ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨toL ಶ್ರೀಮದ್ಭಾಗವತವು [ಅಧ್ಯಾ. . ದು. ಆಕಾಶವು ಒಂದು ಫುಲಾರಿಗಳಲ್ಲಿ ಸೇರಿದ್ದಾಗಲೂ,ಆ ಉಪಾಧಿಗಳಿಗಿಂ ತಲೂ ಬೇರೆನಿಸಿರುವಂತೆ, ಆತ್ಮವು ದೇಹದಲ್ಲಿದ್ದರೂ, ಅದಕ್ಕಿಂತಲೂ ಬೇರೆಯಾಗಿ, ಆ ದೇಹಕ್ಕೆ ತಾನೇ ಧಾರಕವಾಗಿಯೂ, ಸ್ವಭಾವದಿಂದ ಆ ಪರಿಚ್ಛಿನ್ನವಾಗಿಯೂ, ಸ್ವರೂಪದಿಂದ ನಿರ್ವಿಕಾರವಾಗಿಯೂ ಇರುವುದು. ಈವಿಧವಾಗಿ ದೇಹಗತವಾಗಿರುವ ಆತ್ಮವನ್ನು ನಿನ್ನಿಂದಲೇ ನೀನು ವಿಮರ್ಶಿಸಿ ತಿಳಿದುಕೊಳ್ಳುವನಾಗು! ಶಾಸ್ತಜನ್ಯಜ್ಞಾನದಿಂದಲೂ, ವಿಮರ್ಶನಾಪೂ ರೈಕವಾದ ಬುದ್ಧಿಯಿಂದಲೂ, ಭಗವಾನದಿಂದಲೂ ಸೀನು ದೃಢಮ ನಸ್ಸುಳ್ಳವನಾಗಿದ್ದರೆ, ಆಗ ತಕ್ಷಕನು ಬ್ರಾಹ್ಮಣಶಾಪದಿಂದ ಪ್ರೇರಿತನಾಗಿ ಬಂದರೂ ನಿನ್ನನ್ನು ದಹಿಸಲಾರನ.. ಆ ಸತ್ಯೇಶ್ವರನು ಮೃತ್ಯುವಿಗೂ ಮೃತ್ಯವೆನಿಸಿರುವನು. ಆದುದರಿಂದ ಮೃತ್ಯವೂ ಅವನನ್ನು ಸಮೀಪಿಸು ವುದಕ್ಕೆ ಭಯಪಡುವುದು. ಆದುದರಿಂದ ನೀನು ಆ ಪರಬ್ರಹ್ಮನೇ ತಾನು! ರಾನೇ ಆಪರಬ್ರಹ್ಮ” ನೆಂಬ ಮನೋಭಾವನೆಯಿಂದ, ಆ ಪರಮಾತ್ಮನಲ್ಲಿ ನಿನ್ನ ಆತ್ಮವನ್ನು ಏಕೀಕರಿಸಿದಂತೆ (ಎಂದರೆ, ಆ ಪರಮಾತ್ಮನಿಗೆ ಶೇಷ ಭೂತನೆಂಬುದನ್ನು ) ಧ್ಯಾನಿಸುತ್ತಿದ್ದರೆ, ಆ ಭಗವದನುಭವಾನಂದದಲ್ಲಿ ಮಗ್ನನಾದ ನಿನಗೆ, ಈ ಪ್ರಪಂಚವಾಗಲಿ, ಕೊನೆಗೆ ನಿನ್ನ ಶರೀಲವಾಗಲಿ ಯಾವುದೂ ತಿಳಿಯದಿರುವುದರಿಂದ, ತಕ್ಷಕನು ನಿನ್ನ ಕಾಲನ್ನು ನಾಲಗೆಗೆ ಳಿಂದ ನೆಕ್ಕುತ್ತ, ತನ್ನ ವಿಷಮುಖದಿಂದ ಕಚ್ಚಿ ದರೂ, ನಿನಗೆ ಅದರ ಬಾಥ ಯೇನೂ ತೋರದು! ಓ ಪರೀಕ್ಷಿದ್ರಾಜಾ ! ಆ ಭಗವಂತನ ಚರಿತ್ರವಿಷಯ ವಾಗಿ ನೀನು ಕೇಳಿದ ಪ್ರಶ್ನೆಗಳಿಗೆಲ್ಲಾ ನಾನು ಉತ್ತರವನ್ನು ಹೇಳಿದು ಚಾ ಯಿತು. ಇನ್ನೂ ಕೇಳಬೇಕಾದ ವಿಷಯವೇನಾದರೂ ಇದ್ದರೆ ಕೇಳಿ ಬಹುದು. ಎಂದನು. ಇದು ಐದನೆಯ ಅಧ್ಯಾಯವು.