಞಾನುಸಾರವಾಗಿ ಬದರಿಕಾಶ್ರಮವನ್ನು ಸೇರಿ, ಅಲ್ಲಿ ತಪೋನಿರತನಾಗಿದ್ದು ಕೊನೆಗೆ ಉತ್ತಮಗತಿಯನ್ನೂ ಹೊಂದಿದನು? ಓ ಪರೀಕ್ಷಿವಾಜಾ ! ಯೋಗೀಶ್ವರರೆಲ್ಲರೂ ಯಾವನ ಪಾದಮೂ ಲವನ್ನು ಭಕ್ತಿಯಿಂದ ಸೇವಿಸುತ್ತಿರುವರೋ ಅಂತಹ ಶ್ರೀಹರಿಯು, ವೇ ದಾಂತವೆಂಬ ಸಮುದ್ರದಿಂದ, ಮಹಾಭಾಗವತೋತ್ತಮನಾದ ಉದ್ಭವ ನಿಗೆ ಅನುಗ್ರಹಿಸಿಕೊಟ್ಟ ಈ ಜ್ಞಾನಾಮೃತವನ್ನು ಯಾವನು ಶ್ರದ್ಧೆಯಿಂದ ಸೇವಿಸುವನೋ, ಅವನೊಬ್ಬನು ಮಾತ್ರವಲ್ಲದೆ, ಅವನ ಸಂಬಂಧವುಳ್ಳ ಜಗತ್ತೆಲ್ಲವೂ ಕೂಡ ಸದ್ದತಿಯನ್ನು ಹೊಂದುವುದು. ಹೀಗೆ ಆ ಪರಮ ಪುರುಷನು, ಮೊದಲು ತನ್ನ ನಿಶ್ವಾಸರೂಪದಿಂದ ವೇದಗಳೆಲ್ಲವನ್ನೂ ಹೊರ ಪಡಿಸಿದುದಲ್ಲದೆ, ಸಮುದ್ರದಿಂದ ಅಮೃತವನ್ನೆ ತಿದಂತೆ, ಆವೇದಗಳಲ್ಲಿ ಆ ತ್ಯಂತಸಾರಭೂತವಾದ ಜ್ಞಾನವಿಜ್ಞಾನಗಳೆಂಬ ಆತ್ಮ ಪರಮಾತ್ರತತ್ವವ ಸಂಗ್ರಹಿಸಿ ತೆಗೆದು, ಉದ್ದವನಿಗೆ ಉಪದೇಶಿಸುವನೆವದಿಂದ ಲೋಕದ ಲ್ಲಿ ತನ್ನ ಕೃತ್ಯವರ್ಗವೆಲ್ಲವನ್ನೂ ಸಂಸಾರಭಯದಿಂದದಾಟಿಸುವುದಕ್ಕಾಗಿ, ಪ್ರಚಾರಗೊಳಿಸಿದನು. ಕೃಷ್ಣರೂಪಿಯಾದ ಅಂತಹ ಪರಮಾತ್ಮನನ್ನು ನಮಸ್ಕರಿಸುವೆವು.” ಎಂದನು. ಇದು ಇಪ್ಪತ್ತೊಂಬತ್ತನೆಯ ಅಧ್ಯಾಯವು,