ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೧.] ಏಕಾದಶಸ್ಕಂಧನ, SUK ೬೩೫ ನಾಗುವನು. ಹೀಗೆಯೇ ಆ ಭಗವಂತನು ಆಗಾಗ ಕೈಕೊಂಡ ಅವತಾರ ಚರಿತ್ರಗಳನ್ನೂ, ಕೃಷ್ಣಾವತಾರದಲ್ಲಿ ಆತನು ಬಾಲ್ಯ, ಶೌಗಂಡ, ಯೌವ ನಾದಿದಶೆಗಳಲ್ಲಿ ಕ್ರಮವಾಗಿ ತೋರಿಸಿದ ಅದ್ಭುತಕಾರಗಳನ್ನೂ, ಈ ಶ್ರೀ ಮಬ್ಬಾಗವತಪುರಾಣದಿಂದಲೂ, ಇತರಪುರಾಣಗಳಿಂದಲೂ ಶ್ರದ್ದೆಯಿಂದ ಕೇಳಿದವನು, ಇಹಲೋಕದಲ್ಲಿ ಸಮಸ್ಯಶ್ರೇಯಸ್ಸುಗಳಿಗೂ ಭಾಗಿಯಾಗಿ, ಪರಮಹಂಸರಾದ ಮಹಾಯೋಗಿಗಳಿಗೂ ಗತಿಯೆನಿಸಿಕೊಂಡ ಆ ಭಗವಂತ ನಲ್ಲಿ ಉತ್ತಮವಾದ ಭಕ್ತಿಪರಿಪಾಕವನ್ನು ಹೊಂದುವನು. ಇದು ಮೂವ ತೊಂದನೆಯ ಅಧ್ಯಾಯವು. ಏಕಾದಶಸ್ಕಂಧವು ಸಮಾಪ್ತವು. ಶ್ರೀ ರುಕ್ಕಿಣೀ ಸತ್ಯಭಾಮಾಸಮೇತ ಶ್ರೀ ಗೋಪಾಲಕೃಷ್ಣ ಪರಬ್ರಹ್ಮಣೇ ನಮಃ. ಶ್ರೀರಸ್ತು.