ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦.೦ ಶ್ರೀಮದ್ಭಾಗವತನ [ಅಧ್ಯಾ. ೬. ಕರೆದರೂ ತಕ್ಷಕನುಮಾತ್ರ ಬಾರದಿದ್ದುದನ್ನು ನೋಡಿ ಜನಮೇಜಯನು ಅಲ್ಲಿದ್ದ ಬ್ರಾಹ್ಮಣರನ್ನು ಕುರಿತು “ಓ ಮಹರ್ಷಿಗಳೆ ! ನಾನು ಮುಖ್ಯವಾಗಿ ಯಾವನನ್ನು ದೈತಿಸಿ ಈ ಸರ್ಪಯಾಗವನ್ನಾರಂಭಿಸಿದೆನೋ, ಆ ಸರ್ಪಾ ಧಮನಾದ ತಕ್ಷಕನೊಬ್ಬನುಮಾತ್ರ ಇನ್ನೂ ಇಲ್ಲಿ ಬಾರದಿರಲು ಕಾರಣ ವೇನು ? ಅವನು ಈ ಅಗ್ನಿ ಕುಂಡದಲ್ಲಿ ಬಿದ್ದು ಭಸ್ಮವಾದಹೊರತು ನನಗೆ ತೃಪ್ತಿಯಿಲ್ಲ” ವೆಂದನು. ಅದಕ್ಕೆ ಮುತ್ತಿಕ್ಕುಗಳು «ಓ ರಾಜೇಂದ್ರಾ! ಆ ತಕ್ಷಕನು ಇಂದ್ರನಲ್ಲಿ ಮರೆಹೊಕ್ಕಿರುವುದರಿಂದ, ಇಂದ್ರನು ಅವನನ್ನು ಬಿಟ್ಟುಕೊಡದೆ ತನ್ನ ಕ್ಲಿಟ್ಟುಕೊಂಡು ರಕ್ಷಿಸುತ್ತಿರುವನು. ಆದುದರಿಂದಲೇ ತಳಕನು ಇಲ್ಲಿಗೆ ಬಾರದಿರುವನು” ಎಂದರು. ಅದಕ್ಕೆ ಜನಮೇಜಯನು” ಹಾಗಿದ್ದರೆ ತಕ್ಷಕಸ ಇಂದ್ರಸಹಿತನಾಗಿಯೇ ಬಂದು ಈ ಅಗ್ನಿಕುಂಡಲ್ಲಿ ಬಿಳುವಹಾಗೆ ಮಾಡಬಾರದೇಕೆ ?” ಎಂದನು, ಆಗ ಋತ್ವಿಕ್ಕುಗಳು ಹಾಗೆಯೇ ಆಗಲೆಂದು ಮಂತ್ರ ಪುನಶ್ಚರಣೆ ಮಾಡಿ, “ಓ ತಕ್ಷಣಾ ! ಇಂದ್ರನೊಡ ನಿಯೂ, ಅವನ ಅನುಚರರಾದ ಮರುದ್ಗಣಗಳೊಡನೆಯೂ ಕೂಡಿ ಬಂದು ನೀನು ಈ ಅಗ್ನಿ ಯಲ್ಲಿ ಬಿಳುವನಾಗು” ಎಂದು ಕೂಗಿ (ಸಹೇಂದ್ರಾಯ ತಕ್ಷಕಾಯ” ಎಂಬ ಆಹ್ವಾನಮಂತ್ರದಿಂದ ಹೋಮವನ್ನು ಮಾಡುವುದಕ್ಕೆ ತೊಡಗಿದರು. ಬ್ರಾಹ್ಮಣರ ಬಾಯಿಂದ ಈ ವಾಕ್ಯಗಳು ಹೊರಟಕೂಡಲೆ, ಅತ್ತಲಾಗಿ ತಕ್ಷನೊಡನೆ ಕುಳಿತಿದ್ಮ ಇಂದ್ರನ ವಿಮಾನವ ನಿಜಸ್ಥಾನದಿಂದ ಕದಲಿತು. ಇಂದ್ರನಿಗೆ ಭಯದಿಂದ ಮೈಯಲ್ಲಿ ನಡುಕವುಂಟಾಯಿತು. ಸ್ವಲ್ಪ ಕಾಲದಲ್ಲಿಯೇ ತಕ್ಷಕಸಹಿತನಾಗಿದ್ದ ಇಂದ್ರನ ವಿಮಾನವು ಆಕಾಶ ಹಿಂದ ಕೆಳಕ್ಕೆ ಬೀಳುತ್ತಿರುವುದನ್ನು ನೋಡಿ,ಹೇವಗುರುವಾದ ಬೃಹಸ್ಪತಿಯು ತಟ್ಟನೆ ಈ ಯಜ್ಞಶಾಲೆಗೆ ಬಂದು ಜನಮೇಜಯರಾಜನನ್ನು ಕುರಿತು « ಓ ರಾಜೇಂದ್ರಾ! ಈ ತಕ್ಷಕನು ನಿನಗೆ ವಧಾರ್ಹನಲ್ಲ ! ಇದಲ್ಲದೆ ಇವನು ಅಮೃತಪಾನವನ್ನು ಮಾಡಿರುವುದರಿಂದ ಇವನಿಗೆ ಜರಾಮರಣಗ ಇಲ್ಲ. ನಿನ್ನ ತಂದೆಯನ್ನು ಕೊಂದನೆಂಬ ಕೋಪದಿಂದಲ್ಲವೇ ಈಗ ನೀನು ಅವನಮೇಲೆ ಹಗೆತೀರಿಸಿಕೊಳ್ಳುವುದಕ್ಕೆ ಯತ್ನಿಸಿರುವೆ, ಆ ಬ್ರಾಂತಿಯನ್ನು ಬಿಟ್ಟು ಬಿಡು ! ಪ್ರಾಣಿಗಳಿಗೆ ಜನನಮರಣಗಳಾಗಲಿ, ಸ್ವರ್ಗನರಕಾರಿಗತಿಕ