ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೮೨ ಶ್ರೀಮದ್ಭಾಗವತರು [ಅಧ್ಯಾ. ೨. ಹಿಡಿದ ನ್ಯಾಯವು ದುರ್ಬಲವಾಗುವುದಕ್ಕೂ, ದಾರಿದ್ರವೇ ಮುಖ್ಯಕಾರ ಣವು, ಬಾಯಾಳಿತನವೇ ಪಾಂಡಿತ್ಯವನ್ನು ತೋರಿಸತಕ್ಕ ದೇಹೊರತು ಜ್ಞಾನವಲ್ಲ ! ಒಬ್ಬನು ನಿಕೃಷ್ಟವೆನಿಸಿಕೊಳ್ಳುವುದಕ್ಕೆ ದಾರಿದ್ರವೇ ಕಾರ ಣವೇ ಹೊರತು ದುರ್ಗುಣಗಳಲ್ಲ ! ದೇಹಾಲಂಕಾರಾದಿದಂಭಗಳಿಂದಲೇ ಮನುಷ್ಯರಿಗೆ ಉತ್ಕೃಷ್ಟತೆ! ಸ್ವೀಕರಿಸುವುದೊಂದೇ ವಿವಾಹವೇಹೊರತು ಶಾಸ್ತ್ರಿಯವಾದ ವಿಧಿಗಳಲ್ಲ. ಮೈಯಲ್ಲಿರುವ ಕೊಳೆಯನ್ನು ನೀಗಿಸುವು ದೊಂದೇ ಸ್ನಾನವೇ ಹೊರತು, ಶುದ್ಯತೀರ್ಥಗಳಲ್ಲಿ ಸ್ನಾನಮಾಡುವು ದಲ್ಲ ! ಊರ ಹೊರಗಿನ ಕಟ್ಟೆಗಳೇ ಮಹಾಪುಣ್ಯತೀರ್ಥಗಳೇಹೊರತು ಗಂಗಾದಿಗಳಲ್ಲ: ಸೊಗಸಿಗಾಗಿ ತಲೆಕೂದಲನ್ನು ಕತ್ತರಿಸಿಕೊಳ್ಳುವುದೇ ಕರವೇಹೊರತು, ಶಾಸೋಕ್ತವಾದ ರೀತಿಯಿಂದ ಮೈಕೂದಲನ್ನು ತೆಗೆ ಯಿಸುವುದಲ್ಲ. ಉದರಭರಣವೊಂದೇ ಸಕಲಪುರುಷಾರವು, ಬಾಯಿಬಡಿ ಯುವುದೇ ಸತ್ಯವೇ ಹೊರತು ಸುಳ್ಳಾಡದಿರುವುದಲ್ಲ. ಕುಟುಂಬಭರಣವೇ ಮನುಷ್ಯನಿಗೆ ದೊಡ್ಡ ಸಾಮರ್ಥ್ಯವೆನಿಸುವುದೇ ಹೊರತು, ಧರಾದಿಪುರು ಷಾರ ಸಾಧನೆಯಲ್ಲ! ದಾನಧಗಳು ಯಶಸ್ಸಿಗಾಗಿಯೇ ಹೊರತು ಪರಲೋ ಕಸಾಧನೆಗಲ್ಲ ! ಹೀಗೆ ಕಲಿಕಾಲದಲ್ಲಿ ಭೂಮಿಯೆಲ್ಲವೂ ದುಷ್ಯಪ್ರಜೆಗಳಿಂದ ತುಂಬಿ ಹೋದಾಗ, ವರ್ಣನಿಯಮವಿಲ್ಲದೆ, ಬ್ರಾಹ್ಮಣ ಕ್ಷತ್ರಿಯ ನೃತ್ಯ ಶೂದ್ರರಲ್ಲಿ, ಯಾವನು ಬಲವಂತನೋ ಅವನೇ ರಾಜನಾಗುವನು. ಇಂತಹ ರಾಜರು, ಲುಬ್ಬರೂ, ದಯಾಶೂನ್ಯರೂ, ಚೋರಸ್ವಭಾವವುಳ್ಳವರೂ ಆಗಿದ್ದು, ಪ್ರಜೆಗಳ ಧನವನ್ನೂ, ಸ್ತ್ರೀಯರನ್ನೂ ಬಲಾತ್ಕಾರದಿಂದ ಅಪ ಹರಿಸುವುದಕ್ಕೆ ಯತ್ನಿ ಸುವರು. ಈ ರಾಜರ ಬಾಧೆಯನ್ನು ತಡೆಯಲಾರದೆ ಪ್ರಜೆಗಳು ತಮ್ಮ ಸರಸ್ವವನ್ನೂ ಸೂರೆಗೊಟ್ಟು, ಕಾಡುಪಾಲಾಗಿ ಓಡಿ ಹೋಗುತ್ತ, ಅಲ್ಲಿ ಕಾಲಕಾಲಕ್ಕೆ ಆಹಾರವಿಲ್ಲದೆ, ಗಡ್ಡೆ ಗೆಣಸುಗಳನ್ನೂ, ಹಣ್ಣು ಹಂಪಲುಗಳನ್ನೂ, ಮೃಗಮಾಂಸ, ಜೇನು, ಹೂಗಳು, ಕಾಳುಗಳು ಇವೇ ಮುಂತಾದುವನ್ನೂ ತಿಂದು, ರೋಗಪೀಡಿತರಾಗಿ ಸಾಯುವರು ಮ್ಮೊಮ್ಮೆ ಅನಾವೃಷ್ಟಿಯ ದೆಸೆಯಿಂದ ಆ ಗಡ್ಡೆಗೆಣಸುಗಳೂ ಸಿಕ್ಕ, ಹಸಿವು ಬಾಯಾರಿಕಗಳಿಂದಲೂ, ಬಿಸಿಲಿನ ಬೇಗೆಯಿಂದಲೂ ಸಾಯುವರು.