ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯ, .! ದ್ವಾದಶಸ್ಕಂಧನು. ೨೩೯೩ ನ್ಯಾಸಿವೇಷದಿಂದ ತಿರುಗುವರು. ತಪಸ್ವಿಗಳು ವಿವಿಕ್ತವಾದ ಸ್ಥಳವನ್ನು ಬಿಟ್ಟು ಗ್ರಾಮಗಳಲ್ಲಿಯೇ ವಾಸಮಾಡುವರು. ಸನ್ಯಾಸಿಗಳು ಹಣದಾಶ ಯಿಂದ ಧನಾರ್ಜನೆಯಲ್ಲಿಯೇ ನಿರತರಾಗುವರು. ಸ್ತ್ರೀಯರು ಆಕಾರದಲ್ಲಿ ಕುಳ್ಳು ! ತಿನ್ನುವುದು ಮಾತ್ರ ಹೆಚ್ಚು! ಏಶೇಷವಾಗಿ ಮಕ್ಕಳನ್ನು ಹಡೆಯು ವರು. ಅವರಿಗೆ ಸ್ವಾಭಾವಿಕವಾದ ಲಜ್ಞೆಯೂ ಬಿಟ್ಟು ಹೋಗುವುದು. ಯಾವಾಗಲೂ ಕಟುವಾಗಿ ಮಾತನಾಡುವರು. ಮೋಸದಲ್ಲಿಯೂ, ಕಳ್ಳ ತನದಲ್ಲಿಯೂ, ಸಾಹಸಕಾರಗಳಲ್ಲಿಯೂ ಪ್ರವರ್ತಿಸುವರು. ವರ್ತಕರು ಸಂಘುವಾಗಿ ಸೇರಿ, ಕ್ರಯ ವಿಕ್ರಯಾದಿಗಳನ್ನು ನಡೆಸುತ್ತ, ಅವುಗಳಲ್ಲಿ 5 ನಾದರೂ ತಮಗೆ ಲೋಪವು ಕಂಡುಬಂದರೆ, ನೀಚಕೃತ್ಯಗಳಿಗೆ ಪ್ರವರ್ತಿ ಸುವರು. ಜನರು ತಮಗೆ ಆಪತ್ತೆನೂ ಇಲ್ಲದಿದ್ದಾಗಲೂ, ಹೀನವೃತ್ತಿಯ ನವಲಂಬಿಸಿ, ಅದರಿಂದ ಧನಾರ್ಜನೆಗೆ ಯತ್ನಿ ಸುವರು ನೃತ್ಯರು ತಮ್ಮ ಯಜಮಾನನು ಎಷ್ಮೆ ಗುಣಾಡ್ಯನಾಗಿದ್ದರೂ, ಅವನಿಗೆ ಕಷ್ಟಕಾಲವು ಬಂದಾಗ ಅವನನ್ನು ಕ್ಷಣವೇ ಬಿಟ್ಟು ಹೋಗುವರು. ಹಾಗೆಯೇ ಪ್ರಭು ಗಳೂ ಕೂಡ, ತಮ್ಮಲ್ಲಿ ಬಹುಕಾಲದಿಂದ ವಿಶ್ವಾಸಪೂರ್ವಕವಾಗಿ ಸೇವೆಮಾ ಡಿವ ನೃತ್ಯರನ್ನು ಆಪತ್ಕಾಲದಲ್ಲಿ ಕೈಬಿಡುವರು. ಮತ್ತು ಜನರು ತಮ್ಮ ಕುಲಪರಂಪರೆಯಾಗಿ ಬಂದ ಧರಗಳನ್ನು ತ್ಯಜಿಸುವರು. ಬಹುಕಾಲದಿಂದ ಮನೆಯಲ್ಲಿ ಬೆಳೆಸಿದ್ದರೂ ಹಸುಗಳನ್ನು ಅವು ಹಾಲು ಕೊಡದಿದ್ದಾಗ ಆಗಲೆ ತೊರೆದುಬಿಡುವರು. ಕಲಿಯುಗದಲ್ಲಿ ಜನರು, ತಂದೆ, ತಾಯಿ, ಸಹೋದ ರರು, ಇಷ್ಟಮಿತ್ರರು, ಬಂಧುಗಳು ಮೊದಲಾಗಿ ಯಾರನ್ನೂ ಲಕ್ಷಮಾ ಡದೆ, ಸಿವಶ್ಯರಾಗಿ, ಹೆಂಡತಿಯರನ್ನೂ, ಹೆಂಡತಿಯ ಕಡಯವರಾದ ಮೈ ದುನರು, ಮಾವಂದಿರು ಮೊದಲಾದವರನ್ನೂ ಪ್ರೀತಿಸುತ್ತ, ಅವರಲ್ಲಿಯೇ ಪೂರ್ಣ ವಿಶ್ವಾಸವನ್ನಿಟ್ಟು, ಅವರೊಡನೆಯೆ ಕಾತ್ಯಾಲೋಚನೆಗಳನ್ನು ಮಾ ಡುವರು. ಶೂದ್ರರು ತಪಸ್ಸಿನಿಂದಲೂ, ವಿದ್ಯೆಯಿಂದಲೂ, ಪ್ರತಿಗ್ರಹಾದಿ ಬ್ರಾಹ್ಮಣವೃತ್ತಿಗಳಿಂದಲೂ ಬೇಪಿಸತೊಡಗುವರು. ಧಮ್ಮಲೇಶವನ್ನೂ ತಿಳಿಯದವರು ಲೋಕಕ್ಕ !ಧರೋಪದೇಶಕರಾಗಿ, ಗುರುಪೀಠವನ್ನೇರುವ ರು. ಕಲಿಯುಗದಲ್ಲಿ ಪ್ರಜೆಗಳ ಮನಸ್ಸಿಗೆ ಯಾವಾಗಲೂ ಶಾಂತಿಯಿರದು