ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೬ ಅಧ್ಯಾ, ೩.] ಏಕಾದಶ ಸ್ಕಂಧವು. + ಭಾಗವತ ಧರಗಳು, new ಆಗ ವಿದೇಹರಾಜನು “ಓ ಮಹರ್ಷಿಗಳೇ ! ಇಂದ್ರಿಯಗಳನ್ನು ಜಯಿಸಲಾರದವರಿಗೆ ಆ ಭಗವನ್ನಾಯೆಯು ದುಸ್ತರವಾಗಿರುವುದಲ್ಲವೆ ? ಹಾಗಿದ್ದರೆ ನಮ್ಮಂತವರ ಗತಿಯೇನು ? ಮಂದಬುದ್ಧಿಯುಳ್ಳ ನಮ್ಮಂತ ವರು, ಆ ಈಶ್ವರಮಾಯೆಯನ್ನು ದಾಟುವುದಕ್ಕೆ ಸುಲಭವಾದ ಬೇರೆ ಯಾವುದಾದರೂ ಉಪಾಯವಿದ್ದರೆ ಅದನ್ನು ತಿಳಿಸಬೇಕು” ಎಂದನು. ಅದಕ್ಕೆ ಪ್ರಬುದ್ಧನೆಂಬವನು ಹೀಗೆಂದು ಉತ್ತರವನ್ನು ಹೇಳುವನು. (“ಓ ರಾಜೇಂದ್ರಾ : ಕೇಳು ! ಲೋಕದಲ್ಲಿ ಕುಟುಂಬಿಗಳಾದವರು, ತಮ್ಮ ದುಃಖನಿವೃತ್ತಿಯನ್ನೂ , ಸುಖಪ್ರಾಪ್ತಿಯನ್ನೂ ಉದ್ದೇಶಿಸಿಯೇ ವಿವಿಧ ಕರಗಳನ್ನಾಚರಿಸುವರು ಆದರೇನು ? ಕೊನೆಗೆ ಆ ಕರಗಳಿಂದ ಅವರು ತಮ್ಮ ಉದ್ದೇಶಕ್ಕೆ ವಿರುದ್ಧವಾಗಿ, ದುಃಖಪ್ರಾಪ್ತಿಯನ್ನೆ ಹೊಂದುವರು. ಅವರು ಮರಣವನ್ನೂ ಲಕ್ಷ್ಯಮಾಡದೆ ದೇಹವನ್ನು ದಂಡಿಸಿ, ಎಷ್ಟೋ ಕಷ್ಟಪಟ್ಟು, ದುರ್ಲಭವಾದ ಧನವನ್ನು ಗಳಿಸಿದ್ದರೂ, ಆ ಭರದಿಂದಾಗಲಿ, ಆಹಣದಿಂದ ಪೋಷಿಸಲ್ಪಡುವ ಮನೆಮಂದಿ ಮಕ್ಕಳಿಂದಾಗಲಿ, ಅವರಿಗೆ ಅವಮಾತ್ರವೂ ಸುಖವಿಲ್ಲ. ಇವೆಲ್ಲವೂ ಅಶಾಶ್ವತಗಳು. ಈ ಲೋಕದಲ್ಲಿ ಈ ಗೃಹಧನಾದಿಗಳಿಂದುಂಟಾಗುವ ಸುಖವು ಕ್ಷಣಿಕವಾಗಿ, ಕೊನೆಗೆ ದುಃಖ ನಿಮಿತ್ತವೇ ಆಗುವಂತೆ, ಯಜ್ಞಾದಿಕರಗಳಿಂದ ಲಭಿಸತಕ್ಕ ಪಾರಲೌಕಿಕ ಸುಖವೂ ಅಸತ್ಯವೇ ! ಇವರಿಂದ ಮುಖ್ಯವಾಗಿ ಕರ ಪ್ರಾಪ್ತವಾದ ಫಲ ವೆಲ್ಲವೂ ಅಶಾಶ್ವತಗಳೆಂದು ಸ್ಪಷ್ಟವಾಗುವುದು. ಮಂಡಲಾಧೀಶ್ವರರ ಸುಖದಲ್ಲಿ ಗೋಹಾಗೆ, ಈ ಸುಖಗಳಲ್ಲಿ ಸತ್ತಮವಾದ ಆತಿಶಯ ವಾಗಲಿ, ಸಮೂಲವಾದ ನಾಶವಾಗಲಿ ಎರಡೂ ಸಮಾನವೇ! ಈ ಐಹಿಕ ಸುಖಗಳಲ್ಲಿ ಯಾವಾಗಲೂ ಮನಸ್ಸಿಗೆ ನೆಮ್ಮದಿಯಿರದು ಈ ಸುಖದಲ್ಲಿ ತನಗೆ ಸಮಾನರಾದ ಬೇರೊಬ್ಬರನ್ನು ನೋಡಿದಾಗ ಮನಸ್ಸು ಈರ್ಷೆಯಿಂದ ಕುದಿಯುವುದು. ತನಗಿಂತಲೂ ಮೇಲಾದವರನ್ನು ನೋಡಿದಾಗ ತನ್ನ ಸ್ಥಿತಿಯಲ್ಲಿ ಅತೃಪ್ತಿಯು ತೋರುವುದು.ತನಗಿದ್ದ ಆ ಸುಖವೂ ನಷ್ಟವಾದಾ ಗ ಮಿತಿಮೀರಿ ಸಂಕಟಪಡಬೇಕಾಗುವುದು. ಐಹಿಕಸುಖಗಳ ಸ್ಥಿತಿಯು