ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತ್ಯ. ೧.೨ | ದ್ವಾದಶಸ್ಕಂಧನ. , s4ef ವನು ಪಟ್ಟವನ್ನು ವಹಿಸುವನು. ಇವನ ಮಗನು ಶಾಂತಕರ್ಣನು. ಅವನ ಮಗನು ಪರ್ಣಮಾನನು ಅವನಿಗೆ ಲಂಬೋದರನೆಂಬ ಮಗನಾಗುವನು. ಹೀಗೆಯೇ ಇವನಿಂದಾಚೆಗೆ, ಪುತ್ರಪರಂಪರೆಯಿಂದ, ಚಿವಿಲಕ, ಮೇಘ ಸ್ವಾತಿ, ಅವಮಾನ, ಅರಿಷ್ಕರೆ, ಹಾಲೇಯ, ತಲಕ, ಪುರುಷಭಾನು, ಸುನಂದನ, ಚಕೋರ, ಶಿವಸ್ವಾತಿ, ಗೋಮತಿ, ಪುರೀಮಂತ, ವೇದತಿರಸ್ಸು, ಶಿವಸ್ಕಂದ, ಯಜ್ಞಶ್ರೀ, ವಿಜಯ, ಚಂದ್ರವಿಜ್ಞ, ಸುಲೋಮಧಿಯೆಂಬ ವರು ಹುಟ್ಟುವರು, ಹೀಗೆ ವಶೀಕರೆಂದು ಕರೆಯಲ್ಪಡುವದ ಇಪ್ಪತ್ತೈದು ಮಂದಿ ರಾಜರ ಆಳ್ವಿಕೆಯು ನಾನೂರೈವತ್ತಾರುವರ್ಷಗಗಳ ಕಾಲ ನಡೆಯು ವುದು. ಅದರಿಂದಾಚೆಗೆ ಆಭೀರವಂಶ ಇವರಾದ ಒಂಭತ್ತು ಮಂದಿ ಅರಸರು ಅವಭ್ರತಿಯೆಂಬ ನಗರದಲ್ಲಿದ್ದು, ರಾಜ್ಯಭಾರವನ್ನು ಮಾಡುವರು ಆಮೇಲೆ ಗಾರ್ದಭರೆಂಬ ಹತ್ತು ಮಂದಿ ಅರಸರು ರಾಜ್ಯವಾಳುವರು. ಅದರಿಂದಾಚೆಗೆ ಹದಿನಾರುಮಂದಿ ಕಂಕಕುಲದವರು ಅತ್ಯಂತಕಾಮುಕರಾಗಿ ರಾಜ್ಯ ವನ್ನು ನಡೆಸುವರು. ಆಮೇಲೆ ಕ್ರಮವಾಗಿ ಎಂಟುಮಂದಿ ಯವನ ಜಾತಿ ಯವರೂ, ಹದಿನಾಲ್ಕು ಮಂದಿ ತುರುಷರೂ, ಹದಿಮೂರುವ ಂದಿ ಮುರುಡ, ಹನ್ನೊಂದುಮಂದಿ ಮೌನಸಂತತಿಯವರೂ ರಾಜ್ಯವ ನಾಳುವರು. ಮೌನಸಂತತಿಯವರುಹೊರತು, ಅದಕ್ಕೆ ಹಿಂದಿನ ರಾಜರ ಆಳ್ವಿಕೆಯು ಒಂದು ಸಾವಿರದ ತೊಂಬತ್ತೊಂಬತ್ತು ವರ್ಷಗಳವರೆಗೆ ನಡೆ ಯುವುದು, ಮೌನರ ಆಳ್ವಿಕೆಯ ಮುನ್ನೂರುಸಂವತ್ಸರಗಳವರೆಗೆ ಸಾಗು ವುದು. ಇವರ ಕಾಲಾನಂತರದಲ್ಲಿ, ಕಿಂಕಿಲೆಯೆಂಬ ಪಟ್ಟಣದಲ್ಲಿ, ಭೂತ ನಂದ, ಯವಂಹರ, ಶಿಶುನಂದ, ಇವನ ತಮ್ಮನಾದ ಯಶೋಪob, ಪ್ರವೀರಕರೆಂಬವರು ನೂರಾರು ಸಂವತ್ಸರಗಳವರೆಗೆ ರಾಜ್ಯಭಾರ ಮಾಡುವರು. ಇವರಿಗೆ ಬಾಕ್ಸಿಕನೇ ಮೊದಲಾದ ಹದಿಮೂರುಮಂದಿ ಪುತ್ರರು ಜನಿಸುವರು. ಬಾತ್ಮೀಕನಿಗೆ ಪುಷ್ಯಮಿತ್ರನೆಂಬ ಮಗನು ಹುಟ್ಟಿ ರಾಜ್ಯವನ್ನು ವಹಿಸುವನು. ಇವನಿಗೆ ದುರಿತನೆಂಬ ಮಗನಾಗುವನು. ಇವನ ಕಾಲಾನಂತರದಲ್ಲಿ ಏಳುಮಂದಿ ಆಂಧ್ರರೂ, ಏಳುಮಂದಿ ಕೋಶ ಲರ, ಕೆಲವುಮಂದಿ ವೈಡೂರರೂ,ಮತ್ತೆ ಕಲವುಮಂದಿ ನಿಷಧರೂ, ಸಣ್ಣ 169 B