ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೩.] ಏಕಾದಶಸ್ಕಂಥವು. ೨೪೨೫ ಹೀಗಿದ್ದಾಗಲೂ ಶರೀರಗಳಲ್ಲಿ ಪ್ರವೇಶಿಸಿದ ಜೀವಾತ್ಮನು, ತನ್ನ ಜ್ಞಾನವನ್ನು ಹತ್ತು ಇಂದ್ರಿಯಗಳಿಗೂ, ಅಂತಃಕರಣಕ್ಕೂ ಅಧೀನವಾಗಿ ಮಾಡಿ, ಶಬ್ಬಾದಿವಿಷಯಗಳನ್ನು ಅನುಭವಿಸುವುದರಲ್ಲಿಯೇ ನಿರತನಾಗಿರುವ ಸೇಹೊರತು, ಪರಮಪುರುಷನನ್ನು ಆರಾಧಿಸಲಾರನು. ತನ್ನ ದೇಹವನ್ನೇ ಆತ್ಯ ವೆಂದೂ ಭ್ರಮಿಸುವನು. ಭಗವತ್ಕಲ್ಪಿತಗಳಾದ ಆ ಇಂದ್ರಿಯಗಳಿಂದ ಐಹಿಕ ಸುಖಗಳಿಗಾಗಿಯೇ ತೊಳಲುತ್ತಿರುವನು. ಈ ವಿಷಯಾನುಭವವು ಮೇಲೆಮೇಲೆ ವಿಷಯಾಭಿಲಾಷೆಯನ್ನ ಹೆಚ್ಚಿಸುತ್ತ ಬರುವುದು. ಈ ಸಂ ಸಾರದಲ್ಲಿ ದೇಹವಿತಿಷ್ಟನಾದ ಜೀವನು, ಹಿಂದಿನಿಂದ ತನ್ನನ್ನು ಅನುಸರಿಸಿ ಬರುವ ಕರೆ ವಾಸನೆಯಿಂದಲೇ ಪುಣ್ಯಪಾಪಕರಗಳನ್ನು ನಡೆಸುತ್ತ ಬರು ವನು. ಆ ಕರಗಳ ತತ್ತರದೇಹಗಳನ್ನುಂಟುಮಾಡಲು ಕಾರ ಣಗಳಾಗುವುವು. ಹೀಗೆ ಜೀವನು ಕುಗಳನ್ನಾಚರಿಸುತ್ತಲೂ, ಅದಕ್ಕೆ ತಕ್ಕಂತೆ ಸುಖದುಃಖಗಳನ್ನನುಭವಿಸುತ್ತಲೂ, ದುಃಖಪ್ರಚುರವಾದ ಸಂಸಾ ರದಲ್ಲಿ ಬಿದ್ದು ತೊಳಲುವನು. ಹೀಗೆ ಜೀವನು ಕಲ್ಮಾನವಾಗಿ ಬಂದ ದೇಹಗಳಲ್ಲಿ ಸಿಕ್ಕಿ, ಪ್ರಕೃತಿಗೆ ಪರವಶನಾಗಿ, ಮಹಾಪ್ರಳಯಪದ್ಯಂತವೂ ಜನನಮರಣಗಳನ್ನನುಭವಿಸುತ್ತ ಕೇಶಪಡುವನು. ಪಂಚಮಹಾಭೂತ ಪ್ರಳಯವು ಸಮೀಪಿಸಿದಾಗ, ಆದ್ಯಂತಶೂನ್ಯನಾಗಿಯೂ, ಕಾಲಶರೀರಕ ನಾಗಿಯೂ ಇರುವ ಪರಮಪುರುಷನು, ಪಂಚಮಹಾಭೂತಗಳಿಂದಲೂ, ಶಬ್ದಾರಿಗುಣಗಳಿಂದಲೂ ಸರಿ ತವಾಗಿ, ನಾಮರೂಪವಿಭಾಗಗಳಿಂದ ಕೂ ಡಿದ ಈ ಸ್ಕೂಲಪ್ರಪಂಚವನ್ನೆಲ್ಲಾ, ಆ ನಾಮರೂಪಗಳೊಂದೂ ಇ ಲ್ಲದ ಸೂಕ್ಷ ರೂಪಕ್ಕೆ ತಿರುಗಿಸಿ, ತಮಸ್ಸೆಂಬ ಅಚಿತ್ತಿನಕಡೆಗೆ ಆಕರ್ಷಿ ಸಿಡುವುದಕ್ಕಾಗಿ ಸಂಕಲ್ಪಿಸುವನು. ಈ ಸಂಕಲ್ಪಾನುಸಾರವಾಗಿ, ಆಗಲೇ ಭೂಮಿಯಲ್ಲಿ ನೂರುವರ್ಷಗಳವರೆಗೆ ಲೋಕನಾಶಕರವಾದ ಅನಾವೃಷ್ಟಿ ಯು ತಲೆದೋರುವುದು. ಸೂರನ ತಾಪವು ಮೂರುಲೋಕಗಳನ್ನೂ ದಹಿಸುವಂತೆ ಅತಿಪ್ರಬಲವಾಗುವುದು. ಮತ್ತು ಆಗ ಪಾತಾಳದಿಂದ ಸಂಕರ್ಷಣವ ಮುಖಾಗ್ನಿ ಜ್ವಾಲೆಗಳು ಹೊರಟು, ಪ್ರಚಂಡವಾದ ವಾಯು ವಿನ ಸಹಾಯದಿಂದ ಬ್ರಹ್ಮಾಂಡವೆಲ್ಲವನ್ನೂ ವ್ಯಾಪಿಸಿ ದಹಿಸುತ್ತಬರುವುವು.