ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9431 ಶ್ರೀಮದ್ಭಾಗವತವು [ಅಧ್ಯಾ, ೨. ಯುಗದ ಕಾಲಪರಿಮಾಣವು (ಯುಗಸಂಧಿಕಾಲದೊಡನೆಸೇರಿ) ದೇವಮಾನ ದಲ್ಲಿ ಒಂದು ಸಾವಿರದ ಇನ್ನೂರುವರ್ಷಗಳು. ಸಪ್ತರ್ಷಿಗಳು ಮಖಾನಕ್ಷತ್ರ ವನ್ನು ದಾಟಿ, ಪೂರೈಾಷಾಢಾನಕ್ಷತ್ರಗಳಿಗೆ ಯಾವಾಗ ಹೋಗುವರೋ, ಆಗಿ ನಿಂದ ಕಲಿಯು ವೃದ್ಧಿಯನ್ನು ಹೊಂದುವುದು. ಆಗಲೇ ನಂದರಾಜ್ಯಾ ರಂಭವು, ಕಾಲಜ್ಞರಾದ ಪೂರೈಕರು, ಕೃಷ್ಣನು ಈ ಭೂಮಿಯನ್ನು ಬಿಟ್ಟು ತನ್ನ ಲೋಕಕ್ಕೆ ಹೋದನವೇ, ಆ ಹಗಲಿನಲ್ಲಿಯೆ, ಕಲಿಯು ರಂಭವೆಂದರೆ ಕಲಿಪ್ರದೇಶವೆಂದು ಹೇಳಿರುವರು. ನಾಲ್ಕನೆಯ ಯುಗವಾದ ಈ ಕಲಿಯುಗದ ಕಾಲಪ್ರಮಾಣವು, ದೇವಮಾನದ ಲೆಕ್ಕದಲ್ಲಿ ಒಂದು ಸಾವಿರವರ್ಷಗಳು. ಇದಕ್ಕೆ ಹಿಂದಿನ ಯುಗಸಂಧಿಕಾಲವಾದ ಇನ್ನೂ ರುವರ್ಷ ಗಳೂ ಸೇರಿ ಒಂದು ಸಾವಿರದ ಇನ್ನೂರು ದೇವಮಾನಗಳಾಗುವುವು. ಕಲಿ ಯುಗದ ಸಾವಿರದೇವ ಮಾನಗಳು ಕಳೆದೊಡಸಿ, ತಿರುಗಿ ಕೃತಯುಗಾ ರಂಭವು. ಜನರ ಮನಸ್ಸು ಆತ್ಮಸ್ವರೂಪವಿವೇಚ ಸಕ್ಕೆ ಯಾವಾಗ ಸಮರ್ಥವಾಗುತ್ತ ಬರುವದೊ, ಆಗಲೇ ಕೃತಯುಗಾರಂಭವೆಂದು ತಿಳಿ ! ಓ ರಾಜೇಂದ್ರಾ! ಇದುವರೆಗೆ ನಾನು ವೈವಸ್ವತಮನು ಮೊದಲಾದ ರಾಜ ವಂಶಕ್ಕೆ ಯಾವವಿಧವಾದ ಉಚ್ಚ ನೀಚಾವಸ್ಯೆಗಳನ್ನು ಹೇಳುತ್ತಬಂ ದೆನೋ, ಅದೇ ವಿಧವಾಗಿ ಬ್ರಹ್ಮ ವೈಶ್ಯ ಶೂದ್ರವರ್ಣದವರಿಗೂ, ಆಯಾ ಯುಗಭೇದದಿಂದ ಉಚ್ಚ ನೀಚಾವಸ್ಯೆಗಳುಂಟು. ಹಿಂದೆ ಹೇಳಿದ ರಾಜವಂ ತೀಯರಾದ ಮಹಾತ್ಮರ ಹೆಸರುಮಾತ್ರವೇ ಈಗೆ ಭೂಲೋಕದಲ್ಲಿ ನಿಂತಿರು ವುವೇ ಹೊರತು, ಅವರಲ್ಲಿ ಯಾರನ್ನೂ ಈಗ ಕಾಣುವುದಕ್ಕಿಲ್ಲ. ಆದರೆ ಚಂದ್ರವಂಶದಲ್ಲ,ಶಂತನುವಿನ ಸಹೋದರನಾದ ದೇವಾಪಿ, ಇಕ್ಷಾಕುಕುಲ ದಲ್ಲಿ ಮರುತ್ತು, ಇವರಿಬ್ಬರುಮಾತ, ಮಹತ್ತಾದ ತಮ್ಮ ಯೋಗಬಲದಿಂ ದ, ಬದಾಶ್ರಮದಲ್ಲಿ, ಯೋಗಿಗಳಿಗೆ ನಿವಾಸಸ್ಥಾನವಾದ ಕಲಾಪವೆಂಬ ಗ್ರಾಮದಲ್ಲಿ ಇನ್ನೂ ಬದುಕಿರುವರು. ಕಲಿಯಗವು ಕಳೆದಮೇಲೆ ಕೃತ ಯುಗಾರಂಭದಲ್ಲಿ, ಅವರು ಭಗವಂತನಿಂದ ವರ್ಣಾಶ್ರಮಧರಗಳನ್ನು ಉಪ ದೇಶಹೊಂಹ, ತಾವು ಅದನ್ನು ಲೋಕಕ್ಕೆ ತೋರಿಸಿಕೊಟ್ಟು, ಪೂಸ್ಥಿತಿಗೆ ತರುವರು. ಕೃತ, ತ್ರೇತಾ, ದ್ವಾಪರ, ಕಲಿಗಳೆಂಬೀ ನಾಲ್ಕೂ ಸೇರಿ, ಚತು