ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೧ ಅಧ್ಯಾ. ೬.] ಪ್ಯಾವಶಕ್ಕಂಧವು. ಳಾಗಲಿ, ಅವರವರ ಕಲ್ಮಾನುಸಾರವಾಗಿ ಬಂದೊದಗುವುವು. ಆದುದರಿಂದ ಒಬ್ಬರ ಜನನಮರಣಗಳಿಗಾಗಲಿ, ಸುಖದುಃಖಗಳಿಗಾಗಲಿ ಮತ್ತೊಬ್ಬರನ್ನು ಕಾರಣವೆಂದು ತಿಳಿಯುವುದು ತಪ್ಪ ! ಪ್ರಾಣಿಗಳ ಮರಣಕ್ಕೆ, ಸರ್ಪಗಳು, ಕಳ್ಳರು, ಶತ್ರುಗಳು, ಬೆಂಕಿ, ನೀರು, ಹಸಿವು, ದಾಹ, ರೋಗಾದ್ರುಪ ದ್ರವಗಳು, ಮುಂತಾಗಿ ಎಷ್ಟೋ ಕಾರಣಗಳೇರ್ಪಟ್ಟಿರುವುವು ಆದರೆ ಇವೊಂದೂ ಸಿಜವಾದ ಕಾರಣವಲ್ಲ. ಇವೆಲ್ಲವೂ ಅವರವರು ಮಾಡಿದ ಪ್ರಾರಬ್ಧ ಕಮ್ಮಗ ಅನುಭವವೇ ಹೊರತು ಬೇರೆಯ! ಆದುದರಿಂದ ಓ ರಾಜಾ ! ನೀನು ಈಗ ಆರಂಭಿಸಿರುವ ಯಾಗವನ್ನು ಇಷ್ಟಕ್ಕೆ ಸಿದ್ಧಿಸು ! ಈಗ ಸೀನು ಮಾಡುತ್ತಿರುವುದು ಅಭಿಚಾರಿಕಕೃತ್ಯ ಶೂನ್ಯ ಅಥವಾ ಮಾಟ) ವೇಹೊರತು ಧರೆ ಸಾಧಕವಾದ ಯಾಗವಲ್ಲ! ಇದುವರೆಗೇ ನಿನ್ನಿಂದ ಸಿರಹ ದಾಥಿಗಳಾದ ಅನೇಕಸರ್ಪಗಳು ದಗ್ಯವಾದುವು. ! ಆದುದಾಯಿತು. ಆ ಸರ್ಪಗಳಿಗೂ ತಮ್ಮ ಪ್ರಾರಬಕವು ಹಾಗಿದ್ದುದರಿಂದ, ಈ ವಿಧ ವಾಗಿ ಮೃತಿಹೊಂದಬೇಕಾಯಿತು. ಇನ್ನು ಮೇಲಾ ದರೂ ಈ ಕಾದ್ಯವನ್ನು ನಿಲ್ಲಿಸು"ಎಂದನು. ಜನಮೇಜಯನು ಆ ಮಹರ್ಷಿಯ ಮಾತನ್ನು ಗೌರವಿಸಿ, ಅವನನ್ನು ಯಥೋಚಿತವಾಗಿ ಸತ್ಕರಿಸಿ, ತಾನು ನಡೆಸುತ್ತಿದ್ದ ಸರ್ಪಯಾಗ ವನ್ನು ಅಷ್ಟಕ್ಕೇ ನಿಲ್ಲಿಸಿಬಿಟ್ಟಿದೆ ಓ ಮಹರ್ಷಿಗಳೆ | ಬ್ರಾಹ್ಮಣಪುತ್ರನ ಕೋಪದಿಂದ ಪರೀಕ್ಷಿಗೂ, ಜನಮೇಜಯನ ಕೋಪದಿಂದ ಸರ್ಪ ಕುಲಕ್ಕೂ ಮೃತ್ಯುವುಂಟಾದುದಕ್ಕೆ, ಅವರವರ ಕೋಪವೇ ನಿಜವಾದ ಕಾರಣವೆಂದು ತಿಳಿಯಬಾರದು. ಇವೆಲ್ಲಕ್ಕೂ ಮೂಲಕಾರಣವು ಆ ಭಗ ವಂತನ ಮಾಯೆಯೇ ! ಒಬ್ಬನನ್ನು ಬಾಧೆಗೆ ಕಾರಣವಾಗಿಯೂ, ಮತ್ತೊಬ್ಬ ನನ್ನು ಆ ಬಾಧೆಗೆ ಗುರಿಯಾಗಿಯೂ ಮಾಡುವುದೂ ಆ ಭಗವಂತನ ಮಾಯೆಯೊ : ವಿಷ್ಣುವಿನ ಆ ಮಹಾಮಾಯೆಯಿಂದಲೇ ಜೀವಾತ್ಮನು ಸತ್ಯಾಗಿಗುಣಗಳ ವ್ಯಾಪಾರದಿಂದ, ವಿಷಯಗಳಲ್ಲಿ ಮೋಹಗೊಳ್ಳುವನು ಆದರೆ ಪರಮಾತ್ಮನ ಸ್ವರೂಪವನ್ನು ಒಂದಾವರ್ತಿಯಾದರೂ ವಿಮರ್ಶಿಸಿ ತಿಳಿದವರಮೇಲೆ ಆ ಮಾಯೆಯು ತನ್ನ ಕಾವ್ಯವನ್ನು ಸಾಧಿಸಲಾರದು ಹೀಗಿರುವಾಗ ಸಾಕ್ಷಾತ್ಪರಮಪುರುಷನು ಅದಕ್ಕೆ ಬದ್ಧನಾಗಲಾರನೆಂಬು 171 B