ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯೮ ಶ್ರೀಮದ್ಭಾಗವತನ [ಅಧ್ಯಾ, ೪, ಸಾಹಂಕಾರದಲ್ಲಿಯೇ ಲಯಹೊಂದುವುದು. ಆಮೇಲೆ ರಾಜಸಾಹಂಕಾರ ಸಹಿತವಾದ ಸಾತ್ವಿಕಾಹಂಕಾರವು, ಜ್ಞಾನೇಂದ್ರಿಯಗಳನ್ನೂ, ಅವುಗಳ ವ್ಯಾಪಾರವನ್ನೂ ಗ್ರಹಿಸುವುದು. ಆಮೇಲೆ ಆ ಮೂರುಬಗೆಯ ಅಹಂಕಾರ ಗಳನ್ನೂ ಮಹತ್ವವು ಗ್ರಹಿಸುವುದು. ಆ ಮಹತ್ವವನ್ನು ಸತ್ಯಾದಿ ಗುಣಗಳು (ಎಂದರೆ ತ್ರಿಗುಣಾತ್ಮಕವಾದ ಪ್ರಕೃತಿಯು) ಗ್ರಹಿಸುವುದು. ಅಮೇಲೆ ಪ್ರಧಾನವೆನಿಸಿಕೊಂಡ ವಿಕಾರಶೂನ್ಯವಾದ ಆ ಪ್ರಕೃತಿಯು, ತನ್ನಲ್ಲಿರುವ ಸತ್ರಾಜಗುಣಗಳನ್ನು ಗ್ರಹಿಸುವುದು, ಎಂದರೆ ಆ ಗುಣಗ ಇಲ್ಲಿರುವ ವಿಷಮಾವಸ್ಥೆಯನ್ನು ನೀಗಿಸಿ ಸಮಸ್ಥಿತಿಗೆ ತರುವುದು. ಕೊನೆಗೆ ಆ ಪ್ರಕೃತಿಯು ಪರಬ್ರಹ್ಮನಲ್ಲಿ ಐಕ್ಯಹೊಂದುವುದು. ಓ ರಾಜೇಂದ್ರಾ ! ಆ ಪರಮಾತ್ಮನ ಸ್ವರೂಪವುಮಾತ್ರ ಆದ್ಯಂತವಿಲ್ಲದುದು. ಅದು ಕಾಲಾವಯವಗಳೆನಿಸಿಕೊಂಡ, ರಾತ್ರಿ, ಹಗಲು, ಮುಂತಾದುವುಗಳಿಂದ ಪರಿಣಾಮವನ್ನು ಹೊಂದತಕ್ಕುದಲ್ಲ. ಇಂದ್ರಿಯಗಳಿಗೆ ಗೋಚರಿಸದುದ ರಿಂದ ಅವ್ಯಕ್ತವೆನಿಸುವುದು. ನಾಶವಿಲ್ಲದುದರಿಂದ ನಿತ್ಯವೆನಿಸಿರುವುದು. ಅವ್ಯಕ್ತವೇ ಮೊದಲಾಗಿ, ಪೃಥಿವಿಯವರೆಗಿನ ಜಗತ್ತಿಗೆಲ್ಲಾ ಅದೇ ಕಾರಣ ಭೂತವಾಗಿರುವುದು. ಹಾಗಿರೂ ಕಾಠ್ಯಗತವಾದ ದೋಷಗಳಿಗೆ ಈಡಾಗ ಲಾರದು. ಮನಸ್ಸು, ವಾಕ್ಕು, ಸತ್ವರಜಸ್ತಮೋಗುಣಗಳು, ಮಹತ್ತು ಮೊದಲಾದ ತತ್ವಗಳು, ಪ್ರಾಣಿಗಳು, ಬುದ್ಧಿ, ಕರೀಂದ್ರಿಯ ಜ್ಞಾನೇಂ ದ್ರಿಯಗಳು, ಲೋಕಸೃಷ್ಟಿಗೆ ಆಧಾರವೆನಿಸಿದ ಬ್ರಹ್ಮಾಂಡ ಸನ್ನಿವೇಶವು, ಇವೊಂದೂ ಆ ಬ್ರಹ್ಮ ಸ್ವರೂಪಕ್ಕೆ ಸಂಬಂಧಿಸಿಲ್ಲ ! ಮತ್ತು ಆ ಪರ ಬ್ರಹ್ಮನಿಗೆ, ಬೇವನಿಗೆ ಹೇಗೋಹಾಗೆ ಜ್ಞಾನದ ಸಂಕೋಚವಿಕಾಸರೂಪ ಗಳಾದ,ಎಚ್ಚರ,ಕನಸು ಸುಷುಪ್ತಿ, ಎಂಬ ಅವಸ್ಥಾಭೇದಗಳೂ ಇಲ್ಲ! ಮತ್ತು ಆ ಬ್ರಹ್ಮ ಸ್ವರೂಪವು ಆಕಾಶ, ಜಲ, ಭೂಮಿ, ವಾಯು, ಅಗ್ನಿ, ಸೂರಿ ಎಂಬಿವುಗಳಲ್ಲಿಯೂ ಸೇರಿದುದಲ್ಲ. ಗಾಢನಿದ್ರೆಯಲ್ಲಿರುವಂತೆ, ಹೊರಗೆ ಬ್ರಾಹ್ಮಣತ್ಯಾದಿವಿಕಾರಗಳಿಗಾಗಲಿ, ಒಳಗೆ ಸುಖದುಃಖಾದಿ ವಿಕಾರಗಳಿ ಗಾಗಲಿ, ಇರಾಗುವುದಲ್ಲ. ಮತ್ತು ಆಕಾಶದಂತೆ ತಾನು ಸಮಸ್ತದ್ರವ್ಯಗ ಇಲ್ಲಿಯೂ ಸೇರಿದ್ದರೂ, ಅವುಗಳ ದೋಷಗದೆ ನಿರ್ಮಲವಾಗಿರು