ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೪೪ ಶ್ರೀಮದ್ಭಾಗವತರ [ಅಧ್ಯಾ, ೩ ಜನರೆಲ್ಲರೂ, ಅನಾವೃಷ್ಟಿಯಿಂದಲೂ, ಇತರವಿಧವಾದ ದುರ್ಭಿಕ್ಷಗಳಿಂ ದಲೂ, ರಾಜಬಾಧೆಯಿಂದಲೂ ಪೀಡಿತರಾಗಿ, ಹೊಟ್ಟೆಗೆ ಅನ್ನ ವಿಲ್ಲದೆ ದುಃಖಿ ಸುವರು. ಮತ್ತು ಕಲಿಯುಗದಲ್ಲಿ ಪ್ರಜೆಗಳು, ತಮ್ಮ ಸೌಕಯ್ಯಕ್ಕೆ ಬೇಕಾ ದಷ್ಟು "ನ್ಯ ಪಾನ ವಾಹಿಗಳಿಲ್ಲದೆ, ಸ್ನಾನಭೂಷಣಾ ಹಿಗಳೂ ಇಲ್ಲದೆ ಹೀನಸ್ಥಿತಿಯನ್ನು ಹೊಂದಿ ಪಿಶಾಚಗಳಂತೆ ಕಾಣಿಸುವರು. ಕಲಿಯುಗದಲ್ಲಿ ಜನರು ಒಂದು ಕವಡೆಯಷ್ಟು ದ್ರವ್ಯಕ್ಕಾದರೂ ದೊಡ್ಡ ಜಗಳವನ್ನಾರಂ ಭಿಸಿ, ಬಂಧುಮಿತ್ರರೆಂಬ ದಾಕ್ಷಿಣ್ಯವನ್ನು ಕೊರೆದು, ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಯತ್ನಿಸಿ, ತಾವೂ ಪ್ರಾಣವನ್ನು ಕಳೆದುಕೊಳ್ಳುವರು. ಮತ್ತು ಯುವಕರೆಲ್ಲರೂ ಕೇವಲಶಿಶೋದರಪರಾಯಣರಾಗಿ, ವೈದ್ಯರಾದ ತಂದೆತಾಯಿಗಳನ್ನಾಗಲಿ, ಹೊಟ್ಟೆಯಲ್ಲಿ ಹುಟ್ಟಿದ ಎಳಮಕ್ಕಳನ್ನಾಗಲಿ, ಕೈಹಿಡಿದ ಹೆಂಡತಿಯನ್ನಾಗಲಿ ಪೋಷಿಸದೆ, ತಮ್ಮ ಸುಖದಲ್ಲಿ ತಾವು ಸಿರ ತರಾಗಿರುವರು. ರಾಜಾ ! ಕಲಿಯುಗದಲ್ಲಿ ಪಾಷಂಡಿಗಳ ಬೋಧನೆಯಿಂದ ಜನರಿಗೆ ವಿಷ್ಣುವಿನಲ್ಲಿ ಭಕ್ತಿಯು ತಗ್ಗುತ್ತ ಬರುವುದು. ಆದುದರಿಂದ ತ್ರೈಲೋಕ್ಯನಾಥನಾಗಿಯೂ, ಲೋಕಗುರುವಾಗಿಯೂ, ಬ್ರಹ್ಮಾದಿದೇ ವತೆಗಳಿಂದಲೂ ಪೂಜಿಸಲ್ಪಟ್ಟ ನಾದಾರವಿಂದಗಳುಳ್ಳವನಾಗಿಯೂ ಇ ರುವ ಶ್ರೀ ವಿಷ್ಣುವನ್ನು ಆರಾಧಿಸತಕ್ಕವರೇ ಕಡಿಮೆಯಾಗುವರು. ಮರ ಣದಶೆಯಲ್ಲಿರುವವನಾಗಲಿ, ದುಖತನಾಗಲಿ, ಪತಿತನಾಗಲಿ, ಆಚಾರಭ ಮೂನಾಗಲಿ, ಬಾಯಿತಪ್ಪಿಯಾದರೂ ಒಮ್ಮೆ, ಯಾವನ ನಾಮೋಚ್ಛಾರಣ ವನ್ನು ಮಾಡಿದ ಮಾತ್ರದಿಂದ, ತನ್ನ ಪ್ರಾರಬ್ಬಕರದೋಷಗಳಿಂದ ಪಿ ಮುಕ್ತನಾಗಿ, ಉತ್ತಮಗತಿಯನ್ನು ಹೊಂದುವನೋ ಅಂತಹ ಶ್ರೀಮನ್ನಾ ರಾಯಣನನ್ನು ಅನೇಕರು ಮರೆತುಹೋಗುವರು. ರಾಜಾ! ಈ ಕಲಿದೋಷ ವನ್ನು ನೀಗಿಸತಕ್ಕ ಉಪಾಯವೇನೆಂದು ಕೇಳಿದೆಯಲ್ಲವೆ ? ಪರಮದಯಾಳುವಾದ ಶ್ರೀಹರಿಯ ಸ್ಮರಣ ಮಾತ್ರದಿಂದಲೇ ಜನ ರಿಗೆ, ದ್ರವ್ಯ, ದೇಶ, ಕಾಲ, ಸಂಬಂಧವಾಗಿಯೂ, ತಮ್ಮ ತಮ್ಮ ಮನಸ್ಸಿಗೆ ಸಂಬಂಧಿಸಿದುದಾಗಿಯೂ ಇರುವ ಕಲಿದೋಷಗಳೆಲ್ಲವೂ ನೀಗುವುವು. ಆ ಶ್ರೀಮನ್ನಾರಾಯಣನ ನಾಮವನ್ನು ಒಂದಾವರ್ತಿ ಕಿವಿಯಿಂದ ಕೇಳಿದರೂ,