ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨let ಅಧ್ಯಾ. ೨.] ದ್ವಾದಶ ಸ್ಕಂಧವು. ರ್ಯುಗವೆನಿಸುವುದು. ಈ ಆ ವೃತಿಕ್ರಮದಿಂದ ಪ್ರತಿಚತುರ್ಯುಗವೂ, ಪ್ರಾಣಿಗಳ ಗುಣಸ್ವಭಾವಭೇದಗಳಿಗೆವಿತ್ತವಾಗಿ ಪ್ರವರ್ತಿಸುತ್ತಿರುವುದು. ಓ ರಾಜಾ ! ನಾನು ಇದುವರೆಗೆ ಹೇಳಿದ ರಾಜರಲ್ಲಿ ಅನೇಕರು, ವಿವೇಕ ಹೀನರಾಗಿ, ಈ ಭೂಮಿಯು “ನನ್ನ ದು, ತನ್ನ "ದೆಂಬ ಮಮತೆಯನ್ನಿಟ್ಟು ಮಧಾಂಧರಾಗಿದ್ದರು. ಆದರೇನು ? ಕೊನೆಗೆ ಅವರು, ರಾಜ್ಯಸುಖವನ್ನ ಮಭ ವಿಸಬೇಕಾಗಿದ್ದ ಪುಣ್ಯಫಲವು ತೀರಿದ ಮೇಲೆ, ಸಾಯುವಾಗಲೂ ಅಮಮತೆ ಯನ್ನು ಮಾತ್ರ ಬಿಡದೆ, ಅದರೊಡನೆಯೇ ನರಕದಲ್ಲಿ ಬಿದ್ದರೇಹೊರತು, ಈ ಭೂಮಿಯು ಅವರಲ್ಲಿ ಯಾರನ್ನೂ ಹಿಂಬಾಲಿಸಲಿಲ್ಲ. ಅರಸನಾದರೇನು ? ಆಳಾದರೇನು? ಸತ್ತ ಮೇಲೆ ಎಲ್ಲರ ದೇಹವೂ ಕ್ರಿಮಿಗಳಾಗಿಯೋ, ಅಮೇಧ್ಯ ರೂಪವಾಗಿಯೋ, ಭಸ್ಮವಾಗಿ ಮಾರ್ಪಟ್ಟು, ಆ ಹೆಸರಿನಿಂದಲೇ ಕರೆಯಲ್ಪಡುವುದಲ್ಲದೆ ಬೇರೆಯಲ್ಲ. ಇಂತಹ ನೀಚವಾದ ದೇಹಕ್ಕಾಗಿ ಅನೇಕರು ಇತರ ಭೂತಗಳಿಗೆ ದ್ರೋಹವನ್ನು ಮಾಡಿ ನರಕದಲ್ಲಿ ಬಿಳುವರೇ ಹೊರತು, ಆತ್ಮ ಹಿತಕ್ಕೆ ದಾರಿಯನ್ನು ಯೋಚಿಸಲಾರರು. ಆ ರಾಜರು ತಮ್ಮಲ್ಲಿ ತಾವು ಆಗಾಗ ('ಆಹಾ ! ಅಖಂಡವಾದ ಈ ಭೂಮಂಡಲ ವನ್ನು ನಮ್ಮ ಪೂರೈಕರು ಅನುಭವಿಸುತ್ತಿದ್ದರು. ಈಗ ನಾವೂ ಇದನ್ನು ಧರಿಸಿರುವೆವು. ಮುಂದೆ ನಮ್ಮ ಮಕ್ಕಳೂ, ಮುಮ್ಮಕ್ಕಳೂ, ಮರಿಮಕ್ಕಳೂ ಹೀಗೆಯೇ ಅನುಭವಿಸಬಹುದಲ್ಲವೆ? ” ಎಂದು ನಾನಾವಿಧಮನೋರಥಗ ಇನ್ನಿಟ್ಟುಕೊಂಡು, ಮನಸ್ಸಿನಲ್ಲಿ ಗುಣಿಸುತ್ತಿರುವರು. ಇವರ ಮೂಢ ವನೆಂದು ಹೇಳಬಹುದು? ಓ ರಾಜಾ ! ಮನುಷ್ಯ ದೇಹವೆಂಬುದು ಅನ್ನ, ನೀರು, ತೇಜಸ್ಸೆಂಬ ಈ ಮೂರುದ್ರವ್ಯಗಳಿಂದೇರ್ಪಟ್ಟಿರುವುದು. ಮೂಢರಾದ ರಾಜರು, ಈ ದೇಹವನ್ನೆ ಆತ್ಮವೆಂದೂ, ಭೂಮಿಯನ್ನು ತಮ್ಮದೆಂದೂ ಭ್ರಮಿಸಿದ್ದು, ಕೊನೆಗೆ, ಪ್ರಾರಬಾವಸಾನದಲ್ಲಿ ಆ ದೇಹ ವನ್ನೂ, ಆ ಭೂಮಿಯನ್ನೂ ಇವೆರಡನ್ನೂ ಬಿಟ್ಟಿ ಹೋದರು. ಆದುದ ರಿಂದ ಓ ಪರೀಕ್ಷಿದ್ರಾಜಾ ! ಅನೇಕರಾಜರು ತಮ್ಮ ಪೌರುಷದಿಂದ ವಿಸ್ತಾರವಾದ ಭೂಮಿಯನ್ನನುಭವಿಸಿದವರಾಗಿದ್ದರೂ, ಅವರೆಲ್ಲರೂ ಕೊನೆಗೆ ಕಾಲಬಲದಿಂದ ನಿಗ್ರಹಿಸಲ್ಪಟ್ಟವರೇಹೊರತು, ಅ ಕಾಲವನ್ನು ಜಯಿ