ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೨.] ದ್ವಾದಶಸ್ಕಂಧವು, ೨೮೫ ಕಲಿಯುಗಾರಂಭಕಾಲದ ಲಕ್ಷಣವನ್ನೂ ಸೂಚಿಸುವೆನು ಕೇಳು ! ಈ ನಿನ್ನ ಕಾಲದಲ್ಲಿ ಕಲಿಯುಗಾರಂಭವು. ಆಕಾಶದಲ್ಲಿ ಪೂರೈದಿಕ್ಕಿಗೆ ಅಭಿಮುಖ ವಾದ ಒಂದುಬಂಡಿಯ ಆಕಾರಕ್ಕೆ ಕಾಣುವ ನಕ್ಷತ್ರ ಸಮೂಹವೇ *ಸಪ್ತರ್ಷಿಮಂಡಲವು ಈ ಸಪ್ತರ್ಷಿಗಳಲ್ಲಿ, ಪ್ರಾತಃಕಾಲದಲ್ಲಿ ಮೊದಲು ಉದಯಿಸಿ ಕಾಣತಕ್ಕವರು ಫಲಹಕ್ರತುಗಳೆಂಬವುಬ್ಬರ.. ಈ ಎರಡು ನಕ್ಷತ್ರಗಳಿಗೂ ಸಮವಾದ ಮಧ್ಯಸ್ಥಾನದಲ್ಲಿ, ಸ್ವಲ್ಪ ಬಲಭಾಗಕ್ಕೆ, ರಾತ್ರಿಯ ಕಾಲದಲ್ಲಿ ಅಶ್ವಿನಿ ಮೊದಲಾದ ತಾರೆಗಳೊಳಗೆ ಯಾವುದಾದರೂ ಒಂದು ಕಾಣುತ್ತಿರುವುದು. ಈ ಒಂದೊಂದು ನಕ್ಷತ್ರವೂ ಆ ಸಪ್ತರ್ಷಿ ಮಂಡಲ ದೊಡನೆ ಮನುಷ್ಯರ ನೂರುವರ್ಷಗಳ ಕಾಲ ದವರೆಗೆ ಕಾಣಿಸುತ್ತಿರುವುದು. ಓ ಪರೀಕ್ಷಿವಾಜಾ ! ಈ ನಿನ್ನ ಕಾಲದಲ್ಲಿ ಆ ಸಪ್ತರ್ಷಿ ಮಂಡಲವು ಮಖ ನಕ್ಷತ್ರದೊಡನೆ ಸೇರಿರುವುದು, ಇದೇ ಕಲಿಯುಗದ ಆರಂಭಕಾಲವು. ಭಗವಂತನಾದ ಕೃಷ್ಣವ ಈ ಭೂಲೋಕವನ್ನು ಬಿಟ್ಟು ಹೋದೊಡನೆ, ಕ: ಪುರುಷನು ಇಲ್ಲಿಗೆ ಕಾಲಿಡುವನ, ಅವನ ಪ್ರೇರಣೆಯಿಂದ ಜನರು ಪಾಪಸಿರತರಾಗುವರು. ಶ್ರೀ ಕೃಷ್ಣನ ಅವತಾರಕಾಲವಾದ ಯುಗಸಂ ಥಿಯಲ್ಲಿ ಯೆ ಕಲಿಯುಗವು ಆರಂಭಿಸಿದ್ದರೂ, ಲಕ್ಷ್ಮೀಪತಿಯಾದ ಶ್ರೀ ಕೃಷ್ಣನ ಪಾದಸ್ಪರ್ಶವಿರುವವರೆಗೂ ಕಲಿಪುರುಷನ ಈ ಭೂಮಿ ಯನ್ನಾ ಕ್ರಮಿಸುವುದಕ್ಕೆ ಶಕ್ತನಾಗದೆ ಹೋದನು ಆದುದರಿಂದ ಸಪ್ತರ್ಷಿ ಗಳು ಮಖಾನಕ್ಷತ್ರದೊಡನೆ ಸೇರಿದ ಕಾಲದಲ್ಲಿ ಕಲಿಯುಗಾರಂಭವು. ಈ

  • ಸಪ್ತರ್ಷಿಮಂಡಲವೆಂಬುದು, ಪೂರದಿಕ್ಕಿಗೆ ಅಭಿಮುಖವಾಗಿ ಹಿಂದು ಬಂಡಿಯ ಆಕಾರಕ್ಕೆ ಕಾಣುವ ಏಳನಕ್ಷತ್ರಗಳ ಸಮೂಹವು ಇವುಗಳಲ್ಲಿ ಬಂದಿಯ ಮೂಕಿಯಕನೆಯಲ್ಲಿ ಸ್ವಲ್ಪ ಎತ್ತರವಾಗಿದ್ದಂತೆ ಕಾಣುವನು ಮರೀಚಿ ಅದರ ಹಿಂದೆ ಸ್ಮಶಕ್ಕಾಗಿ ನಿಗದ ಸ್ಥಾನದಲ್ಲಿ ಅರುಂಧತೀಸಮೇತನಾದ ವಸಿಷ್ಠನು. ಅದಕ್ಕೆ ಹಿಂದೆ ಸ್ವಲ್ಪ ಎತ್ತರವಾದ ಮಂಕಿಯ ಬುಡದಲ್ಲಿ ಕಾಯುವವನು ಶಲಕ್ಕನು. ಅದರ ಹಿಂದೆ ಬಂಡಿಯ ಚೌಕಟ್ಟಿನ ನಾಲ್ಕು ಮಲೆಗಳಲ್ಲಿ, ಅ, ಶಲ, ಪುಲಹ, ಕ್ರತಗಳೆಂಬ ನಾಲ್ಕರು. 'ಉದಯಕಾಲದಲ್ಲಿ ಮೊದಲು ಶಲಹಕ್ರತಗಳೆಂಬವರು ಗೋಚರಿಸುವರೆಂದು ಗ್ರಾಹ್ಯವು