ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ ೩೦] ಏಕಾದಶಸ್ಕಂಧವು. ೨೬೩೯ ಗ್ರಹಿಸತಕ್ಕ ರೂಪಗಳನ್ನು ಹೀಗೆಂದು ನಿರ್ಣಯಿಸಿ ತಿಳಿಯಲಾರರು. ಏ ಕೆಂದರೆ, ಅವರೂ ನಿನ್ನ ಮಾಯೆಯಿಂದ ಮೋಹಿತರಾಗಿ, ಕಣ್ಣು ಕಾಣದವ ರಂತೆ ಕಳವಳಿಸುವರು. ಹೀಗಿರುವಾಗ ನೀಚಜನ್ಮದಲ್ಲಿ ಹುಟ್ಟಿದ ನಮ್ಮಂ ತವರ ಪಾಡೇನು ? ನಿನ್ನ ಮಾಯೆಯಿಂದಲೇ ಮೋಹಿತನಾಗಿ ನಾನು ಅಜ್ಞಾನದಿಂದ ಮಾಡಿದ ಈ ಅಪರಾಧವನ್ನು ಕ್ಷಮಿಸಬೇಕು” ಎಂದನು. ಆಗ ಭಗವಂತನು ಆ ಬೇಡನನ್ನು ನೋಡಿ, ಮಂದಹಾಸಪೂರೈಕ ವಾಗಿ ಓ ಜರಾ ! ಭಯಪಡಬೇಡ! ಏಳು: ನನ್ನ ಸಂಕಲ್ಪದಿಂದಲೇ ಈ ಕಾರವು ನಡೆದಿರುವುದು. ಆದುದರಿಂದ ಇದರಲ್ಲಿ ನಿನ್ನ ದೋಷವೇನೂ ಇರುವುದಿಲ್ಲ! ಇದೋ ! ಈಗ ನಾನು ನಿನಗೆ ಪುಣ್ಯಪುರುಷರಿಗೆ ಲಭಿಸತಕ್ಕ ಸ್ವರ್ಗವನ್ನು ಅನುಗ್ರಹಿಸಿರುವೆನು. ಇನ್ನು ನೀನು ಹೊರಡಬಹುದು” ಎಂ ದನು. ಈ ಭಗವದಾಜ್ಞೆಯನ್ನು ಕೇಳಿದೊಡನೆ ಆ ಬೇಡನು, ಸೈಜ್ಞಾ ಶರೀರಿಯಾದ ಕೃಷ್ಣನಿಗೆ ಮೂರಾವರ್ತಿ ಪ್ರದಕ್ಷಿಣಮಾಡಿ, ಅವನ ಪಾದ ಗಳಿಗೆ ನಮಸ್ಕರಿಸಿದನು. ಇಷ್ಟರಲ್ಲಿಯೇ ಅಲ್ಲಿ ಒಂದು ದಿವ್ಯವಿಮಾನವು ಸಿದ್ಧವಾಗಿ ಬಂದು ನಿಂತಿತು. ಒಡನೆಯೇ ಬೇಡನು ಆ ವಿಮಾನದಲ್ಲಿ ಕುಳಿತು ದೇವಲೋಕವನ್ನು ಸೇರಿದನು. - ಓ ಪರೀಕ್ಷಿದ್ರಾಜಾ ! ಇಷ್ಟರಲ್ಲಿ ಕೃಷ್ಣನಿಗೆ ಸಾರಥಿಯಾಗಿದ್ದ ದಾ ರುಕನು, ತನ್ನ ಪ್ರಭುವಾದ ಕೃಷ್ಣನನ್ನು ಹುಡುಕುತ್ತಬಂದು, ತುಲಸೀ ಗಂಧಮಿಶ್ರವಾದ ವಾಯುವಿನಿಂದ ಕೃಷ್ಣನಿರುವ ಈ ಸ್ಥಳವನ್ನು ಗುರುತು ಹಿಡಿದುಕೊಂಡು, ಅಲ್ಲಿಗೆ ಬಂದು ಸೇರಿದರು. ಅಲ್ಲಿ ಒಂದಾನೊಂದು ಊರ ಳಿಯ ಮರದ ಕೆಳಗೆ, ಸೂರತೇಜಸ್ಸಿನಿಂದ ಜ್ವಲಿಸುತ್ತ,ಪುರುಷಾಕಾರವುಳ್ಳ ಪಂಚಾಯುಧಗಳಿಂದ ಪರಿವೃತನಾಗಿ ಕುಳಿತಿದ್ದ ಕೃಷ್ಣನನ್ನು ಕಂಡೊಡನೆ, ಥಟ್ಟನೆ ರಥದಿಂದ ಕೆಳಕ್ಕಿಳಿದು, ಪ್ರೇಮಾದ್ರ್ರಹೃದಯನಾಗಿ ಅನಂದಬಾ ಪ್ರವನ್ನು ಸುರಿಸುತ್ತ ಮುಂದೆಬಂದು, ಆ ಕೃಷ್ಣನ ಪಾದಗಳಮೇಲೆ ಬಿದ್ದು ನಮಸ್ಕರಿಸಿ ಹೀಗೆಂದು ಪ್ರಾರ್ಥಿಸುವನು ಓ ಪ್ರಭ ! ಇದುವರೆಗೆ ನಿನ್ನ ಪಾದಾರವಿಂದದರ್ಶನವಿಲ್ಲದಿದ್ದುದರಿಂದ, ನನಗೆ ತಮಸ್ಸಿನಲ್ಲಿ ಮುಳುಗಿ ದಂತೆ ರ್ಕ, ಕಾಣದಂತಾಯಿತು. ಮನಸ್ಸಿನ ಶಾಂತಿಯೂ ತಪ್ಪಿತು.