ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೭೮ ಶ್ರೀಮದ್ಭಾಗವತವು [ಅಧ್ಯಾ. ೧. ಅಶೋಕವರ್ಧನೆಂಬ ಪುತ್ರನು ಜನಿಸುವನು. ಅವನಿಂದ ಸುಯಶನೆಂಬವನು ಹುಟ್ಟುವನು. ಹಾಗೆಯೇ ಸುಯಶಸಿಂದ ಸಂಗತನೂ, ಅವನಿಂದ ಶಾಲಿ ಶುಕನೂ, ಅವನಿಂದ ಸೋಮಶಮ್ಮನೂ, ಅವನಿಂದ ಶತಧನ್ವನೂ, ಶತ ಧನ್ಯನಿಂದ ಬೃಹದ್ರಥನೂ ಹುಟ್ಟುವರು. ಮೌಲ್ಯಕುಲದವರಾದ ಈ ಹತ್ತು ಮಂದಿರಾಜರು, ನೂರಮೂವತ್ತೇಳುವರ್ಷಗಳವರೆಗೆ ರಾಜ್ಯಭಾರ ಮಾರುವರು. ಇವರಲ್ಲಿ ಕೊನೆಯವನಾದ ಬೃಹದ್ರಥನಿಗೆ ಪುಷ್ಯಮಿತ್ರ ನೆಂಬ ಸೈನ್ಯಾಧಿಪತಿಯೊಬ್ಬನಿದ್ದು, ಅವನು ತನ್ನ ರಾಜನನ್ನು ಕೊಂದು ತಾನೇ ರಾಜ್ಯವನ್ನಾಕ್ರಮಿಸುವನು. ಈ ಪುಷ್ಯಮಿತ್ರನಿಂದ ಅಗ್ನಿ ಮಿತ್ರನೂ, ಅವನಿಂದ ಸುಷನೂ, ಸುಜೈವನಿಂದ ವಸುಮಿತ್ರನೂ, ಅವನಿಂದ ಭದ್ರಕನೂ, ಭದ್ರಕನಿಂದ ಪುಳಿಂದನೂ, ಅವನಿಂದ ಘೋಷನೂ, ಘೋಷ ನಿಂದ ವಜ್ರಮಿತ್ರನೂ, ವಜ್ರಮಿತ್ರನಿಂದ ಭಾಗವತನೂ, ಭಾಗವತನಿಂದ ದೇವಭೂತಿಯೂ ಹುಟ್ಟುವರು. ಅಗ್ನಿ ಮಿತ್ರನೇ ಮೊದಲಾದ ಈ ಸಂತಾನ ದವರು ಒಂಭತ್ತು ಮಂದಿಯೂ, ಶುಂಗರೆಂಬವರೂ ಸೇರಿ, ಈ ಹತ್ತು ಮಂ ಬಯೂ ನೂರಹನ್ನೆರಡು ವರ್ಷಗಳವರೆಗೆ ರಾಜ್ಯವನ್ನಾಳುವರು. ಅದರಿಂ ದಾಚೆಗೆ: ಈ ಭೂಮಿಯು, ಸೀಚಗುಣವುಳ್ಳ ಕಾಣೂರೆಂಬ ಕೆಲವು ರಾಜರ ಕೈಗೆ ಸೇರುವುದು. ಹೇಗೆಂದರೆ ಶುಂಗನೆಂಬ ನಾಮಾಂತರವುಳ್ಳ ದೇವ ಭೂತಿಗೆ ಕಣ್ಣನೆಂಬ ಮಂತ್ರಿಯೊಬ್ಬನಿದ್ದು, ಅವನು ತನ್ನ ರಾಜನು ಕೇವಲಸೀಲೋಲನಾಗಿರುವುದನ್ನು ನೋಡಿ, ಚಾತುರದಿಂದ ಅವನನ್ನು ಕಂದು, ತಾನೇ ರಾಜ್ಯವನ್ನು ನಡೆಸುವನು. ಇವನಿಗೆ ವಸುದೇವನೆಂದೂ ನಾಮಾಂತರವುಂಟು. ಇವನಿಗೆ ಭೂಮಿತ್ರನೆಂಬ ಮಗನು ಹುಟ್ಟುವನು. ಅವನಿಗೆ ನಾರಾಯಣನೆಂಬ ಪುತ್ರನಾಗುವನು. ಆ ನಾರಾಯಣನಿಗೆ ಸುಶರ ನೆಂಬ ಪುತ್ರನು ಹುಟ್ಟುವನು. ಈ ಕಣ್ಣ ಸಂತಾನದವರು ಮುನ್ನೂರ ನಾಲ್ವತ್ರೆದು ವರ್ಷಗಳವರೆಗೆ ರಾಜ್ಯವನ್ನಾಳುವರು. ಕೊನೆಗೆ ಕಣ್ಣ ವಂಶದ ಆ ಸುಶರನನ್ನು, ಅವನಿಗೆ ನೃತ್ಯನಾಗಿದ್ದ ಪರಮನೀಚನಾದ ಆಂಧ್ರದೇಶದ ಬಲೀಕನೆಂಬವನೊಬ್ಬನು ಕೊಂದು, ತಾನೇ ಸ್ವಲ್ಪ ಕಾಲದವ ರೆಗೆ ರಾಜ್ಯವನ್ನಾಳುವನು. ಆಮೇಲೆ ಅವನ ಸಹೋದರನಾದ ಕೃತ್ಯನೆಂಬ