ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೪ ಶ್ರೀಮದ್ಭಾಗವತವು [ಅಧ್ಯಾ, ೩. ಅವಸ್ಥೆಯು, ಜೀವನ ಸಹಜಸ್ವರೂಪವು ರಾಗಾದಿದೋಷಗಳಿಲ್ಲದೆ ಪರಿ ಶುದ್ಧವಾದುದು. ಜಾಗರಾದ್ಯವಸ್ಥಾಭೇದಗಳೂ ಇಲ್ಲದೆ ಒಂದೇ ವಿಧವಾ ದುದು. ಜ್ಞಾನೈಕಸ್ವರೂಪವೆನಿಸಿರುವುದು. ಹಾಗಿದ್ದರೂ ಆ ಜೀವಾತ್ಮನಿ ಗೆ ಪ್ರಕೃತಿಪರಿಣಾಮರೂಪನಾದ ದೇಹಸಂಬಂಧವಿದ್ದಾಗ, ಇಂದ್ರಿಯ ಗಳು, ಅಂತಃಕರಣ, ವಾಸನಾಬೀಜವೆಂಬಿವುಗಳು, ಅವನಿಗೆ ಆ ಜಾಗರಾ ವ್ಯವಸ್ಥೆಗಳಿರುವಂತೆ ತೋರಿಸುತ್ತಿರುವುವು. ಸ್ವಲ್ಪ ಪವಾಗಳು ಅಸ್ಥಿರಗಳೆ ನಿಸಿಕೊಂಡಿದ್ದರೂ ಸ್ಥಿರವಾಗಿ ತೋರುವಂತೆ ಇದೂ ಭ್ರಾಂತಿಯು, ಜ್ಞಾನ ಸ್ವರೂಪನಾದ ಜೀವಸಿಗೆ, ಈ ವಿಧವಾದ ಸಂಬಂಧವೆಲ್ಲವೂ ಆ ನಾಟಕವಾ ಸನೆಯ ಫಲವಾಗಿರುರುವುದು, ಜೀವನಿಗೆ ಮೇಲೆ ಹೇಳಿದ ಮೂರವಸ್ಥೆಗಳೂ ಸ್ವಾಭಾವಿಕವಾಗಿ ಒಂದುದೂ ಅಲ್ಲ ! ನಿಯತವಾಗಿ ನಿಲ್ಲತಕ್ಕುವೂ ಅಲ್ಲ. ಅವು ಸತ್ಯವಾಗಿದ್ದ ಪಕ್ಷದಲ್ಲಿ, ಮುಕ್ತಾವಸ್ಥೆಯಲ್ಲಿಯೂ ಇರಬೇಕೆ+ಗುವು ದು ! ಮುಕ್ತಜಿವನಿಗೆ ಈ ಅವಸ್ಥೆಗಳಿಲ್ಲ. ಇದಲ್ಲದೆ ಬದ್ಧದಶೆಯಲ್ಲಿ ಯೂ ಜೀವನಿಗೆ ಒಂದು ವಿಧವಾದ ಅವಸ್ಥೆಯಲ್ಲಿ ಮತ್ತೊಂದವಸ್ಥೆಯು ಕಲೆತಿರಲಾರದು. ಆದುದರಿಂದ ಈ ಅವಸ್ಥೆಗಳೆಲ್ಲವೂ ಜೀವನಿಗೆ ಸ್ವಾಭಾವಿ ಕಗಳಲ್ಲವೆಂದೂ, ಸ್ವಪ್ನದಲ್ಲಿ ತೋರುವ ಸುಖದುಃಖಗಳಂತೆ, ಇವೂ ಅವರ ವರ ಕರೆಗಳಿಗೆ ಫಲರೂಪವಾಗಿ ಅನಿತ್ಯವಾಗಿರುವುವೆಂದೂ ತಿಳಿದುಕೊ೦ ಡಾಗ, ಪುರುಷನು ಲೌಕಿಕಗಳಾದ ಅಲ್ಪ ಸುಖಗಳಿಗಾಗಿ ದುಡಿಯಲಾರನು. ಆದಿಪುರುಷನಾದ ಸಶ್ವರನು ಸಕಲಭೂತಗಳಲ್ಲಿಯೂ ಅಂತರಾಮಿಯಾ ಗಿದ್ದು, ತನ್ನ ಮಾಯಾಕಾವ್ಯಗಳಾದ ಪೃಥಿವಿ ಮೊದಲಾದ ಸಮಭೂ ತಗಳಿಂದ, ಸಣ್ಣದೊಡ್ಡ ವಿಭಾಗಗಳುಳ್ಳ ಹಲವು ಬಗೆಯ ಭೂತಗಳನ್ನು ಸೃಜಿಸಿರುವನುಆದರೆ ಹೀಗೆ ಕೇವಲಜ್ಞಾನಸ್ವರೂಪಗಳಾದ ಜೀವಗ ಳಿಗೆ ದೇಹೇಂದ್ರಿಯಾಮಗಳನ್ನು ಕಲ್ಪಿಸಿ ಸೃಷ್ಟಿಸುವುದರಿಂದ ಫಲವೇನು ? ಎಂದು ಕೇಳುವೆಯಾ ! ತನಗೆ ಶರೀರಭೂತಗಳಾದ ಆ ಜೀವಗಳು, ಆ ಕರಣ ಕಳೇಬರಾದಿಗಳನ್ನು ಹೊಂದಿ, ಅವುಗಳಿಂದ ತನ್ನ ಸ್ವಾರಾಧಿಸಿ, ಮುಕ್ತಿಯೆಂಬ ಉತ್ತಮಪುರುಷಾರವನ್ನು ಪಡೆಯಬೇಕೆಂಬುದೇ ಅವನ ಉದ್ದೇಶವು.