ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ. ಆ.] ದ್ವಿದತಕ್ಕಂಧನ ವ್ಯತಿರೇಕವನ್ನೂ ಹೊಂದಿರುವುದು. ಪುರುಷನ ಚಿತ್ರವು ತಾನಾಗಿಯಾಗಲಿ, ಯೋಗಾಭ್ಯಾಸಬಲದಿಂದಾಗಲಿ, ಯಾವಾಗ ಜಾಗರಾದ್ಯವಸ್ಥೆಗಳಿಗೆ ನೆಲೆ ಯಾಗದೆ ಏಷಯಗಳಿಂದ ವಿಮುಖವಾಗುವುದೋ, ಆಗ ಆತ್ಮಸ್ವರೂಪ ಜ್ಞಾನವುಂಟಾಗಿ, ಅದರಿಂದ ಅವನಿಗೆ ಸಂಸಾರರೂಪವಾದ ಪಾಶವು ಬಿಟ್ಟು ಹೋಗುವುದು. ಓ ಮಹರ್ಷಿಗಳೆ!ಮೇಲೆ ಹೇಳಿದಂತೆ ಹತ್ತು ಲಕ್ಷಣಗ ಳಿಂದ ಕೂಡಿದ ಮಹಾಪುರಾಣಗಳ, ಮತ್ತು ಐದುಲಕ್ಷಣಗಳುಳ್ಳ ಅಲ್ಪಪುರಾ ಣಗಳ ಸಂಖ್ಯೆಯನ್ನು, ಪುರಾಣವಿದರು ಹದಿನೆಂಟೆಂದು ನಿರ್ಣಯಿಸಿರುವರು. ಇವುಗಳಿಗೆ ಕ್ರಮವಾಗಿ, ಬ್ರಾಹ್ಮಪಾದ್ಮ, ವೈಷ್ಣವ,ಶೈವ,ಲೈಂಗ,ಗಾರುಡ, ನಾರದೀಯ, ಭಾಗವತ, ಆಗ್ನೆಯ, ಸ್ಕಾಂದ, ಭವಿಷ್ಯ, ಬ್ರಹ್ಮಚೈವರ್ತ, ಮಾರ್ಕಂಡೇಯ, ವಾಮನ, ವಾರಾಹ, ಮಾತೃ, ಕೌ, ಬ್ರಹ್ಮಾಂಡಗ ಳೆಂದು ಹೆಸರು. ಓ ಬ್ರಾಹ್ಮಣೋತ್ತಮರೆ ! ಹೀಗೆ ಬಾದರಾಯಣಮಹ ರ್ಷಿಯ ಶಿಷ್ಯ ಪ್ರಶಿಷ್ಯರಿಂದ ಪ್ರಚಾರಗೊಳಿಸಲ್ಪಟ್ಟ ಪುರಾಣಸಂಹಿತ ಗಳನ್ನು ನಿಮಗೆ ತಿಳಿಸಿದುದಾಯಿತು. ಇದು ಕೇರತಕ್ಕವರಿಗೆ ಬ್ರಹ್ಮತೇಜ ಸೃನ್ನು ವೃದ್ಧಿಗೊಳಿಸುವುದು.”ಎಂದನು. ಇದು ಏಳನೆಯ ಅಧ್ಯಾಯವು. ಮಾರ್ಕಂಡೇಯ ಚರಿತ್ರೆ, ಮರ್ಕಂಡೇಯನ ತಕರು, ನರನಾರಾಯಕರು ( ಪ್ರತ್ಯಕ್ಷವಾದುದು. ಪ್ರತ್ಯಕ್ಷವಾದುದು.

    • ಶೌನಕಮುನಿಯು ತಿರುಗಿ ಪ್ರಶ್ನೆ ಮಾಡವನು ಓ ಸೂರಾ! ಸಾಥ್! ನೀನು ಚಿರಕಾಲದವರೆಗೆ ಜೀಪಿಸು : ನೀನು ವಾಗ್ರಿಗಳಲ್ಲಿ ಮೇಲೆನಿಸಿದ ವನು. ಸಂಸಾರಸಮುದ್ರದಲ್ಲಿ ಶ್ರಮಿಸುತ್ತಿರುವ ಚೇತನರನ್ನು ಕರೆಯೇ ಚತಕ್ಕವನು. ಆದುದರಿಂದ ನಮಗೆ ಇನ್ನೂ ಕೆಲವು ವಿಷಯಗಳನ್ನು ತಿಳಿಸಬೇಕು. ಏಕೆಂದರೆ, ಮೃಕಂಡುಪುತ್ರನಾದ ಮಾರ್ಕಂಡೇಯಮುನಿ ಯನ್ನು ಜನಗಳು ಚಿರಾಯುವೆಂದು ಹೇಳುವರು. ಮತ್ತು ಆತನು ಕಲ್ಮಾನ ದಲ್ಲಿಯೂ ಜೀವಿಸಿದ್ದು, ಆಗ ಜಗತ್ತೆಲ್ಲವನ್ನೂ ಇಲ್ಲಿ ಲಯಹೊಂದಿಸಿದ ಚರಮಸರುಗಳನ್ನೂ ಪ್ರತ್ಯಕ್ಷವಾಗಿ ನೋಡಿದುದಾಗಿ ಕೇಳಿಬಲ್ಲೆನು.