ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ . ಶ್ರೀ ಕೃಷ್ಣಾಯ ಪರಬ್ರಹ್ಮಣೇ ನಮಃ ಶ್ರೀಮದ್ಭಾಗವತವು ದ್ವಾದಶ ಸ್ಕಂಧವು. ಪರೀಕ್ಷಿದ್ರಾಜನು ತಿರುಗಿ ಶುಕಮುನಿಯನ್ನು ಪ್ರಶ್ನೆ ಮಾಡುವನು. ««ಓ ಮುನೀಂದ್ರಾ ! ಯಾದವರೆಲ್ಲರೂ ಮೃತರಾಗಿ, ಶ್ರೀಕೃಷ್ಣನೂ ಈ ಭೂಮಿಯನ್ನು ಬಿಟ್ಟು ನಿಜಸ್ಥಾನಕ್ಕೆ ಹೋದಮೇಲೆ, ಚಂದ್ರವಂಶವು ಯಾರಿಂದ ಮುಂದುವರಿಯಿತೆಂಬುದನ್ನು ನನಗೆ ತಿಳಿಸಬೇಕು” ಎನಲು, ಶುಕಮುನಿಯು ಓ ರಾಜೇಂದ್ರಾ ! ಹಿಂದೆ ನಾನು (ನವಮಸ್ಕಂಧದಲ್ಲಿ) ಮುಂದೆ ನಡೆಯುವ ಪೂರುವಂಶವಿಸ್ತಾರವನ್ನು ತಿಳಿಸುವಾಗ, ಮಾರ್ಜಾರಿ ಯೆಂಬವನಿಗೆ ಶ್ರುತಶ್ರವನೇ ಮೊದಲಾಗಿ ಇಪ್ಪತ್ತು ಮಂದಿ ಪುತ್ರರು ಜನಿಸು ವುದಾಗಿ ಹೇಳಿದೆನಲ್ಲವೆ?, ಅವರಲ್ಲಿ ಪುರಂಜಯನೆಂಬವನು ಕನಿಷ್ಟನು. ಇವನು ಬೃಹದ್ರಥವಂಶದವನಾದುದರಿಂದ ಬಾರ್ಹದ್ರಥನೆಂದು ಪ್ರಸಿದ್ಧನಾಗುವ ನು. ಈ ಪುರಂಜಯನಿಗೆ ಶುನಕನೆಂಬ ಮಂತ್ರಿಯೊಬ್ಬನಿದ್ದು, ಅವನು ಸ್ವಾಮಿ ದ್ರೋಹಿಯಾಗಿ, ತನ್ನ ಪ್ರಭುವಾದ ಪುರಂಜಯನನ್ನೇ ಕೊಲ್ಲಿಸಿ ಅವನ ಮಗನಾದ ಪ್ರದ್ಯೋತನೆಂಬವನನ್ನು ರಾಜ್ಯದಲ್ಲಿರಿಸುವನು. ಆ ಪ್ರದ್ಯೋ

  • ಇಲ್ಲಿ ಮಾರ್ಜಾರಿ ಮೊದಲಾಗಿ ಪರ೦ಜಯನವರೆಗೆ ಇಪ್ಪತ್ತು ಮಂದಿರಾಜರ ಆಳ್ವಿಕೆಯು ಒಂದು ಸಾವಿರ ವರ್ಷಗಳ ಕಾಲವೆಂದು ಹಿಂದ ನವಮಸ್ಕಂಧದಲ್ಲಿ ಹೇಳಲ್ಪಟ್ಟಿದ.