ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, 8.] ದ್ವಾದಶ ಸ್ಕಂಧರು. ೨೭ow ವವನೂ ಅಲ್ಲ ! ಕಾಷ್ಠದಲ್ಲಿರುವ ಬೆಂಕಿಯು, ಆಕಾಷ್ಟಕಿಂತಲೂ ಬೇರೆ ಯಾಗಿರುವಂತೆ ನೀನೂ ಈ ದೇಹಕ್ಕಿಂತಲೂ ಭಿನ್ನ ನಾಗಿರುವೆ. ಮನುಷ್ಯನು ಕನಸಿನಲ್ಲಿ ತನ್ನ ತಲೆಯು ಕತ್ತರಿಸಿ ಬಿದ್ದು ಹೋದಂತೆ ತಾನೇ ಕಂಡರೂ, ಆ ಸ್ವಪ್ನ ದೇಹಕ್ಕಿಂತಲೂ ತಾನು ಬೇರೆಯಾಗಿರುವಂತೆ, ಜಾಗರಾವಸ್ಥೆಯ ಕ್ಲಿಯೂಕೋಡ, ಮರಣಾ ಗಳನ್ನು ಹೊಂದುವ ದೇಹಕ್ಕಿಂತಲೂ ತಾನು ಭಿ ನೃ ನೆಂದೇ ತಿಳಿಯಬೇಕು. ಆತ್ಮವು ದೇಹಕ್ಕಿಂತಲೂ ಭಿನ್ನವಾದುದು. ಅ ಆತ್ಮಕ್ಕೆ ಜನವವೂ ಇಲ್ಲ. ಮರಣವು ಇಲ್ಲ. ಗಡಿಗೆಯು ಒಡೆದು ಹೋದ ಮೇಲೆ, ಅದರೊಳಗಿನ ಫುಟಾಕಾಶವು ನಿರುಪಾಧಿಕವಾಗಿ ಮೊದಲಿನಂತೆ ಮಹಾಕಾಶದೊಡನೆ ಸಾಮ್ಯಹೊಂದುವಂತೆ, ದೇಹಗತನಾದ ಜೀವನೂ ಕೂಡ, ಆ ದೇಹವ ನತಿಸಿಹೋದಮೇಲೆ ಎಂದರೆ, ಪರಮಾವಾಸನೆ ಯಿಂದ ಪ್ರಕೃತಿಸಂಬಂಧವ್ರ ಸಿಶೆಷವಾಗಿ ಬಿಟ್ಟು ಹೋದಮೇಲೆ ಪಶು ದ್ಯಾವಸ್ಥೆಯನ್ನು ಹೊಂದಿ, ಪರಮಾತ್ಮನೊಡನೆ ಸಾಮ್ಯವನ್ನು ಹೊ೦ದು ವನು ಮನಸ್ಸಿ- ಜೀವಸಿಗೆ ಆತ್ಮಗಳ ಮೂಲಕವಾಗಿ, ಗುಣಮಯಗಳಾದ ದೇಹಗಳನ್ನು ತಂದು ಕೊಡಿಸುವುದು. ಆ ಮನಸ್ಸನ್ನು ಕರ ಪ್ರವೃತ್ತ ವಾಗಿ ಮಾಡುವುದ; ಮಾಯೆಯು. ಆದುದರಿಂದ ಮಾಯೆ, ಮನಸ್ಸು, ದೇಹಿ, ಕರಗಳು, ಇವೆಲ್ಲವುಗಳಿಂದ ಜೀವಸಿಗೆ ಸಂಸಾರಬಂಧವುಂಟಾಗು ವುದು, ಎಣ್ಣೆ, ಬತ್ತೆ, ಪಾತ್ರೆ, ಇವಿಷ್ಟನ್ನೂ ಸೇರಿಸಿ, ಅಗ್ನಿ ಸಂಯೋಗವನ್ನು ಮಾಡಿದಾಗಲ್ಲವೇ ದೀಪವ ಉರಿಯುವುದು, ಅದರಂತೆಯೇ ಸಂಸಾರವೂ ಕೂಡ, ಕರಾರಬ್ದಗಳಾದ ದೇಹೇಂದ್ರಿಯಾದಿಗಳ ಕೂಟವಿರುವವರೆಗೆ ಉ ದೀಪಿಸುತ್ತಿರುವುದು. ಇಲ್ಲಿ ಮನಸ್ಸೇ ಪಾತ್ರೆ'ಕರ ತೈಲವು.ದೇಹವೇ ಬ ತಿ: ದೇಹಾತ್ಮಾಭಿಮಾನವೇ ಅಗ್ನಿ ಸಂಯೋಗವು, ಸಂಸಾರವೇ ದೀಪವೆಂದು ತಿಳಿಯಬೇಕು, ಸತ್ಯಾಜ್ಯಗುಣಗಳ ಸಂಯೋಗದಿಂದಲೇ ಜನನಮರಣಗಳೇ ಹೊರತು, ಆವ ಆತ್ಮನಿಗೆ ಸ್ವತಸ್ಸಿದವಲ್ಲ. ಆ ದೇಹದೊಡನೆ ಆತ್ಮನಿಗೆ ಜನನಮರಣಗಳೂ ಇಲ್ಲ. ಆ ಆತ್ಮವು ವ್ಯಕ್ತವಾದ ಶರೀರಕ್ಕಿಂತಲೂ, ಅವ್ಯಕ್ತವಾದ ಮೂಲಪ್ರಕೃತಿಗಿಂತ ಭಿನ್ನವಾದುದು. ಅವೆರಡಕ್ಕಿಂತ ಲೂ ವಿಜಾತೀಯವಾದುದರಿಂದಲೇ ಆತ್ಮವು ಸ್ವಯಂಪ್ರಕಾಶವೆನಿಸಿರುವು