ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೪.] ದ್ವಾದಶಸ್ಕಂಧರ. ೨೬೪೯ ವುದು. ಆ ಪರಮಾತ್ಮ ಸ್ವರೂಪವನ್ನು ಹೀಗೆಂದು ತರ್ಕಿಸುವುದಕ್ಕೂ ಶಕ್ಯ ವಲ್ಲ. ಈ ಪರಬ್ರಹ್ಮ ಸ್ವರೂಪವೇ ಅವ್ಯಕ್ತವೆನಿಸಿಕೊಂಡ ಪ್ರಧಾನಕ್ಕೆ ಲಯ ಸ್ಥಾನವೆಂದು ವೇದಾಂತಗಳು ನಿರ್ಧರಿಸುವುವು. ಓ ಪರೀಕ್ಷಿಬಾಜಾ ! ಇದೇ ಪ್ರಾಕೃತಪ್ರಳಯವು. ಇದರಲ್ಲಿ ಪುರುಷನೂ, ಪ್ರಕೃತಿಯೂ ಈಶ್ವರನಲ್ಲಿ ಲಯಿಸುವುವು. ಹೀಗೆ ಪೃಥಿವಿ ಮೊದಲಾಗಿ ಮಹತ್ತಿನವರೆಗಿರುವ ತತ್ವಗ ಳೆಲ್ಲವೂ ಕಾಲದಿಂದ ಪ್ರೇರಿತಗಳಾಗಿ ತಮ್ಮ ತಮ್ಮ ಕಾರಣತತ್ವಗಳಲ್ಲಿ ಲಯಿಸುತ್ತಬಂದು, ಆ ಪರಬ್ರಹ್ಮ ಸ್ವರೂಪವೊಂದೆ ಉಳಿಯುವುದು. ಜ್ಞಾನಶಬ್ದ ವಾಚ್ಯನಾದ ಆ ಪರಮಾತ್ಮನು, ಬುದ್ಧಿ, ಇಂದ್ರಿಯಗಳು, ಮೊದಲಾದ ಸತ್ವವನ್ನು ಶರೀರಕನಾಗಿ, ಅವೆಲ್ಲಕ್ಕೂ ಧಾರಕನಾಗಿರುವನು. ಬುದ್ದೀಯಾದಿಗಳೆಲ್ಲವೂ ಪರಮಾತ್ಮನನ್ನು ಬಿಟ್ಟು ಪ್ರತ್ಯೇಕವಾಗಿ ಇರ ಲಾರದುದರಿಂದಲೂ, ಅವು ಪರಮಾತ್ಮನಿಗೆ ಶರೀರವಾಗಿರುವಂತೆಯೇ ಅನೇ ಕಪ್ರಮಾಣಗಳಿಂದ ತಿಳಿಯಬರುವುದರಿಂದಲೂ, ಅವುಗಳನ್ನು ಪರಮಾತ್ಮ ಸಿಗೆ ಶರಭೂತಗಳೆಂದೇ ಪ್ರಾಮಾಣಿಕರ ನಿಶ್ಚಯವು, ಮತ್ತು ಬುಜ್ಯಂ ಕ್ರಿಯಾದಿಗಳು ಪರಮಾತ್ಮ ಸ್ವರೂಪದಂತೆ ನಿತ್ಯವಲ್ಲ! ಆದ್ಯಂತಗಳುಳ್ಳುದು. ಯಾವಾಗಲೂ ವಿಕಾರಹೊಂದತಕ್ಕೆ ಸ್ವಭಾವವುಳ್ಳವು. ತೇಜಸ್ಸಿನ ಕಾರ್ ವೆನಿಸಿದ ದೀಪವೂ, ತೇಜಸ್ಸಿನಿಂದ ಸಹಕರಿಸಲ್ಪಡಬೇಕಾದ ನೇತ್ರಂ ಯವೂ, ತೇಜೋಧವೆನಿಸಿದ ರೂಪವು, ಇವು ಮೂರೂ ಆ ತೇಜಸ್ಸನ್ನು ಬಿಟ್ಟು ಹೇಗೆ ಪ್ರತ್ಯೇಕವಾಗಿರಲಾರವೋ,ಹಾಗೆಯೇ,ಇಂದ್ರಿಯಗಳೂ,ಅಂತಃ ಕರಣವೂ, ವಿಷಯಗಳೂ, ಪರಮಾತ್ಮನಿಂದಲೇ ಸೃಜಿಸಲ್ಪಟ್ಟು, ಅವನಿಂದ ಲೇ ಸಹಕರಿಸಲ್ಪಡತಕ್ಕವುಗಳಾಗಿ, ಅವನನ್ನೇ ಆಶ್ರಯವಾಗಿ ಹೊಂದಿರುವುವು. ಆದುದರಿಂದ, ಅವು ತಮಗಿಂತಲೂ ವಿಲಕ್ಷಣನಾಗಿಯೂ,ಜ್ಞಾನಶಬ್ದ ವಾಚ್ಯ ನಾಗಿಯೂ ಇರುವ ಪರಮಾತ್ಮನನ್ನು ಬಿಟ್ಟು ಪ್ರತ್ಯೇಕವಾಗಿರಲಾರವು. ಓಂಜಾ! ಜೀವನ ಜ್ಞಾನಕ್ಕೆ, ಜಾಗರ, ಸ್ವಪ್ನ, ಸುಷುಪ್ತಿಯೆಂಬ ಅವಸ್ಥಾ

  • ಶರುಷನಿಗೆ ಲಯವೆಂದರೆ ಲೈಂಗಜ್ಞಾನಶಂಚರಿಂದ ಪರಮ ನೊಡನೆ ಸಂಕ್ಷೇತನ, ಕಾದ ಪ್ರಕೃ ಯವಂಡರೆ, ಮಹa mಾಗರ ಇಲ್ಲದ ಬಾರತದ ಅವಸ್ಥೆಯನ್ನು ಹೊಂದುವುದು.