ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೦೩ ಅಧ್ಯಾ. ೪.|| ದ್ವಾದಶ ಸ್ಕಂಧವು ಭವಿಸುವುದೇ ಆತ್ಯಂತಿಕಪ್ರಳಯವೆಂದು ಹೇಳುವರು. ಎಂದರೆ, ದೇಹೋ ಪಾಥಿಯು ಬಿಟ್ಟು ಹೋಗುವುದೇ ಆತ್ಯಂತಿಕ ಪ್ರಳಯವು. ಬ್ರಹ್ಮಾದಿ ಸಮಸ್ಯಭೂತಗಳಲ್ಲಿಯೂ, ಪ್ರತಿಕ್ಷಣವೂ ಉತ್ಪತ್ತಿ ಪ್ರಳಯಗಳು ನಡೆಯು ತಿರುವುವೆಂದು ಸೂಕ್ಷಜ್ಞರಾದವರು ಹೇಳುವರು. ಎಂದರೆ ಬ್ರ ಹ್ಯಾದಿ ಸಮಸ್ಯಶರೀರಗಳೂ, ಯಾವಾಗಲೂ ಪರಿಣಾಮಹೊಂದುತ್ತ ಲೇ ಇರುವುದರಿಂದ, ಪೂರಾವಸ್ಥೆಯನ್ನು ಬಿಡುವುದೇ ಪ್ರಳಯವೆಂದೂ, ಉತ್ತರಾವಸ್ಥೆಯನ್ನು ಹೊಂದುವುದೇ ಉತ್ಪತ್ತಿಯೆಂದೂ ತಿಳಿಯಬೇಕು ಇದೇ ಸಿತೋತ್ಸತಿ ಪ್ರಳಯವೆನಿಸುವುದು. ಇದು ಸ್ಕೂಲದೃಷ್ಟಿಯುಳ್ಳ ವರಿಗೆ ತಿಳಿಯಲಾರದು ಪ್ರವಾಹ ವೇಗದಿಂದ ಎಳೆಯಲ್ಪಡುತ್ತಿರುವ ಹು ಈ ಕಡಿಗಳು, ಒಮ್ಮೆ ಮೇಲೇರುತ್ತಲೂ, ಮತ್ತೊಮ್ಮೆ ತಗ್ಗುತ್ತಲೂ ಹೋಗುವಂತೆ, ಕಾಲವೇಗದಿಂದ ಕ್ಷಣಕ್ಷಣಕ್ಕೂ ವಿಕಾರಹೊಂದುತ್ತಿರುವ ದೇಹಗಳಿಗೆ, ಆಗಾಗ ಉಂಟಾಗತಕ್ಕ ಅವಸ್ಥಾಭೇದಗಳೇ ಉತ್ಪತಿ ವಿನಾಶ ಕಾರಣಗಳೆನಿಸುವುವು. ಈಶ್ವರಶರೀರವೆನಿಸಿಕೊಂಡು, ಆದ್ಯಂತಗಳಿಲ್ಲದೆ ನಡೆಯುತ್ತಿರುವ ಕಾಲವಶದಿಂದ್ರಭೂತಗಳಲ್ಲಿ ನಿತ್ಯವೂ ನಡೆಯುತ್ತಿರುವ ಈ ಅವಸ್ವಾಭೇದಗಳು, ಆಕಾಶದಲ್ಲಿ ಗ್ರಹಗಳ ಚಲನವು ಹೇಗೋ ಹಾಗೆ ನಮ್ಮ ದೃಷ್ಟಿಗೆ ಗೋಚರಿಸಲಾರವು. ಓ ಪರೀಕ್ಷಿದ್ರಾಜಾ ! ಹೀಗೆ ಪ್ರಳಯದಲ್ಲಿ ನಿತ್ಯ, ನೈಮಿತ್ತಿಕ, ಪ್ರಾಕೃತಿಕ, ಆತ್ಯಂತಿಕವೆಂಬ ನಾಲ್ಕು ಭೇದಗಳನ್ನೂ ನಿನಗೆ ತಿಳಿಸಿದನು. ಕಾಲಗತಿಯ ಈ ವಿಧವಾದುದು. ಲೋಕಸೃಷ್ಟಿಕ ರ್ತನಾಗಿಯೂ, ಸಕಲಭೂತಾಶ್ರಯನಾಗಿಯೂ, ಸಮಸ್ಯಚೇತನರಿಗೂ ಸದ್ಧತಿಯಾಗಿಯೂ ಇರುವ ಆ ಭಗವಂತನ ಲೀಲಾಚರಿತ್ರಗಳನ್ನೂ ನಿನಗೆ ಸಂಕ್ಷೇಪಿಸಿ ತಿಳಿಸಿರುವನು. ಅದನ್ನು ಪೂರ್ಣವಾಗಿ ವಿವರಿಸುವುದಕ್ಕೆ ಬ್ರಹ್ಮ ದೇವನೂ ಶಕ್ತವಲ್ಲ. ತಾಪತ್ರಯದಿಂದ ಪೀಡಿತರಾಗಿ, ಸಂಸಾರಸ ಮುದ್ರವನ್ನು 'ದಾಟಬೇಕಂಬ ಆಪೇಕ್ಷೆಯುಳ್ಳವಂಗ, ಪುರುಷೋತ್ತಮ ನಾದ ಆ ಭಗವಂತನ ಕಥಾಮೃತಸೇವನೆಗಿಂತ ಬೇರೆ ಉಪಾಯ ವೊಂದೂ ಇಲ್ಲವೆಂದು ತಿಳಿ: ವೇದಸಾರವೆನಿಸಿದ ಈ ಭಾಗವತಸಂಹಿತ ಯನ್ನು, ಮೊದಲು, ಅನಿರುದ್ಧ ರೂಪಿಯಾದ ಭಗವಂತನು, ಚತುದ್ಮುಖನಿಗೆ