ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೬೮ ಶ್ರೀಮದ್ಭಾಗವತರು [ಅಧ್ಯಾ. ೩೦. ಆ ವನಪ್ರದೇಶಕ್ಕೆ ಬಂದನು. ಓ ಪರೀಕ್ಷಿದ್ರಾಜಾ ! ಹಿಂದೆ ಬ್ರಾಹ್ಮಣಶಾ ಪದಿಂದ ಯಾದವಕುಲನಾಶಕ್ಕಾಗಿ ಸಾಂಬನೆಂಬ ಯಾದವನ ಗರ್ಭದಲ್ಲಿ ಒಂದು ಮುಸಲವು ಹುಟ್ಟಿದುದಾಗಿಯೂ, ಅದನ್ನು ಯಾದವರು ಗಂಧ ದಂತೆ ಅರೆದು ತೇಲುಬಿಟ್ಟುದಾಗಿಯೂ, ಅದರಲ್ಲಿದ್ದ ಒಂದು ಉಕ್ಕಿನ ಮೊಳೆಯನ್ನು ಮಾತ್ರ ಅಲ್ಲಿಯೇ ಬಿಸುಟುಹೋದುದಾಗಿಯೂ ಹೇಳಿದ್ದೆ ನಲ್ಲವೆ? ಆ ಉಕ್ಕಿನ ಮೊಳೆಯ) ಈ ಬೇಡನ ಕೈಗೆ ಸಿಕ್ಕಿದುದರಿಂದ, ಅದನ್ನೇ ಅವನು ತನ್ನ ಬಾಣದ ಅಲಗಾಗಿ ಮಾಡಿಟ್ಟಿದ್ದನು. ಆದೇಬಾಣವನ್ನು ಕೈಯಲ್ಲಿ ಹಿಡಿದಿದ್ದ ಆ ಬೇಡನು, ಆ ವನಪ್ರದೇಶದಲ್ಲಿ ಸುತ್ತುತ್ತ ಬರು ವಾಗ, ದೂರದಿಂದ ಶ್ರೀಕೃಷ್ಣನು ಕುಳಿತಿದ್ದುದನ್ನು ಕಂಡನು. ವಕ್ರವಾ ಗಿದ್ದ ಆ ಭಗವಂತನ ಪಾದವು, ಆ ಬೇಡನಿಗೆ ಒಂದು ಮೃಗದ! ಆಕಾರವಾಗಿ ಕಾಣಿಸಿದುದರಿಂದ, ಬೇಡನು ಆಂದೊಂದು ಮೃಗವೆಂದು ಭ್ರಮಿಸಿ, ತನ್ನ ಕೈಯಲ್ಲಿದ್ದ ಬಾಣವನ್ನು ಆ ಪಾದಕ್ಕೆ ಗುರಿಯಿಟ್ಟು ಹೊಡೆದನು. ಆಮೇಲೆ ಸಮೀಪಕ್ಕೆ ಬಂದು,ಚತುರ್ಭುಜವುಳ್ಳ ಆ ದಿವ್ಯಮೂರ್ತಿಯನ್ನು ಕಂಡಾಗ, ಅವನಿಗೆ ಭಯದಿಂದ ಮೈನಡುಗಿತು. ತಾನು ಮಾಡಿದ ಮಹಾಪರಾಧಕ್ಕಾಗಿ ಪಶ್ಚಾತ್ತಾಪಪಟ್ಟು, ದುಃಖದಿಂದ ತತ್ತಳಿಸುತ್ತ, ಆ ಭಗವಂತನ ಪಾದಗಳ ಮೇಲೆ ಬಿದ್ದು ದೈನ್ಯದಿಂದ ಹೀಗೆಂದು ಪ್ರಾರ್ಥಿಸುವನು. ಓ ಪುಣ್ಯಕೀ ರ್ತಿ ! ಮಧುಸೂದನಾ ! ಪಾಪಿಯಾದ ನಾನು ತಿಳಿಯದೆ ಮಾಡಿದ ಈ ನನ್ನ ಅಪರಾಧವನ್ನು ಕ್ಷಮಿಸಬೇಕು. ಯಾವನ ಸ್ಮರಣಮಾತ್ರವೇ ಮನು ಹ್ಯರಿಗೆ ಅಜ್ಞಾನಾಂಧಕಾರವನ್ನು ನೀಗಿಸತಕ್ಕದೆಂದು ಹೇಳುವರೋ ! ಅಂತಹ 'ಪರಮಪುರುಷನಾದ ನಿನ್ನಲ್ಲಿಯೇ ನಾನು ಮಹಾಪರಾಧವನ್ನು ಮಾಡಿದೆನು. ಆದುದರಿಂದ ೬ ವೈಕುಂಠಾ ! ಮೃಗಗಳನ್ನು ಕೊಂದು ಪಾಪಜೀವನದಿಂದಲೇ ಕಾಲವನ್ನು ಕಳೆಯುತ್ತಿರುವ ನನ್ನನ್ನು ಈಗಲೇ ನೀನು ನಿನ್ನ ಕೈಯಿಂದ ಸಂಹರಿಸಿ, ಮುಂದೆಯಾದರೂ ನನ್ನಿಂದ ಇಂತಹ ದುರತಿಕ್ರಮವು ನಡೆಯದಂತೆ ಮಾಡು ! ಬ್ರಹ್ಮ ರುದ್ರಾದಿದೇವಶ್ರೇಷ್ಠ ರಾಗಲಿ, ಬ್ರಹ್ಮಪುತ್ರರಾದ ಮರೀಚಿ ಮೊದಲಾದವರಾಗಲಿ, ವೇದವಿದ ರಾದ ಮಹರ್ಷಿಗಳಾಗಲಿ, ನೀನು ಆಗಾಗ ನಿನ್ನ ಸಂಕಲ್ಪಾಥೀನವಾಗಿ ಪರಿ