ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

944 ಅದ್ಯಾ. ೩೧.] ಏಕಾದಶ ಧಂವು. ವಂತನ ವ್ಯಾಪಾರವನ್ನು ಹೀಗೆಂದು ನಿರ್ಣಯಿಸಿ ತಿಳಿಯುವುದಕ್ಕೆ ಯಾರು ತಾನೇ ಸಮರರು ? ಅವನು ಹಾಗೆ ಸತ್ವಶಕ್ತನಾಗಿರುವಾಗ, ಭೂಲೋಕ ದಲ್ಲಿಯೇ ಸ್ಥಿರವಾಗಿ ಆ ಕೃಷ್ಣರೂಪದಿಂದ ನಿಂತಿರಬಾರದೇಕೆ ?” ಎಂದು ಕೇಳುವೆಯಾ ? ಓ ರಾಜಾ ! ಅವನು ಸಶಕ್ತನಾಗಿ, ತಾನೇ ಸೃಷ್ಟಿ ಸ್ಥಿತಿ ಲಯಗಳನ್ನು ನಿರಹಿಸಬಲ್ಲವನಾಗಿದ್ದರೂ, ಮನುಷ್ಯ ದೇಹವು ಎಂದಿದ್ದರೂ ಮರಣಶೀಲವೆಂಬದನ್ನು ಲೋಕಕ್ಕೆ ತೋರಿಸುವುದಕ್ಕಾಗಿ, ತಾನು ಕೈಕೊಂಡಿದ್ದ ಆ ಮನುಷ್ಯರೂಪವನ್ನು ಬಹುಕಾಲದವರೆಗೆ ಸ್ಥಿರವಾಗಿ ನಿಲ್ಲಿಸುವುದಕ್ಕೆ ಇಷ್ಟಪಡದೆ ಹೋದನು. ಓ ಪರೀಕ್ಷಿದಾಜಾ ! ಯಾವನು ಪ್ರಾತಃಕಾಲದಲ್ಲಿ ನಿದ್ರೆಯಿಂದೆದ್ದ ಕೂಡಲೆ ಮೇಲೆ ಹೇಳಿದಂತೆ ಶ್ರೀಕೃಷ್ಣ ನು ಕೈಕೊಂಡ ವಿಲಕ್ಷಣವಾದ ಗತಿಯನ್ನು ಭಕ್ತಿಯಿಂದ ಕೀರ್ತಿಸುವನೋ, ಅವನೂಕೂಡ ದೇಹಾವಸಾನದಲ್ಲಿ ಆ ಭಗವಂತನ ಗತಿಯನ್ನೇ ಹೊಂದುವನು. ಅತ್ತಲಾಗಿ ದಾರುಕನು ದ್ವಾರಕೆಗೆ ಹೋಗಿ, ಅಲ್ಲಿ ಉಗ್ರಸೇನವಸುದೇವ ರನ್ನು ಕಂಡು, ಕೃಷ್ಣವಿಯೋಗದುಃಖದಿಂದ ಕಣ್ಣೀರುಬಿಡುತ್ತ ಅವರ ಪಾದಗಳಿಗೆ ನಮಸ್ಕರಿಸಿ, ಯಾದವರೆಲ್ಲರ ಮರಣವನ್ನೂ ಯಥಾಕ್ರಮ ವಾಗಿ ತಿಳಿಸಿದನು. ಈ ವೃತ್ತಾಂತವನ್ನು ಕೇಳಿದೊಡನೆ ಆ ದ್ವಾರಕೆಯ ಲ್ಲಿದ್ದವರೆಲ್ಲರೂ ದುಃಖದಿಂದ ಮೂರ್ಛಿತರಾದರು. ಮತ್ತು ಶ್ರೀ ಕೃಷ್ಣನೂ ತಮ್ಮನ್ನು ಬಿಟ್ಟು ಹೋಗುವನೆಂಬ ಸೂಚನೆಯನ್ನು ಕೇಳಿ, ದುಃಖದಿಂದ ಬಾಯಿಬಡಿದುಕೊಳ್ಳುತ್ತ, ತಮ್ಮ ಜ್ಞಾತಿಗಳು ಮೃತರಾಗಿ ಬಿದ್ದಿದ್ದ ಸ್ಥಳಕ್ಕೆ ಬಂದು ಸೇರಿದರು. ದೇವಕೀದೇವಿಯೂ, ರೋಹಿಣಿಯೂ, ವಸುದೇವನೂ, ಆಹುಕನೂ, ಇನ್ನೂ ಕೆಲವು ಯಾದವಪ್ರಧಾನರೂ ಪ್ರಭಾಸತೀರ್ಥಕೆ, ಬಂದು, ಅಲ್ಲಿ ಬಲರಾಮನನ್ನಾಗಲಿ, ಶ್ರೀಕೃಷ್ಣನನ್ನಾಗಲಿ ಕಾಣದೆ, ದುಃಖದಿಂದ ಮೂರ್ಛಿತರಾದರು ವಸುದೇವಾದಿಯಾದವರೆಲ್ಲರೂ ಭಗವಂ ತನ ವಿಯೋಗವನ್ನು ಸಹಿಸಲಾರದೆ, ಅಲ್ಲಿಯೇ ಪ್ರಾಣಗಳನ್ನು ತ್ಯಜಿಸಿ ದರು. ಇವರೊಡನೆ ಬಂದಿದ್ದ ಯಾದವಸಿಯರೆಲ್ಲರೂ, ಅಲ್ಲಿ ಮೃತಿಹೊಂ ಬಿದ ತಮ್ಮ ತಮ್ಮ ಪತಿಗಳ ದೇಹವನ್ನಾಲಿಂಗಿಸಿ, ಆ ಪತಿದೇಹದೊಡನೆ ಚಿತೆ ಯನ್ನೇರಿ ಸಹಗಮನಮಾಡಿದರು. ಹಾಗೆಯೇ ಬಲರಾಮ, ವಸುದೇವ,