ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೮ ಅಧ್ಯಾ, ೨] ದ್ವಾದಶಸ್ಕಂಧರ. ಕೊನೆಕೊನೆಗೆ ಕಲಿಯುಗಾಂತ್ಯದಲ್ಲಿ, ಪ್ರಜೆಗಳ ಆಯುಃಪರಿಮಾಣವು ಹೆಚ್ಚೆ೦ ದರೆ ಇಪ್ಪತ್ತು, ಅಥವಾ ಮೂವತ್ತು ವರ್ಷಗಳಿಗೆ ಮೇಲಿರದು. ಪ್ರಾಣಿಗಳ ದೇಹವೂ ಬಹಳವಾಗಿ ಕ್ಷೀಣಿಸಿರುವುವು.ವರ್ಣಾಶ್ರಮಧಠ್ಯವುಳ್ಳವರಲ್ಲಿಯೂ ಕೂಡ ವೇದೋಕ್ಷಧಗಳು ನಷ್ಟವಾಗುವುವು. ಆಗ ಪಾಷಂಡಧರ ವೇ ಪ್ರಧಾನಧರವೆನಿಸುವುದು. ರಾಜರೆಲ್ಲರೂ ಚೋರಧವುಳ್ಳವರಾ ಗುವರು, ಅದಕ್ಕೆ ತಕ್ಕಂತೆ ಪ್ರಜೆಗಳೆಲ್ಲರೂ, ಕಳವು, ಸುಳ್ಳು, ವಂಚನೆ, ಪ್ರಾಣಿಹಿಂಸೆ ಮೊದಲಾದ ನಾನಾ ದುರ್ವತ್ರಿಗಳಿಂದಲೇ ಜೀವನವನ್ನು ನಡೆಸುವರು. ವರ್ಣಗಳೆಲ್ಲವೂ ಒಂದಾಗಿ ಕಲೆತು ಶೂದ್ರಪ್ರಾಯವಾಗುವು ವು, ಹಸುಗಳು ಮೇಕೆಗಳಂತೆ ಅಲ್ಪ ಪ್ರಮಾಣವುಳ್ಳವುಗಳಾಗಿ, ಸ್ವಲ್ಪ ಮಾತ್ರ ವೇ ಹಾಲನ್ನು ಕೊಡುವುವು. ಮೈಥುನಸುಖಪ್ರಧಾನವಾದ ಗ್ರಹಾ ಶ್ರಮವೇ ಮುಖ್ಯಾಶ್ರಮವೆನಿಸುವುದು ಯೋನಿಸಂಬಂಧಮಾತ್ರದಿಂದ ಲೇ ಬಂಧುತ್ವವು ಬೆಳಗುವುದು.ಧಾನ್ಯಗಳೆಲ್ಲವೂ ಅಣುಪ್ರಾಯಗಳಾಗುವುವು. ವೃಕ್ಷಗಳೆಲ್ಲವೂ, ಫಲವನ್ನು ಕೊಡುವುದರಲ್ಲಿಯೂ ಪ್ರಮಾಣದಲ್ಲಿಯೂ ಬನ್ನಿ ಯಮರದಂತೆ ಅತ್ಯಲ್ಪವಾಗುವುವು. ಮೇಫುಗಳಲ್ಲಿ ಮಿಂಚಿನ ಅರ್ಭ ಟವೇ ಹೆಚ್ಚಾಗುವುದು. ಮನೆಗಳೆಲ್ಲವೂ ಅತಿಥಿಭೋಜನಾರಿಗಳಿಲ್ಲದೆ ಶೂ ವ್ಯಪ್ರಾಯವಾಗುವುವು. ಹೀಗೆ ಕಲಿದೇಹವು ಅತ್ಯುಚ್ಚ ದಶೆಯಿಂದ ಜನಗಳಲ್ಲಿ ಪ್ರವೇಶಿಸಿದಾಗ, ಭಗವಂತನು ಧರಿರಕ್ಷಣಾರ್ಥವಾಗಿ ಶುದ್ಧ ಸತ್ವಮಯವಾದ ದೇಹದಿಂದ ಒಂದವತಾರವನ್ನೆತ್ತುವನು. ಸರ್ವಾತ್ಮಕ ನಾಗಿ, ಸಕಲಚರಾಚರಗುರುವೆನಿಸಿಕೊಂಡ ಭಗವಂತನು, ಥರ ರಕ್ಷಣ ಕ್ಯಾಗಿಯೂ, ಜನರಲ್ಲಿ ಸಂಸಾರಕಾರಣಗಳಾದ ಕರದೋಷಗಳನ್ನು ತೊ ಲಗಿಸುವುದಕ್ಕಾಗಿಯೂ ಕೈಕೊಳ್ಳುವ ಆ ಅವಕಾರರಹಸ್ಯವನ್ನು ತಿಳಿಸುವೆನು ಕೇಳು ! ಶಂಬಲವೆಂದ ಒಂದಾನೊಂದು ಗ್ರಾಮದಲ್ಲಿ, ಮಹಾತ್ಮನಾದ ವಿಷ್ಟು ಯಶನೆಂಬ ಒಬ್ಬ ಬ್ರಾಹ್ಮಣನಿರುವನು. ಲೋಕನಾಯಕನಾದ ಶ್ರೀ ವಿಷ್ಣುವು ಅವನ ಮನೆಯಲ್ಲಿ ಕಲ್ಕಿಯೆಂಬ ಹೆಸರಿನಿಂದ ಅವತರಿಸುವನು. ಆ ಕಲ್ಟಿಪುರುಷನು ಅಣಿಮಾದ್ಯಷರಗಳಿಂದಲೂ, ಶರವೀತ್ಯಾದಿಗು ಣಗಳಿಂದಲೂ, ಎಸಯಿಲ್ಲದ ದಿವ್ಯತೇಜಸ್ಸಿನಿಂದಲೂ ಕೂಡಿದವನಾಗಿ,