ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೭ ಅಧ್ಯಾ. ೧.] ದ್ವಾದಶಸ್ಕಂಧರು. ತನಿಗೆ ಅಲಕನೆಂಬ ಮಗನಾಗುವನು. ಅವನಿಂದ ವಿಶಾಖಯೂಪನೂ, ವಿಶಾಖಯೂಪನಿಂದ ರಾಜಕನೂ, ರಾಜಕನಿಂದ ನಂದಿವರ್ಧನನೂ ಹುಟ್ಟು ವರು. ಪ್ರದ್ಯೋತನನ ಪರಂಪರೆಯವರಾದ ಬಂದ ಈ ಐದುಮಂದಿ ರಾಜರೂ, ನೂರಮೂವತ್ತೆಂಟು ವರ್ಷಗಳವರೆಗೆ ರಾಜ್ಯಭಾರಮಾಡುವರು. ಅದರಿಂದಾಚೆಗೆ ಇದೇವಂಶದಲ್ಲಿ ಕ್ರಮವಾಗಿ ಪತ್ರ ಪರಂಪರೆಯಿಂದ, ಶಿಶುನಾಗ, ಕಾಕವರ್ಣ, ಕ್ಷೇಮಥರ, ಕ್ಷೇತ್ರಜ್ಞ, ವಿಧಿಸಾರ, ಅಜಾತ ಶತ್ರು, ದರ್ಭಕ, ಅಜಯ, ನಂದಿವರ್ಧನ, ಮಹಾನಂದಿಯೆಂಬವರು ಹುಟ್ಟು ವರು. ಶಿಶುನಾಗನು ಮೊದಲಾದ ಈ ರಾಜರೆಲ್ಲರೂ ಕಲಿಯುಗದಲ್ಲಿ ಮುನ್ನೂ ರರುವತ್ತು ವರ್ಷಗಳವರೆಗೆ ರಾಜ್ಯಭಾರ ಮಾಡುವರು. ಆಮೇಲೆ ಆ ಮಹಾ ನಂದಿಯೆಂಬವನಿಗೆ, ಒಬ್ಬ ಶೂದ್ರಸಿಯ ಗರ್ಭದಲ್ಲಿ, ನಂದನೆಂಬ ಮಗನು ಹುಟ್ಟಿ, ಅವನು ಮಹಾಪದ್ಯಸಂಖ್ಯೆಯನ್ನು ಸೇನೆಗೂ, ಧನಕ್ಕೂ ಅಧಿಪತಿ ಯೆನಿಸಿಕೊಂಡು, ಮಹಾಬಲಶಾಲಿಯೆಂದು ಪ್ರಸಿದ್ಧಿ ಹೊಂದುವನು. ಇವ ನಿಂದ ಅನೇಕ ಕ್ಷತ್ರಿಯ ಕುಲವು ನಷ್ಟವಾಗುವುದು. ಶೂದ್ರಗರ್ಭದಲ್ಲಿ ಹುಟ್ಟಿದ ಈ ನಂದನಿಂದಾಚೆಗೆ ಹುಟ್ಟುವ ರಾಜರೆಲ್ಲರೂ, ಶೂದ್ರಪ್ರಾಯ ರಾಗಿಯೇ ಇದ್ದು, ಆಧಾರಿಕರೆನಿಸುವರು. ಆ ಮಹಾಪದ್ಮನೆಂದು ಪ್ರಸಿದ್ಧ ನಾದ ನಂದನು, ಎರಡನೆಯ ಪರಶುರಾಮನೋ ಎಂಬಂತೆ ಮಹಾಪರಾ ಕ್ರಮಿಯೆನಿಸಿ, ಸಿರಂಕುಶವಾದ ಆಜ್ಞೆಯಿಂದ ಏಕಛತ್ರಾಧಿಪತಿಯಾಗಿ ರಾಜ್ಯವನ್ನಾಳುವನು. ಈ ನಂದನಿಗೆ ಸುಮಾಲ್ಯನೇ ಮೊದಲಾದ ಎಂಟು ಮಂದಿ ಪುತ್ರರು ಹುಟ್ಟಿ, ನೂರುವರ್ಷಗಳವರೆಗೆ ರಾಜ್ಯವನ್ನಾಳುವರು. ತಂದೆಯಾದ ನಂದನೊಡನೆ ಸೇರಿ ನವನಂದರೆಂದು ಪ್ರಸಿದ್ಧರಾದ ಈ ಒಂ ಬತ್ತು ಮಂದಿಯೂ, ಕೌಟಿಲ್ಯನೆಂಬ ಬ್ರಾಹ್ಮಣನೊಬ್ಬನನ್ನು ಆಶ್ರಯಿ ಸಿದ್ದು, ಕೊನೆಗೆ ಅವನಿಂದಲೇ ವಂಚಿತರಾಗಿ ಸಾಯುವರು. ನಂದರು ಮೃತರಾದಮೇಲೆ, ಮೌಲ್ಯರೆಂಬವರು ರಾಜ್ಯವನ್ನಾಳುವರು. ನಂದಸಂಹಾರ ಕನಾದ ಆ ಕೌಟಿಲ್ಯನೆಂಬ ಬ್ರಾಹ್ಮಣನು, ಆ ಮೌಲ್ಯರಲ್ಲಿ ತನಗೆ ಪುತ್ರ ಪ್ರಾಯನಾದ ಚಂದ್ರಗುಪ್ತನೆಂಬವನನ್ನು ರಾಜ್ಯಾಧಿಕಾರದಲ್ಲಿರಿಸುವನು. ಆ ಚಂದ್ರಗುಪ್ತನಿಗೆ ವಾರಿಸಾರನೆಂಬ ಪುತ್ರನಾಗುವನು. ಅವನಿಂದ