ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨.] ದ್ವಾದಶ ಸ್ಕಂಧನು. ೨೩೮೧ ಗಿರುವುವು. ಇವರ ಕಾಲದಲ್ಲಿ ಗರ್ಭಾದಾನ ಮೊದಲಾದ ಸಂಸ್ಕಾರಗಳೊಂ ದೂಇಲ್ಲದೆ, ಜನರೆಲ್ಲರೂ ಕ್ರಿಯಾಹೀನರಾಗಿ, ರಜಸ್ತಮೋಗುಣಗಳಿಂದಲೇ ತುಂಬಿರುವರು: ಹೀಗೆ ಮೈಚ್ಛಗು ರಾಜರೂಪದಿಂದಿದ್ದು ಪ್ರಜೆಗಳನ್ನು ಬಹಳವಾಗಿ ಹಿಂಸಿಸುವರು. ಈ ಮೈಕ್ಷರೇ ಭೂಮಿಯನ್ನು ಪಾಲಿಸತಕ್ಕ ವರಾದುದರಿಂದ, ಯಥಾ ರಾಜಾ ತಥಾ ಪ್ರಜಾಃ” ಎಂಬಂತೆ, ಪ್ರಜೆಗಳೆಲ್ಲ ರೂ, ಅವರ ಆಚಾರವ್ಯವಹಾರಗಳನ್ನೇ ಅನುಸರಿಸುತ್ತಾ ಬರುವರು. ಹಾಗಿ ದರೂ ಆ ರಾಜರ ವಿಶ್ವಾಸಕ್ಕೆ ಪಾತ್ರರಾಗದೆ, ಅವರಿಂದ ನಾನಾವಿಧವಾದ ಹಿಂಸೆಗಳನ್ನನುಭವಿಸುತ್ತ, ತಮ್ಮೊಳಗೆ ತಾವು ಅಂತಃಕಲಹದಿಂದಲೂ ಒಬ್ಬರನ್ನೊಬ್ಬರು ಪೀಡಿಸುತ್ತ ಕೆಟ್ಟು ಹೋಗುವರು. 'ಇದು ಮೊದಲನೆಯ ಅಧ್ಯಾಯವು. ..( ಕಲಿಯುಗ ಪ್ರಾದುರ್ಭಾವದ ಲಕ್ಷಣಗಳು. | 1 ಕಲ್ಯವತಾರಕ್ರಮವು. ) ಓ ರಾಜೇಂದಾ! ಆಗ ಬನಹನಕ್ಕೆ ಜನರಲ್ಲಿ ಕಲಿಕಾಲದೋಷದಿಂದ, ಧರ, ಸತ್ಯ, ಕ್ಷಮೆ, ದಯೆ, ಶೌಚಾಚಾರಗಳು, ಆಯುಸ್ಸು, ದೇಹಬಲ, ಸ್ಮರಣಶಕ್ತಿ, ಮುಂತಾದುವೆಲ್ಲಾ ಕ್ಷಯಿಸುತ್ತಬರುವುವು ಆ ಕಲಿಕಾಲದಲ್ಲಿ ಹಣವೊಂದೇ ಮನುಷ್ಯರಿಗೆ ಕುಲವನ್ನೂ, ಆಚಾರವನ್ನೂ, ಸದ್ಗುಣಗಳ ನ್ಯೂ ಉಂಟುಮಾಡತಕ್ಕದು. ಹಣವಿದ್ಯವವನಿಗೆ ಮಾತ್ರವೇ ಎಲ್ಲಾ ಭಾಗ ದಲ್ಲಿಯೂ ಪೂಜ್ಯತೆ ! ನ್ಯಾಯಧವ್ಯವಸ್ಥೆಗಳಿಗೂ ಧನಬಲವೇ ಮುಖ್ಯ ಕಾ ರಣವು. ದಾಂಪತ್ಯನಿರ್ಣಯಕ್ಕೆ ಮನಸ್ಸಿನ ಅನುರಾಗವೊಂದೇ ಮುಖ್ಯವೇ ಹೊರತು ಕುಲಶೀಲಾದಿಗಳ ವಿಮರ್ಶೆಯಲ್ಲ ! ಕ್ರಯವಿಕ್ರಮಾದಿವ್ಯಾಪಾರ ಗಳಲ್ಲಿ ವಂಚನೆಯೇ ಪ್ರಧಾನವು, ರತಿಚಾತುವೊಂದೇ ಪುರು ಹರಗೆ ಪ್ರಾಶಸ್ತ್ರವನ್ನು ಪ್ರಕಾಶಗೊಳಿಸತಕ್ಕುದು. ಜನಿವಾರವೊಂದೇ ಬ್ರಾಹ್ಮಣಲಕ್ಷಣವು.ತ್ರಿದಂಡ ಮೊದಲಾದಗುರುತುಗಳುಮಾತ್ರವೇ ಆಯಾ ಆಶ್ರಮಗಳನ್ನು ತಿಳಿಸತಕ್ಕ ಲಕ್ಷಣಗಳೇ ಹೊರತು ಆಶ್ರಮಧರಗಳಲ್ಲ. ಒಂದಾಶ್ರಮವನ್ನು ಬಿಟ್ಟು ಮತ್ತೊಂದಾಶ್ರಮವನ್ನು ಕೈಗೊಳ್ಳುವುದಕ್ಕೂ,