ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬೦ ಶ್ರೀಮದ್ಭಾಗವತವು (ಅನ್ಯಾ, ೩೦, ಚಂದ್ರಶೂನ್ಯವಾದ ರಾತ್ರಿಯಲ್ಲಿ ಹೇಗೋಹಾಗೆ, ನನಗೆ ದಿಕ್ಕುಗಳೇ ತೋರ ದಂತಾದುವು” ಎಂದನು. ದಾರುಕನು ಹೀಗೆಂದು ಹೇಳುತ್ತಿರುವಾಗಲೇ, ಅವನು ಅಲ್ಲಿಗೆ ತಂದಿದ್ದ ಗರುಡಧ್ವಜವುಳ್ಳ ಕೃಷ್ಣನ ರಥವು, ಅವನು ನೋಡುತಿದ್ದ ಹಾಗೆಯೇ ಹೂಡಿದ್ದ ಕುದುರೆಗಳೊಡನೆ ಗಂಭೀರಧ್ವನಿಯಿಂದ ಆಕಾಶಕ್ಕೆ ಹಾರಿತು. ಇತ್ತಲಾಗಿ ಪರುಷಾಕಾರದಿಂದ ಕೃಷ್ಣನನ್ನು ಸೇವಿಸುತ್ತಿದ್ದ ಶಂಖಚಕ್ರಾದ್ಯಾ ಯುಧಗಳೂ ಆ ರಥವನ್ನು ಹಿಂಬಾಲಿಸಿ ಅಂತರಿಕ್ಷಕ್ಕೆ ಹಾರಿ, ಆದೃಶ್ಯವಾದುವು. ಇವೆಲ್ಲವನ್ನೂ ನೋಡಿ ಆಶ್ಚರದಿಂದ ಸಬ್ನಾಗಿ ನಿಂತಿದ್ದ ದಾರುಕನನ್ನು ಕರೆದು ಭಗವಂತನು ಹೀಗೆಂದು ಹೇಳವನು. ಓ ಸೂತಾ ! ದಾರುಕಾ ! ಇನ್ನು ನೀನು ದ್ವಾರಕೆಗೆ ಹೊರಡು ! ನಮ್ಮ ಜ್ಞಾತಿಗಳಾದ ಯಾದವರ ಮರಣವನ್ನೂ, ಬಲರಾಮಾಣ ವನ್ನೂ, ಈಗ ನನ್ನ ಸ್ಥಿತಿ ಯನ್ನೂ, ಅಲ್ಲಿರುವ ನನ್ನ ಬಂಧುಗಳಿಗೆ ತಿಳಿಸು ! ಮತ್ತು ಅವರಿಗೆ ತಮ್ಮ ತಮ್ಮ ಬಂಧುಗಳೊಡನೆ ಈಗಲೆ ದ್ವಾರಕೆಯನ್ನು ಬಿಟ್ಟು ಹೊರಟು ಹೋಗಬೇಕೆಂದು ಹೇಳು ! ಏಕೆಂದರೆ, ನಾನು ಯಾದವ ಪುರಿಯನ್ನು ಬಿಟ್ಟುಹೋದೊಡನೆ, ಸಮುದ್ರವು ಉಕ್ಕಿ ಬಂದು, ಆ ಪಟ್ಟಣ ವನ್ನು ಕೊಚ್ಚಿ ಸಿಬಿಡುವುದು. ಆದುದರಿಂದ ಅಲ್ಲಿನ ನಿವಾಸಿಗಳೆಲ್ಲರೂ ತಮ್ಮ ತಮ್ಮ ಪರಿವಾರಸಾಮಗ್ರಿಗಳನ್ನು ಸಾಗಿಸಿಕೊಂಡು, ನನ್ನ ತಂದೆತಾಯಿಗ ಇನ್ನೂ ಸಂಗಡ ಕರೆದುಕೊಂಡು, ಅರ್ಜುನನಿಂದ ರಕ್ಷಿತರಾಗಿ, ಇಂದ್ರ ಪ್ರಸ್ಥಕ್ಕೆ ಹೋಗಿಸೇರಲಿ ! ನೀನು ಇನ್ನು ಮೇಲೆ ಭಾಗವತಧಮ್ಮವನ್ನು ಹಿಡಿದು, ನನ್ನಲ್ಲಿ ಭಕ್ತಿಯೋಗನಿಷ್ಠನಾಗಿ, ವಿಷಯಾಸಕ್ತಿಯನ್ನು ನೀಗಿ, ಈ ಜಗತ್ತೆಲ್ಲವೂ ನನ್ನ ಮಾಯೆಯಿಂದ ಕಲ್ಪಿತವೆಂಬುದನ್ನು ತಿಳಿದು, ರಾಗಾದಿದೋಷರಹಿತನಾಗಿ ಶಾಂತಿಯಿಂದಿರು! ” ಎಂದನು. ಇವನ್ನು ಕೇಳಿ ದಾರುಕನು, ಕೃಷ್ಣನಿಗೆ ಬಾರಿಬಾರಿಗೂ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುತ್ತ, ಅವನ ಪಾದಗಳನ್ನು ತನ್ನ ತಲೆಗೆ ಒತ್ತಿಕೊಳ್ಳುತ್ತ, ಕೊನೆಗೆ ಹುಲುರಿಂದ ಆ ಸ್ಥಳವನ್ನು ಬಿಟ್ಟು, ದ್ವಾರಕೆಗೆ ಬಂದನು. ಇದು ಮೂವ ಶ್ರನದ ಉಧ್ಯಾಯವು