ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೦೮ ಶ್ರೀಮದ್ಭಾಗವತರು [ಅಧ್ಯಾ. ೬. ಸೂತಪೌರಾಣಿಕನು, ನೈಮಿಶಾರಣ್ಯವಾಸಿಗಳಾದ'ಶೌನಕಾದಿಮಹರ್ಷಿಗಳಿಗೆ ಪಕ್ಷಿಚುಕಸಂವಾದರೂಪವಾದ ಭಾಗವತಕಥೆಗಳನ್ನು ಹೇಳಿ ಮುಗಿಸಿದ ಮೇಲೆ, ಅವರನ್ನು ಕುರಿತು «« ಎಲೈ ಮಹರ್ಷಿಗಳೆ ! ಪರೀಕ್ಷಿದ್ರಾಜನು ಹಾಗೆ ವಿಜ್ಞಾಪಿಸಿದೊಡನೆ, ಪೂಜ್ಯನಾದ ಶುಕಮಹರ್ಷಿಯು, ಅವನಿಗೆ ಹಾಗೆಯೇ ಆಗಲೆಂದು ಅನುಜ್ಞೆಯನ್ನು ಕೊಟ್ಟು, ಆ ರಾಜಸಿಂದ ಸತ್ತ ನಾಗಿ,ಇತರಮಹರ್ಷಿಗಳೊಡನೆ ಆಸ್ಮಳವನ್ನು ಬಿಟ್ಟು ಹೊರಟುಹೋದನು. ಇತ್ತಲಾಗಿ ಪರೀಕ್ಷಿದ್ರಾಜನು ಅಲ್ಲಿಂದಾಚೆಗೆ ಪರಮಾತ್ಮನಲ್ಲಿ ತನ್ನ ಆತ್ಮ ವನ್ನು ನೆಲೆಗೊಳಿಸಿದಂತೆ ಧ್ಯಾನಯೋಗವನ್ನು ಹಿಡಿದು, ಆ ಪರಮಾತ್ಮ ಧ್ಯಾನದಿಂದ ದೇಹೇಂದ್ರಿಯವ್ಯಾಪಾರಗಳೆಲ್ಲವನ್ನೂ ಮರೆತು, ಮರದ ತುಂಡಿನಂತೆ ಸಿಶಿಷ್ಯನಾಗಿದ್ಧನು. ಹೀಗೆ ಪಕ್ಷಿವಿಜನು ಶುಕಮಹಾ ಮುನಿಯ ಉಪದೇಶದಿಂದ ದೇಹಾತ್ಮಭ್ರಮವೇ ಮೊದಲಾದ ಸಂಶಯಗ ಬೆಲ್ಲವನ್ನೂ ಸೀಗಿ ಏಷಯಸಂಗವನ್ನು ಕೊರೆದು, ಗಂಗಾನಯ ತೀರದಲ್ಲಿ ಪೂರಗ್ರವಾದ ದರ್ಭಾಸರಣದಮೇಲೆ, ಉತ್ತರಾಭಿಮುಖವಾಗಿ ಕುಳಿತು, ಸಮಾಧಿಬಲಬಂದ ತೀಪ್ರಕಾಲದಲ್ಲಿಯೇ ಬ್ರಹ್ಮ ಸ ರೋಪ್ಯವನ್ನು ಎಂದರೆ ಮುಕ್ಕಾವಸ್ಥೆಯನ್ನು ಹೊಂದಿದನು. ಓಶೆಸ ಕಾಲಗಳೆ : ಇಷ್ಟರಲ್ಲಿಯೇ ಇತ್ತಲಾಗಿ, ಬ್ರಾಹ್ಮಣಪುತ್ರನಾದ ಶೃಂಗಿಯಿಂದ ಪ್ರೇರಿತನಾದ ತಕ್ಷಕನು, ಈ ಪರೀಕ್ಷಿದ್ರಾಜನನ್ನು ಕಚ್ಚಿ ಕೊಲ್ಲಬೇಕೆಂಬ ಉದ್ಮಶದಿಂದ ಹೊರಟು ಬರುತ್ತಿರುವಾಗ, ದಾರಿಯಲ್ಲಿ ಕಾಶ್ಯಪನೆಂಬ ಬ್ರಾಹ್ಮಣನೊಬ್ಬನನ್ನು ಸಂ ಧಿಸಿದನು. ಈ ಬ್ರಾಹ್ಮಣನು ಪಿಷವೈದ್ಯವನ್ನು ಚೆನ್ನಾಗಿ ಬಲ್ಲವನು ಪರೀ ಕೆದ್ರಾಜನಿಗೆ ಸರ್ಪಗಂಡವೊದಗಿರುವುದನ್ನು ಕೇಳಿ, ಅವಸಿಕ ಚಿಕಿತ್ಸೆ ಮಾಡಿ ವಿಶೇಷವಾದ ಧನವನ್ನು ಸಂಪಾದಿಸಬೇಕೆಂಬ ಆಶೋತ್ತರದಿಂದ ಆ ಬ್ರಾಹ್ಮಣನು ಪರೀಕ್ಷಿದ್ರಾಜನಬಳಿಗೆ ಹೋಗುತ್ತಿದ್ದನು ತಕ್ಷಕರು, ಅವನ ವೃತ್ತಾಂತವನ್ನು ವಿಚಾರಿಸಿ ತಿಳಿದುಕೊಂಡು, ಆತನ ಶಕ್ತಿಯನ್ನು ಪರೀಕ್ಷಿಸುವುದಕ್ಕಾಗಿ ಮುಂದಿದ್ದ ಒಂದಾನೊಂದು ಹಸಿಯ ಮರವನ್ನು ಕಚ್ಚಿ, ತನ್ನ ವಿಷಾಗ್ನಿಯಿಂದ ಅದನ್ನು ಕೇವಲಭರಾಶಿಯಂತೆ ಮಾಡಿ ಬಿಟ್ಟನು, ಒಡನೆಯೇ ಕಾಶ್ಯಪನು, ತನ್ನ ಮಂತ್ರಶಕ್ತಿಯಿಂಹ ಆ ಮರ