ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೨೧ ಅಧ್ಯಾ, ೨.] ಏಕಾದಶಸ್ಕಂಧವು. ೨೪೨೧ ++ಭಗವದ್ಭಕ್ತರ ಲಕ್ಷಣಗಳು.++ ಈ ಪ್ರಶ್ನೆಗೆ ಆ ಮುನಿಗಳಲ್ಲಿ ಎರಡನೆಯವನಾದ ಹರಿಯೆಂಬವನು ಉತ್ತರವನ್ನು ಹೇಳತೊಡಗಿ ಓ ನಿಮಿರಾಜೇಂದ್ರಾ! ಯಾವನು ಸಮಸ್ತ ಭೂತಗಳನ್ನೂ, ತನ್ನನ್ನೂ , ಪರಮಾತ್ಮ ಬುದ್ಧಿಯಿಂದಲೇ ನೋಡುವನೋ, ಮತ್ತು ಸಮಸ್ತಭೂತಗಳಿಗೂ ಆ ಪರಮಾತ್ಮನೇ ಆಧಾರನೆಂಬುದನ್ನು ತಿಳಿ ದಿರುವನೋ ಅವನು ಭಾಗವತರಲ್ಲಿ ಉತ್ತಮನು. ಹಾಗೆ ಆ ಭಗವಂತನನ್ನು ಸತ್ಯಶರೀರಕನೆಂದು ತಿಳಿಯದೆ, ಸಾಮಾನ್ಯದೈವವೆಂದು ಭಾವಿಸಿ, ಆ ದೇವ ತಾಬುದ್ದಿಯಿಂದ ಅವನಲ್ಲಿ ಪ್ರೇಮವನ್ನೂ, ಅವನ ಅತ್ರಿತರಾದ ಭಾಗವತ ರಲ್ಲಿ ಸ್ನೇಹಬುದ್ದಿಯನ್ನೂ , ಅಜ್ಞರಲ್ಲಿ ಕನಿಕರವನ್ನೂ, ಶತ್ರುಗಳಲ್ಲಿ ಸದಾ ಸೀನ್ಯವನ್ನೂ ತೋರಿಸುವನೋ, ಅಂತವನು ಭಾಗವತರಲ್ಲಿ ಮಧ್ಯಮನು. ಯಾವನು ಭಗವಂತನ ಆರ್ಚಾರೂಪದಲ್ಲಿ ಮಾತ್ರ ದೇವತಾಬುದ್ಧಿಯನ್ನಿಟ್ಟು, ಅದಕ್ಕೆ ಶ್ರದ್ಧೆಯಿಂದ ಪೂಜಾರಿಗಳನ್ನೊಪ್ಪಿಸುತ್, ಭಗವದ್ಭಕ್ತರಲ್ಲಿಯೂ, ಗೋವು ಮೊದಲಾದ ಇತರಪ್ರಾಣಿಗಳಲ್ಲಿಯೂ ಅ೦ತಹರವಬುದ್ಧಿಯಿಡ ಬರುವನೋ, ಅಂತವನು ಮೂಢಭಕ್ತನೆನಿಸುವನು. ಹೀಗಿಲ್ಲದೆ ಯಾ ವನು, ತನ್ನ ಇಂದ್ರಿಯಗಳಿಂದ ಇವಿಷಯಗಳನ್ನಾಗಲಿ, ಅನಿಷ್ಯವಿಷ ಯಗಳನ್ನಾಗಲಿ ಅನುಭವಿಸುವಾಗಲೂ, ಅವುಗಳಲ್ಲಿ ಆಶೆಯನ್ನಾಗಲಿ, ಜಿಹಾ ಸೆಯನ್ನಾಗಲಿ ತೋರಿಸದೆ, ಅವೆಲ್ಲವೂ ವಿಷ್ಣು ಮಾಯೆಯೆಂಬ ಭಾವದಿಂದ, ನಿರ್ವಿಕಾರನಾಗಿರುವನೋ ಅವನು ಭಾಗವತರಲ್ಲಿ ಉತ್ತಮನು. ರಾಜೇಂ ದ್ರಾ ! ದೇಹಕ್ಕೆ ಉತ್ಪತ್ತಿವಿನಾಶಗಳೂ, ಪ್ರಾಣಕ್ಕೆ ಹಸಿವೂ, ಮನಸ್ಸಿಗೆ ಭಯವೂ, ಬುದ್ಧಿಗೆ ತೃಪೆಯೂ, ಇಂದ್ರಿಯಗಳಿಗೆ ಶ್ರಮವೂ, ಸಹಜಧರ ಗಳಾಗಿರುವುವು. ಯಾವ ಮನುಷ್ಯನು ಈ ಪ್ರಾಕೃತಧರಗಳಿಂದ ಮೋಹ ಗೊಳ್ಳದೆ, ಹರಿಧ್ಯಾನಪರನಾಗಿರುವನೋ ಅವನು ಉತ್ತಮಭಕ್ತನು. ಯಾವನು ಮನಸ್ಸಿನಲ್ಲಿ ಕಾಮಕ್ಕೆ ಮೂಲಭೂತಗಳೆನಿಸಿದ ಕರ ಬೀಜಗಳಿಗೆ ಅವಕಾಶವನ್ನು ಕೊಡದೆ, ಆ ಭಗವಂತನನ್ನೇ ಗತಿಯೆಂದು ನಂಬಿರುವನೋ ಅವನು ಉತ್ತಮಭಕ್ತನು. ಯಾವನಿಗೆ ತನ್ನ ಕುಲದಿಂದಾಗಲಿ, ಕರಗಳಿಂದಾಗಲಿ, ವರ್ಣಾಶ್ರಮಧರಗಳಿಂದಾಗಲಿ, ಜಾತಿಯಿಂದಾಗಲಿ,