ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೨೨ ಶ್ರೀಮದ್ಭಾಗವತವು [ಅಧ್ಯಾ, ೩, ದೇಹದಲ್ಲಿ ಅಹಂಭಾವವು ಹುಟ್ಟದಿರುವುದೋ ಅಂತವನು ಭಗವಂತನಿಗೆ ವಿಶೇಷಪ್ರೇಮಪಾತ್ರನು. ಯಾವನಿಗೆ ತಾನೆಂದೂ, ಇತರರೆಂದೂ ತನ್ನದೆಂದೂ, ಇತರರದೆಂದೂ, ಅಹಂಕಾರಮಮಕಾರದಿಂದುಂಟಾದ ಭೇ ದಬುದ್ಧಿಯಿಲ್ಲದೆ, ಸಮಸ್ಯಭೂತಗಳಲ್ಲಿಯೂ ಸಮಬುದ್ದಿಯೂ, ಮನಶ್ಯಾಂ ತಿಯೂ ನೆಲೆಗೊಂಡಿರುವುದೋ, ಅಂತವನು ಭಾಗವತೋತ್ತಮನು! ಅನವರ ತವೂ ಆ ಶ್ರೀಹರಿಯನ್ನೇ ಸ್ಮರಿಸುತ್ತಿರುವ ಬ್ರಹ್ಮಾದಿದೇವತೆಗಳಿಗೂ ಕೂಡ ಯಾವನ ಪಾದಾರವಿಂದವು ದುರ್ಲಭವೆನಿಸಿರುವುದೋ, ಅಂತಹ ಪಾದಾರವಿಂದವೇ ತನಗೆ ಪರಮಪ್ರಾಪ್ಯವೆಂದೂ, ಲೋಕದಲ್ಲಿ ಅದಕ್ಕಿಂತ ಲೂ ಸಾರವಾದುದು ಬೇರೊಂದಿಲ್ಲವೆಂದೂ ತಿಳಿದು ಯಾವನು ತ್ರೈಲೋ ಕ್ಯಾಧಿಪತ್ಯವೇ ತನಗೆ ಲಭಿಸುವುದಾದರೂ 'ಲಕ್ಷ್ಯಮಾಡದೆ, ಆ ಪಾದಾರವಿಂ ದವನ್ನೇ ನಿರಂತರವೂ ಭಜಿಸುತ್ತ, ನಿಮಿಷಾರವೂ ಅದನ್ನು ಬಿಟ್ಟು ಚಲಿ ಸದಿರುವನೋ, ಅಂತವನು ವೈಷ್ಟವಾಗ್ರಣಿಯನಿಸುವನು.ಓ ರಾಜೇಂದ್ರಾ! ಚಂದ್ರೋದಯವಾದಮೇಲೆ ಬಿಸಿಲಿನ ತಾಪದ ಪ್ರಸಕ್ತಿಯೇ ಬಿಟ್ಟು ಹೋ ಗುವಂತೆ, ತ್ರಿವಿಕ್ರಮಮೂರ್ತಿಯಾದ ಭಗವಂತನ ಪಾದನಖಕಾಂತಿಯೆಂ ಬ ಚಂದ್ರಿಕೆಯು ಯಾವನ ಹೃದಯದಲ್ಲಿ ತಲೆದೋರುವುದೋ, ಅಂತವನ ಮನಸ್ಸಿನಲ್ಲಿ ತಿರುಗಿ ಕಾಮತಾಪದ ಪ್ರಸಕ್ತಿಯೇ ಹುಟ್ಟಲಾರದು. ಅಷ್ಟೇಕೆ? ಮನಃಪೂರ್ವಕವಾಗಿಲ್ಲದಿದ್ದರೂ, ಬಾಯಿತಪ್ಪಿ ಒಂದಾವರ್ತಿ ಆ ಶ್ರೀಹರಿಯ ನಾಮೋಚ್ಛಾರಣವನ್ನು ಮಾಡಿದರೂಕೂಡ, ಸಮಸ್ತ ಪಾಪಗಳೂ ನಾಶಹೊಂದುವುವು. ಅಂತಹ ಶ್ರೀಮನ್ನಾರಾಯಣನ ಪಾದಾ ರವಿಂದಗಳನ್ನು ಯಾವನು ಭಕ್ತಿಪಾಶದಿಂದ ತನ್ನ ಹೃದಯದಲ್ಲಿ ದೃಢವಾ ಗಿ ಕಟ್ಟಿ ಹಿಡಿದು ನಿಲ್ಲಿಸುವನೋ, ಅಂತವನು ಭಕೋತ್ತಮನೆನಿಸುವನು. ಇಲ್ಲಿಗೆ ಎರಡನೆಯ ಅಧ್ಯಾಯವು. ++ ಚನಕಾರ್ಷಭಸಂವಾದವು. ಭಗವನ್ನಾ ಯಾತ್ರಭಾವವು, ww ತಿರುಗಿ ಜನಕರಾಜನು ಅಮಹರ್ಷಿಗಳನ್ನು ಕುರಿತು ««ಓ ಮಹಾತ್ಮರೆ! ಸತ್ಯೇಶ್ವರನಾದ ವಿಷ್ಣುವಿನ ಮಾಯೆಯೆಂಬುದು, ಎಂತಹ ಮಾಯಾವಿಗಳ