ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೧ ಅಧ್ಯಾ. ೩೧.] ಏಕಾದಶಸ್ಕಂಧವು ( ಶ್ರೀಕೃಷ್ಣನು ಭೂಲೋಕವನ್ನು ಬಿಟ್ಟು, ನಿಜಸ್ಥಾನ * ವಾದ ವೈಕುಂಠವನ್ನು ಸೇರಿದುದು. *** ಓ ಪರೀಕ್ಷಿದ್ರಾಜಾ ! ಕೃಷ್ಟಾಜ್ಞೆಯಿಂದ ದಾರುಕನು ಅಲ್ಲಿಂದ ಹೊರಟು ಹೋದಕೂಡಲೆ, ಅಲ್ಲಿಗೆ, ಚತುರಖಗ್ರಹ್ಮನೂ, ಪಾಶ್ವತೀ ಸಮೇತನಾದ ರುದ್ರನೂ, ಇ೦ ಪ್ರಾಣ *ಾಲಕರೂ, ಪಿತೃದೇವತೆಗಳೂ, ಸಿದ್ಧ, ಗಂಧ, ವಿಧ್ಯಾಧರ, ಯಕ್ಷ, ರಾಕ್ಷಸ, ಪನ್ನಗ, ಚಾರಣ, ಗರುಡ, ಕಿನ್ನರಾದಿದೇವಜಾತಿಯವರೂ, ಅಪ್ಪರಸ್ಸುಗಳೂ, ಶ್ರೀಕೃಷ್ಣನಿಲ್ಯಾಣ ವನ್ನು ನೋಡಬೇಕೆಂಬ ಕುತೂಹಲದಿಂದ, ಗಾನನರ್ತಗಳೊಡನೆ ಆ ಭಗ ವಂತನ ಗುಣಗಳನ್ನು ಕೊಂಡಾಡತ್ತ, ಪರಮಸಂತೋಷದಿಂದ ಹೊರ ವರು. ವಿಮಾನಾರೂಢರಾಗಿ ಕಾಶದಿಂದ ಬರುವಾಗಲೇ ಕೃಷ್ಣನಮೇಲೆ ಪುಷ್ಪವರ್ಷವನ್ನು ಕರೆದು, ಪರಮಭಕ್ತಿಯಿಂದ ಜಯಘೋಷವನ್ನು ಮಾಡುತ್ತ ಸಮೀಪಕ್ಕೆ ಬಂದು ನಿಂತರು. ಆಗ ಕೃಷ್ಣನು ತನ್ನ ವಿಭತಿಗೆ ಳೆನಿಸಿದ ಆ ಬ್ರಹ್ಮಾದಿದೇವತೆಗಳೆಲ್ಲರನ್ನೂ ಒಂದಾವರ್ತಿ ಪ್ರಸನ್ನ ದೃಷ್ಟಿ ಯಿಂದ ನೋಡಿ, ತಾನು ಯಾರ ಅಂಶದಿಂದ ಅವತರಿಸಿದನೋ, ಆ ಪರ ಮಾತ್ಮನಲ್ಲಿ ಏಕೀಭವಿಸಿದಂತೆ ಮನಸ್ಸಿನಲ್ಲಿ ಧ್ಯಾನಿಸಿ, ಕಮಲದಳದಂತಿರುವ ಕಣ್ಣುಗಳನ್ನು ಮುಚ್ಚಿಕೊಂಡನು, ಮತ್ತು ಲೋಕಮೋಹನವಾಗಿಯೂ, ಧ್ಯಾನಧಾರಣಗಳಿಗೆ ಶುಭಾಶ್ರಯಭೂತವಾಗಿಯೂ ಇದ್ದ ತನ್ನ ಮನುಷ್ಯ ದೇಹವನ್ನು + ಆಗೈಯಿಯೆಂಬ ಯೋಗಧಾರಣೆ ಯಿಂದ ದಹಿಸದಂತೆ, ಆ ದೇಹದೊಡನೆಯೇ ತನ್ನ ನಿಜಸ್ಥಾನವಾದ ವೈಕುಂಠವನ್ನು ಸುಖವಾಗಿ ಪ್ರವೇಶಿಸಿದನು. ಆಗ ಆಕಾಶದಲ್ಲಿ ದೇವದುಂದುಭಿಗಳು ಮೊಳಗಿದುವು. ಪುಷ್ಪವೃಷ್ಟಿಯು ಸುರಿಯಿತು. ಅದುವರೆಗೆ ಭೂಮಿಯಲ್ಲಿ ನೆಲೆಗೊಂಡಿದ್ದ ಸತ್ಯ, ಧಮ್ಮ, ಧೃತಿ, ಕೀರ್ತಿ, ಇವೆಲ್ಲವೂ ಆ ಕೃಷ್ಣನು ಹಿಂಬಾಲಿಸಿ ಹೊರ ಟುಹೋದುವು. ಹೀಗೆ ಕೃಷ್ಣನು ತನ್ನ ಗತಿಯು ಯಾರಿಗೂ ತಿಳಿಯದಂತೆ

  • ಸ್ವಚ್ಛಾಮರಕವಳ್ಳ ಯೋಗಿಕು.ತಮ್ಮ ದೇಹವನ್ನು ಆತ್ಮೀಯಿಯೆಂಬ ಯೋಗ ಧಾರಣೆಯಿಂದ ದಹಿಸಿ ಲೋಕಾಂತರವನ್ನು ಹೊಂದುವರು ಭಗವಂತನು

ಹಾಗೆ ದಹಿಸದೆಯೇ ತನ್ನ ಶರೀರವನ್ನು ಅದೃಶ್ಯವಾಗಿ ಮಾಡಿದವನೆಂದು ಭಾವನ.