ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೭೨ ಶ್ರೀಮದ್ಭಾಗವತವು [ಅಧ್ಯಾ, ೩೧, ನಿಜಸ್ಥಾನಕ್ಕೆ ಪ್ರವೇಶಿಸಿದಾಗ, ಅಲ್ಲಿದ್ದ ಬ್ರಹ್ಮಾದಿದೇವತೆಗಳೆಲ್ಲರೂ ಅವನ ದೇಹವೇನಾಯಿತೆಂದು ತಿಳಿಯದೆ ಅಶ್ಚರಭರಿತರಾಗಿದ್ದರು. ಮನು ಹ್ಯರು ಮೇಘದಿಂದ ಹೊರಟ ಮಿಂಚಿನ ಗತಿಯನ್ನು ತಿಳಿಯಲಾರದಂತೆ, , ಆ ದೇವತೆಗಳೂ, ಶ್ರೀ ಕೃಷ್ಣನ ಯೋಗಗತಿಯನ್ನು ತಿಳಿಯಲಾರದೆ, ಆಶ್ಚರ ಭರಿತರಾಗಿ ನೋಡುತಿದ್ದು, ಆಮೇಲೆ ಆ ಶ್ರೀಕೃಷ್ಣನ ಗುಣಗಳನ್ನು ಕೊಂಡಾಡುತ್ತ ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿಹೋದರು. ಓ ಪರೀ ಕ್ಷಿದ್ರಾಜಾ ! ಪರಮಪುರುಷನು ಹೀಗೆ ಯಾದವಾದಿಮನುಷ್ಯ ದೇಹದಿಂದ ಹುಟ್ಟಿ, ಆ ಜನ್ಮವನ್ನು ಬಿಟ್ಟಂತೆ ತೋರಿಸುವ ಚೇಷ್ಟೆಗಳೆಲ್ಲವೂ, ನಾಟಕ ದಲ್ಲಿ ವೇಷಧಾರಿಗಳಾದ ನಟರ ಚೇಷ್ಮೆಯಂತೆ ಆ ಭಗವಂತನ ಮಾಯಾ ವಿಡಂಬನಗಳೆಂದೇ ತಿಳಿ ! ಆ ಪರಮಪುರುಷನು, ಚೇತನಾಚೇತನಾತ್ಮಕ ವಾದ ಈ ಜಗತ್ತನ್ನು ತಾನೇ ಸೃಷ್ಟಿಸಿ, ತಾನೂ ಅವುಗಳಲ್ಲಿ ಅಂತರಾಮಿ ಯಾಗಿ ಆಯಾಕಾವ್ಯಗಳಲ್ಲಿ ಪ್ರೇರಿಸುತ್ತಿದ್ದು, ಕೊನೆಗೆ ಅವೆಲ್ಲವನ್ನೂ ತನ್ನ ಲ್ಲಿಯೇ ಉಪಸಂಹರಿಸಿಟ್ಟುಕೊಳ್ಳುವನು. ಈ ನಡುವೆ ತನ್ನ ಅಂಶಗಳಿಂದ ತಾನೂ ಒಂದೊಂದವತಾರವನ್ನೆತ್ತಿ, ನಾನಾವಿಧಲೀಲೆಗಳನ್ನು ತೋರಿಸು ವನು. ಪ್ರಳಯಕಾಲದಲ್ಲಿ ಕೇವಲಸ್ವಾತ್ಮಾನುಭವದಿಂದ ಜಗದ್ಯಾಪಾರಗ ಳನ್ನು ಬಿಟ್ಟು ಸುಮ್ಮನಿರುವನು. ಇಂತಹ ಅಪಾರಮಹಿಮೆಯುಳ್ಳ ಭಗ ವಂತನಲ್ಲಿ ಇದೇನೂ ಆಶ್ಚರವಲ್ಲವೆಂದು ತಿಳಿ ! ಓ ಪರೀಕ್ಷಿದ್ರಾಜಾ ! ಆ ಭಗ ವಂತನ ಅಪಾರಮಹಿಮೆಯನ್ನೂ , ಆಶ್ಚರಚೇಷ್ಟಿತಗಳನ್ನೂ ಎಷ್ಟು ಹೇಳಿ ದರೆ ತಾನೇ ತೀರುವುದು? ಈ ಕೃಷ್ಣಾವತಾರದಲ್ಲಿಯೇ ಆತನು,ಯಮಲೋ ಕಕ್ಕೆ ಸಾಗಿಸಲ್ಪಟ್ಟಿದ್ದ ತನ್ನ ಗುರುಪುತ್ರನನ್ನು ಬದುಕಿಸಿ, ಅದೇ ಮನುಷ್ಯ ದೇಹದಿಂದ ಹಿಂತಿರುಗಿ ಕರೆತಂದನು. ನಿನ್ನ ತಾಯಿಯ ಗರ್ಭದಲ್ಲಿ ಅಶ್ವ ತಾ ಮನ ಬ್ರಹ್ಮಾಸ್ತ್ರದಿಂದ ದಗ್ಧನಾಗುತಿದ್ದ ನಿನ್ನನ್ನು ರಕ್ಷಿಸಿದನು ಬಾಣಾಸುರಯುದ್ಧವು ನಡೆದಾಗ, ಅದರಲ್ಲಿ ಮೃತ್ಯುವಿಗೂ ಮೃತ್ಯುವಾದ (ಯಮನನ್ನು ಜಯಿಸಿದ) ರುದ್ರನನ್ನು ಜಯಿಸಿದನು. ತನ್ನ ಪಾದಗಳಿಗೆ ಬಾಣವನ್ನು ಬಿಟ್ಟು ಮಹಾಪರಾಧವನ್ನು ಮಾಡಿದ 'ಬೇಡನಿಗೆ ಸಶರೀರ ಸ್ವರ್ಗವನ್ನು ಅನುಗ್ರಹಿಸಿದರು. ಇಂತಹ ಅಪಾರಮಹಿಮೆಯುಳ್ಳ ಭಗ