ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ. ೬.|| ದಶಸ್ಕಂಧನು. ೨೭o (ಶುಕಮುನಿಯು ಪರೀಕ್ಷಿದ್ರಾಜನನ್ನು ಬಿಟ್ಟುಹೆ) ದುಡು.ತಕ್ಷಕನು ಪರೀಕ್ಷಿದ್ರಾಜನನ್ನು ಕಚ್ಚಿದುದು. ಜನಮೇಜಯನ ಸರ್ಪಯಾಗದ, ವೇದವಿಭಾಗ ಪ್ರಚಾರಾದಿಕ್ರಮಗಳು. ಸಕಲಭೂತಗಳಲ್ಲಿಯೂ ಸಮದೃಷ್ಟಿಯುಳ್ಳವನಾಗಿಯೂ, ವ್ಯಾಸ ಪುತ್ರನಾಗಿಯೂ ಇರುವ ಆ ಶುಕಮಹರ್ಷಿಯು, ಪರೀಕ್ಷಿದ್ರಾಜನಿಗೆ ಹೀಗೆ ಭಾಗವತಸಂಹಿತೆಯನ್ನು ಪೂರ್ಣವಾಗಿ ಹೇಳಿ ಮುಗಿಸಿದಮೇಲೆ, ಆ ರಾಜನು ಮುಂದೆ ಬಂದು, ಆ ಮಹರ್ಷಿಯ ಪಾದಗಿ ಮುಗಿದು ನಿಂತು ವಿಜ್ಞಾಪಿಸವನು 'ಓ ಮಹಾತ್ಮಾ' ಆದ್ಯಂತರಹಿತನಾ ದ ಆ ಶ್ರೀಹರಿಯ ಗುಣಚರಿತ್ರಗಳನ್ನೂ, ಭಗವತ್ಪಾಪ್ತಿಗೆ ಉಪಾಯವ ನ್ಯೂ , ನೀನು ನನ್ನ ಕೃಪೆಯಿಟ್ಟು ತಿಳಿಸಿದುದರಿಂದ ನಾನು ಧನ್ಯನಾದೆನು ಅನುಗೃಹೀತನಾದೆನು! ಭಗವತ್ಪರಾಯಣರಾದ ಸಿನ್ನಂತವರಿಗೆ, ನನ್ನಂತೆ ಸಂಸಾರತಾಪದಲ್ಲಿ ಸಿಕ್ಕಿ ಸಂಕಟಪಡುತ್ತಿರುವ ಪ್ರಾಣಿಗಳಲ್ಲಿ ಅನುಗ್ರಹಬು ಯು ಹುಟ್ಟುವುದು ಸಹಜವೇಹೊರತು, ಇದೊಂದಾಶ್ ರವೆಂದು ನನಗೆ ತೋರಲಿಲ್ಲ. ಭಗವದ್ದುಣಾನುವರ್ಣನರೂಪವಾದ ಭಾಗವತಸಂಹಿತೆಯನ್ನೆ ಲ್ಲಾ ನಾನು ನಿನ್ನಿಂದ ಪೂರ್ಣವಾಗಿ ಕೇಳಿದಂತಾಯಿತು. ಇನ್ನು ನಾನು ಕೃತಾರ್ಥನು' ನಿರ್ಭಯವಾದ ಬ್ರಹ್ಮಾನುಭವವೆಂಬ ಮಹಾನಂದದಲ್ಲಿ ನೀನು ನನ್ನನ್ನು ಮುಳುಗಿಸಿರುವಾಗ, ನನಗೆ ಮೃತ್ಯುಭಯವೆಲ್ಲಿಯದು ? ತಕ್ಷಕನಿಂದ ನನಗೆ ಮೃತ್ಯುವುಂಟಾಗುವುದೆಂಬ ಭಯವು ನನಗೆ ಇಷತ್ತಾದರೂ ಇಲ್ಲವು. ಇನ್ನು ನಾನು ಎಂತಹ ಮೃತ್ಯುಗಳಿಗೂ ಭಯಪಡಲಾರೆನು, ಓ ಬ್ರಾಹ್ಮ ಷೋತ್ತಮಾ ! ಇನ್ನು ನನಗೆ ಅನುಜ್ಞೆಯನ್ನು ಕೊರ!ನಿನ್ನ ಉಪದೇಶದಂತೆ ನಾನು ನನ್ನ ಮನೋವಾಕ್ಕಾಯಗಳೆಂಬ ತ್ರಿಕರಣಗಳನ್ನೂ ಬೇರೆ ವಿಷಯ ಗಳಿಗೆ ಹೋಗದಂತೆ ತಡೆದು, ಆ ಭಗವಂತನಲ್ಲಿಯೇ ನೆಲೆಗೊಳಿಸಿ, ದೇಹಾವ ಸಾನವನ್ನು ನಿರೀಕ್ಷಿಸುತ್ತಿರುವೆನು. ನೀನು ಆತ್ಮ ಪರಮಾತ್ಮ ಜ್ಞಾನೋಪದೇ ಶದಿಂದ ನನ್ನ ಅಜ್ಞಾನವೆಲ್ಲವನ್ನೂ ಸೇರಿಸಿ ಆ ಭಗವತ್ಮಾಪ್ತಿಗೆ ಉಪಾಯ ವನ್ನೂ ತೋರಿಸಿರುವೆ. ಇನ್ನು ನನಗೆ ಆಗಬೇಕಾದುದೇನು!”ಎಂದನು. ಹೀಗೆ