೨೬೯
ಅಧ್ಯಾ ೪ ||
ದ್ವಾದಶಸ್ಕಂಧವು. ವರ್ಷಗಳವರೆಗೆ ಮಳೆಯನ್ನು ಸುರಿಸದೆ ನಿಲ್ಲಿಸುವನು. ಪ್ರಜೆಗಳು ಅನ್ನವಿಲ್ಲದೆ ಒಬ್ಬರನ್ನೊಬ್ಬರು ಕೊಂದು ಭಕ್ಷಿಸುವರು. ಹೀಗೆ ಅನೇಕ ಪ್ರಾಣಿಗಳು ಕಯಹೊಂದುವುವು. ಆ ಪ್ರಳಯಕಾಲದ ಸೂರನು, ಸಮುದ್ರದಲ್ಲಿಯೂ, ಭೂಮಿಯಲ್ಲಿಯೂ, ಪ್ರಾಣಿಗಳ ದೇಹದಲ್ಲಿಯೂ ಇರುವ ದ್ರವವನೆಲ್ಲಾ ಶೋಷಿಸುತ್ತಿರುಗಿ ಆ ನೀರನ್ನು ಈಗಿನಂತೆ ಹೊರಕ್ಕೆ ಬಿಡದೆ,ಯಾವುದೂ ಉಳಿಯದಂತೆ ಎಲ್ಲವನ್ನೂ ತನ್ನ ಕಿರಣಗಳಿಂದ ದಹಿಸಿಬಿಡುವನು. ಆಮೇಲೆ ಸಂಕರ್ಷಣರೂಪಿಯಾದ ಭಗವಂತನ ಮುಖದಿಂದ ಹೊರಟ ಪ್ರಳಯಾ ↑ ಯು, ಪ್ರಚಂಡವಾಯುವಿನ ಸಹಾಯಃಂದ ಚಾಜ್ವಲ್ಯಮಾನವಾಗಿ, ಪಾತಾಳಾದಿ ವಿವರಗಳನ್ನೂ ದಹಿಸುತ್ತ ಬರುವುದು ಹೀಗೆ ಸೂ ಬ್ಯಾಗಿಗಳ ಜ್ವಾಲೆಗಳಿಂದ ಮೇಲೆಯೂ, ಕೆಳಗೂ, ನಾನಾಗ ಳಲ್ಲಿಯೂ ಬ್ರಹ್ಮಾಂಡವು ದಗ್ಧವಾಗುತ್ತ ಬಂದು, ಸುಟ್ಟ ಬೆರಣಿಯಂತಾಗು ವುದು, ಆಮೇಲೆ ಪ್ರಚಂಡವಾದ ಬಿರುಗಾಳಿಯೊಂದು ಕೊರಟನೂರಾರು ವರ್ಷಗಳವರೆಗೆ ಬೀಸುತ್ತ, ಆಕಾಶವೆಲ್ಲವನ್ನೂ ಧೂಳಿನಿಂದ ಮುಚಿ ಓಡು ವುದು. ಆಮೇಲೆ ಪಿಚಿತ್ರವರ್ಣಗಳುಳ್ಳ ಮೇಘಗಳು ಹೊರಟು, ಭಯಂಕರ ಧ್ವನಿಯಿಂದ ಗರ್ಜಿಸುತ್ತ ನೂರುವರ್ಷಗಳವರೆಗೆ ಮಳೆಯನ್ನು ಕರೆಯು ವುವು. ಇದರಿಂದ ಬ್ರಹ್ಮಾಂಡವಿವರದಲ್ಲಿ ಅಡಗಿರುವ ಪ್ರಪಂಚವೆಲ್ಲವೂ ಜಲಮಯವಾಗಿ ಏಕಾರ್ಣವವಾಗುವುದು ಹೀಗೆ ಜಗತೈವೂ ಜಲದಲ್ಲಿ ಮುಳುಗಿದಾಗ, ಭೂಮಿಯಲ್ಲಿರುವ ಗಂಧಗಣವ ಜಲದಿಂದ ಆಕರ್ಷಿತ ಲ್ಪಟ್ಟು, ಭೂಮಿಯೂ ಜಲದಲ್ಲಿ ಲಯಿಸುವುದು. ಆಮೇಲೆ ಜಲದಲ್ಲಿರುವ ರಸವೆಂಬ ಗಣವು ತೇಜಸ್ಸಿನಿಂದ ಗ್ರಸಿಸ್ಪಡುವುದು, ಆಜಲವು ತೇಜಸ್ಸಿನಲ್ಲಿ ಲಯಿಸುವುದು. ಹೀಗೆಯೇ ತೇಜಸ್ಸು ವಾಯುವಿನಿಂದ ಅಪಹರಿಸಲ್ಪಟ್ಟ ರೂಪಗುಣವುಳುದಾಗಿ, ತಾನೂ ವಾಯುವಿನಲ್ಲಿಯೇ ಉಯಿಸುವುದು. ವಾಯುಗುಣವಾದ ಸ್ಪರ್ಶವನ್ನು ಆಕಾಶವು ಗ್ರಹಿಸುವುದರಿಂದ, ಗುಣ ಹೀನವಾದ ಆ ವಾಯುವು ಆಕಾಶದಲ್ಲಿ ಐಕ್ಯಹೊಂದುವುದು. ಆಮೇಲೆ ಆಕಾಶಗುಣವಾದ ಶಬ್ದನ ಭೂತಾದಿಯೆನಿಸುವ ತಾಮಸಾಹಂಕಾರದಿಂದ ಆಕರ್ಷಿಸಲ್ಪಡುವುದು. ಆಮೇಲೆ ನಿರ್ಗುಣವಾದ ಆಕಾಶವು, ಆ ರಾಮ
ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೩
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
