ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦೪ ಶ್ರೀಮದ್ಭಾಗವತನ [ಅಧ್ಯಾ.. ಉಪದೇಶಿಸಿದನು. ಆ ಚತುರುಖನು ತನ್ನ ಮಗನಾದ ನಾರದನಿಗೆ ಹೇಳಿ ದನು. ಆ ನಾರದಮುನಿಯು ಪೂರದಲ್ಲಿ ನನ್ನ ಜನಕನಾದ ವ್ಯಾಸಮಹ ರ್ಪಿಗೆ ಉಪದೇಶಿಸಿದನು. ಆ ನನ್ನ ಜನಕಸಿಂದ ನಾನು ಉಪದೇಶಹೊಂದಿ ದೆನು. ಓ ಗಜೇಂದ್ರಾ! ಇದೇ ಸಂಹಿತೆಯನ್ನು ಮುಂದೆ ನೈಮಿಶಾರಣ್ಯ ದಲ್ಲಿ ಭಗವತ್ಕಥಾಶ್ರವಣರೂಪವಾದ ಒಂದಾನೊಂದು ಸತ್ರ ಯಾಗವು ನಡೆಯುವಾಗ, ಶೌನಕಾದಿಮುನಿಗಳ ಪ್ರಾರ್ಥನೆಯಮೇಲೆ, ಈ ಸೂತಪಾ ರಾಣಿಕನು ಅಲ್ಲಿನ ಮಹರ್ಷಿಗಳಿಗೆಲ್ಲಾ ಉಪದೇತಿಸುವನು. ಇದು ನಾಲ್ಕ ನೆಯ ಅಧ್ಯಾಯವು. ( ಭಾಗವತ ಸಂಹಿತೆಯಲ್ಲಿ ಪ್ರಧಾನಪ್ರತಿವಾದ್ಯ ವಾದ ww1 " ಏಷಯವ. ... ಓ ಪರೀಕ್ಷಿದ್ರಾಜಾ ! ಮುಖ್ಯವಾಗಿ ಈ ಭಾಗವತ ಸಂಹಿತೆಯಲ್ಲಿ ಆಿತದುಃಖನಿವಾರಕನಾಗಿಯೂ, ಏಶ್ಚಾತ್ಮಕನಾಗಿಯೂ ಇರುವ ತ್ರಿಮ ನಾರಾಯಣನ ಗುಣಗಳನ್ನೂ , ಚರಿತ್ರಗಳನ್ನೂ ವರ್ಣಿಸುವುದೇ ಪ್ರಧಾನ ವಿಷಯವು. ಯಾವನ ಪ್ರಸಾದದಿಂದ ಅನುಗ್ರಹದಿಂದ ಬ್ರಹ್ಮನೂ, ಯಾವನ ಕ್ರೋಧದಿಂದ ರುದ್ರನೂ ಜಪಿಸಿದರೋ, ಅಂತಹ ಜಗತ್ಕಾರಣ ನಾದ ಶ್ರೀಹರಿಯೇ ಸಮಸ್ಯಚೇತನರಿಗೂ ಮುಖ್ಯವಾದ ಧೈಯವಸ್ತು ಎಂಬುದನ್ನು ತಿಳಿಸುವುದಕ್ಕಾಗಿಯೇ ಈ ಪುರಾಣದಲ್ಲಿ ಆ ಭಗವಂತನ ಗುಣ ಗಳೇ ವಿಶೇಷವಾಗಿ ವರ್ಣಿಸಲ್ಪಟ್ಟಿವೆ. ಓ ಗ ' ನಿನಗಾದರೋ ಈಗ ಋಷಿಶಾಪದಿಂದ ಸರ್ಪದಷ್ಯನಾಗಿ ಸಾಯುವ ಕಾಲವು ಸಮೀಪಿಸಿತು. ಆದರೆ ನೀನು ಮಾತ್ರ ಈಗ ಆ ಸಾವಿಗಾಗಿ ಚಿಂತಿಸಬಾರದು. ಮರಣಕ್ಕಾಗಿ ಭಯಪಡುವುದು ಕೇವಲ ಪಶುಬುದ್ಧಿಯೆಂದು ತಿಳಿ : ಏಕಂದರೆ, ಮರಣಕ್ಕೆ ವಿಷಯವಾದುದು ನಿನ್ನ ದೇಹವೇ ಹೊರತು ನೀನಲ್ಲ ! ದೇಹದಂತೆ ನೀನು ಮೊದಲಿಲ್ಲದಿದ್ದು, ಈಗ ಹೊಸದಾಗಿ ಹುಟ್ಟಿದವನಲ್ಲ ! ಈ ದೇಹವು ಬಿದ್ದು ಹೋಗುವುದರಿಂದ ನೀನು ಸಾಯತಕ್ಕವನೂ ಇಲ್ಲ! ಈಗ ಹುಟ್ಟಿದ ನೀನೇ ಬೀಜಾಂಕುರದಂತೆ ಮುಂದೆ ಪತ್ರಪೌತ್ರಾದಿರೂಪದಿಂದ ತಿರುಗಿ ಜನಿಸು