ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Ad೪ ಶ್ರೀಮದ್ಭಾಗವತರು [ಅಧ್ಯಾ. ೨ ಮಹಾವೇಗವುಳ್ಳ ದೇವದತ್ತನೆಂಬ ಒಂದಾನೊಂದು ಉತ್ತಮಾಶ್ವವನ್ನೇರಿ, ದುಷ್ಟನಿಗ್ರಹಾರ್ಥವಾಗಿ ಒಂದು ಕತ್ತಿಯನ್ನು ಕೈಯಲ್ಲಿ ಹಿಡಿದು, ಆತಿ ವೇಗದಿಂದ ಭೂಮಿಯನ್ನು ತಿರುಗುತ್ತ, ರಾಜರೆಂಬ ನೆವದಿಂದ ಪ್ರಜೆಗಳ ನ್ನು ಪೀಡಿಸುತ್ತಿರುವ ದುಷ್ಟರನ್ನೆಲ್ಲಾ ಕೋಟಿಕೋಟೆಯಾಗಿ ಸಂಹರಿ ಸುವನು. ಹೀಗೆ ಆ ದಸ್ಯುಗಳೆಲ್ಲರೂ ಹತರಾದಮೇಲೆ, ಪ್ರಜೆಗಳ ಮನಸ್ಸಿಗೆ ನಮ್ಮ ಹಿಯುಂಟಾಗುವುದು. ಆ ಭಗವಂತನ ದೇಹಾನುಲೇಪನದ ಸುಗಂಧ ದಿಂದ ಕೂಡಿದ ಗಾಳಿಯು ಸೋಕಿದೊಡನೆ,' ಎಲ್ಲರ ಮನಸೂ ನಿಷ್ಕಲ್ಮ ಪವಾಗುವುದು. ಆಗ ಎಲ್ಲರ ಮನಸ್ಸಿಗೂ ಸತ್ಯಮೂರ್ತಿಯಾದ ಆ ಭಗವಂ ತನ ಸ್ಮರಣೆಯು ಹುಟ್ಟಿ, ಅದರಿಂದ ಅವರ ಮನಸ್ಸು ಸತ್ವಗುಣಪ್ರಚುರ ವಾಗುವುದು ಆಗ ಜನರಿಗೆ ವೈರಾಗ್ಯಬುದ್ದಿಯು ಹುಟ್ಟಿ, ಪತ್ರಕತ್ರಾದಿ ಪ್ರಪಂಚವೇ ಭಾರವಾಗಿ ತೋರುವುದು. ಭಗವಂತನಾದ ಕಲ್ಕಿಯ ಅವ ತರಿಸಿದೊಡನೆಯೇ, ಕಾಲವು ಕೃತಯುಗವಾಗಿ ಮಾರ್ಪಡುವುದು. ಅಲ್ಲಿಂ ದಾಚೆಗೆ, ಪ್ರಜಾವೃಷ್ಟಿಯು ಸತ್ವಗುಣಪ್ರಧಾನವಾಗಿಯೇ ಇರುವುದು. ಚಂದ್ರನೂ, ಶೂರನೂ, ಬೃಹಸ್ಪತಿಯೂ, ಈ ಮೂರುಗ್ರಹಗಳೂ ಪುಷ್ಯ ಯೋಗವೆಂಬ ಎಕರಾಶಿಯಲ್ಲಿ ಸೇರಿದಾಗ ಕೃತಯುಗಾರಂಭವೆಂದು ತಿಳಿ ! ಓ ಪರೀಕ್ಷಿದಾ ಜಾ! ಇದುವರೆಗೆ ಹೇಳಿದ ವಿಷಯಗಳಿಂದ ನಿನಗೆ ನಾನು ಚಂದ್ರಸೂಲ್ಯವಂಶಗಳೆರಡರಲ್ಲಿಯೂ ಹಿಂದೆ ಹುಟ್ಟಿದ ರಾಜರನ್ನೂ, ಈಗಿನ ಕಾಲದವರನ್ನೂ, ಮುಂದೆ ಹುಟ್ಟತಕ್ಕವರನ್ನೂ, ಅವರ ಉತ್ಪತ್ತಿ ಕ್ರಮವನ್ನೂ ವಿವರವಾಗಿ ತಿಳಿಸಿದುದಾಯಿತು. ನಿನ್ನಿಂದಾಚೆಗೆ ನಂದಾ ಭಿಷೇಕದವರೆಗಮಾತ್ರವೇ ಶುದ್ಧವಾದ ಚಂದ್ರವಂಶವು ಅನುವರ್ತಿಸುತ್ತ ಬರುವುದು. ಇವೆರಡರ ಮಧ್ಯಕಾಲವು * ಒಂದುಸಾವಿರದ ನೂರ ಹದಿ ನೈದುವರ್ಷಗಳು. ಕೃತಯುಗದ ಆರಂಭಕಾಲಲಕ್ಷಣವನ್ನು ತಿಳಿಸಿದೆನಲ್ಲವೆ ?

  • ಶರೀಂನ ಕಾಲದಿಂದಹಿಡಿದು ನಂದನ ಕಾಲದವರೆಗೆ, ಹಿಂದಿನ ಸಂಖ್ಯೆಯ ಇನುಕರಿಸಿ ಎಂದರೆ (ಬಾರ್ಹದ್ರಥರ ೧೦೦೦ ವರ್ಷಗಳು ಸೇರಿ) ೧೪೯೮ ವರ್ಷಗ ಳಾಗುವುವು. ಇಲ್ಲಿ ೧೧೧೩ ವರ್ಷಗಳಿಂರು ಹೇಳಿರುವುದು ಅದರಲ್ಲಿ ಯಾವದೆ ಒಂದು ಅವಾಂತರಸಂಖ್ಯೆಯಂದು ತಿಳಿಯಬೇಕು.