ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9LL ಅಧ್ಯಾ, 10.] ಏಕಾದಶಸ್ಕಂಧವು, - ೨೬೬೩ ( ಬ್ರಾಹ್ಮಣಶಾಪದಿಂದ ಯಾದವರಲ್ಲಿ ಪರಸ್ಪರ ಕಲಹ ). 3 ವುಂಟಾಗಿ, ಯಾದವರೆಲ್ಲರ ನಾಶಹೊಂದಿದುದು, ಬಲರಾಮನಿರಾಣವು. ಪರೀಕ್ಷಿದ್ರಾಜನು ಶುಕಮುನಿಯನ್ನು ಪ್ರಶ್ನೆ ಮಾಡುವನು. “ಓ ಮ ಹರ್ಷಿ! ಉದ್ದವನು ಬಾಲ್ಯಾಶ್ರಮಕ್ಕೆ ಹೋದಮೇಲೆ, ಶ್ರೀಕೃಷ್ಣನು ದ್ವಾರಕೆಯಲ್ಲಿ ನಡೆಸಿದ ಕಾವ್ಯವೇನು? ಬ್ರಾಹ್ಮಣಶಾಪದಿಂದ ತನ್ನ ಕುಲ ವೆಲ್ಲವೂ ನಷ್ಟವಾದಾಗ, ಆ ಭಗವಂತನು ತಾನು ಕೈಕೊಂಡಿದ್ದ ಕೃಷ್ಣ ದೇಹವನ್ನು ಇಲ್ಲಿಯೇ ಬಿಟ್ಟುಹೋದನೆ ? ಅಥವಾ ಸತ್ಯೇಂದ್ರಿಯಗಳಿಗೂ ಆಹ್ಲಾದಕರವಾಗಿ, ಲೋಕಮೋಹನವೆನಿಸಿದ ಆ ದಿವ್ಯವಿಗ್ರಹದೊಡನೆಯೇ ತನ್ನ ಲೋಕಕ್ಕೆ ಹೋದನೆ ? ಸ್ತ್ರೀಯರು ಯಾವ ದಿವ್ಯ ವಿಗ್ರಹದಮೇಲೆ ಬಿದ್ದ ಕಣ್ಣುಗಳನ್ನು ಹಿಂತಿರುಗಿಸುವುದಕ್ಕೆ ಶಕ್ತರಾಗುತ್ತಿರಲಿಲ್ಲವೋ, ಯಾವ ದೇಹದ ಸೌಂದಯ್ಯವು ಕರ್ರಂಧದ ಮೂಲಕವಾಗಿ ಸತ್ಪುರುಷರ ಹೃದ ಯದಲ್ಲಿ ಸೇರಿದಮೇಲೆ, ಅಲ್ಲಿಯೇ ಚಿತ್ರಿಸಲ್ಪಟ್ಟಂತೆ ಸ್ಥಿರವಾಗಿ ನಿಂತು, ಆ ಲ್ಲಿಂದ ಬಿಟ್ಟು ಕದಲದಂತಿತೋ, ಯಾವ ದಿವ್ಯದೇಹದ ಕಾಂತಿಯು,ಕೀರ್ತಿ ಸುವ ಕವಿಗಳ ವಾಕ್ಯಶೈಲಿಗೆ ಮತ್ತಷ್ಟು ಶೋಭಾತಿಶಯವನ್ನುಂಟುಮಾಡು ತಿದ್ದಿತೋ, ಅರ್ಜುನನ ರಥಾಗ್ರದಲ್ಲಿದ್ದ ಯಾವ ದಿವ್ಯಮೂರ್ತಿಯನ್ನು ನೋ ಡಿದಮಾತ್ರದಿಂದ, ಕುರುಕ್ಷೇತ್ರದಲ್ಲಿ ಹತರಾದವರೆಲ್ಲರೂ ಆ ಭಗವಂತ ನೊಡನೆ ಸಾರೂಪ್ಯವನ್ನು ಹೊಂದಿದರೋ, ಅಂತಹ ದೇಹವನ್ನು ಭಗವಂ ತನು ಕೊನೆಗೆ ಯಾವರೀತಿಯಲ್ಲಿ ಬಿಟ್ಟುಹೋದನು ? ಇದನ್ನು ನನಗೆ ತಿಳಿಸ ಬೇಕು” ಎಂದನು. ಅದಕ್ಕಾ ಶುಕಮುನಿಯು 14 ರಾಜೇಂದ್ರಾ! ಕೇಳು ! ಕೃಷ್ಣನು ಭೂಮ್ಯಾಕಾಶಗಳಲ್ಲಿಯೂ ಅಂತರಿಕ್ಷದಲ್ಲಿಯೂ ಉತ್ಪಾತಗಳು ಕಾಣಿಸಿದೊಡನೆ, ಸುಧರಾಸಭೆಯಲ್ಲಿ ತನ್ನೊಡನೆ ಕುಳಿತಿದ್ದ ಯಾದವರೆಲ್ಲರ ನ್ಯೂ ಕುರಿತು « ಓಯದುಕುಮಾರರೆ ! ಈಗ ದ್ವಾರಕೆಯಲ್ಲಿ ಅತಿಭಯಂಕ ರಗಳಾದ ಮಹೋತ್ಸಾತಗಳು ವಿಶೇಷವಾಗಿ ಕಾಣಿಸುತ್ತಿರುವುವು. ಇವೆಲ್ಲ ವೂ ಯಾದವರಿಗೆ ನಾಶವನ್ನು ಸೂಚಿಸುತ್ತಿರುವುವು. ಇನ್ನು ಮೇಲೆ ನಾವು ಮುಹೂರ್ತಮಾತ್ರವೂ ಇಲ್ಲಿ ನಿಲ್ಲಬಾರದು. ಆದುದರಿಂದ ನಮ್ಮ ಕಡೆಯ 168