ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆರ್.ಕೆ.) ದ್ವಾದಶಸ್ಕಂಧರ. ಹೀಗೆ ಆ ಮಾರ್ಕಂಡೇಯನು,ತಪಸ್ಸು,ಅಧ್ಯಯನ ಮುಂತಾದ ಬ್ರಹ್ಮಚಯ್ಯ ವ್ರತದಲ್ಲಿ ನಿರತನಾಗಿ, ಲಕ್ಷೇಪಲಕ್ಷ ವರುಷಗಳವರೆಗೆ ಶ್ರೀವಿಷ್ಣುವ ನ್ಯಾ ರಾಧಿಸುತ್ತಿದ್ದು, ಎಂತವರಿಗೂ, ದುರ್ಜಯವಾದ ಮೃತ್ಯುವನ್ನು ಜಯಿ ಸಿದನು, ಮತ್ತು ಯೋಗಬಲದಿಂದ ರಾಗಾಧಿದೋಷಗಳನ್ನು ನೀಗಿ,ಆ ಭಗ ವತನಲ್ಲಿಯೇ ಇದ್ದ ಮನಸ್ಸುಳ್ಳವನಾಗಿದ್ದನು. ಈ ವಿಧವಾದ ಯೋಗಾ ಭ್ಯಾಸದಲ್ಲಿಯೇ ಅವನಿಗೆ ಆರುಮನ್ವಂತರಗಳ ಕಾಲವು ಕಳೆಯಿತು. ಏಳ ನೆಯದಾದ ಈ ವೈವಸ್ವತ ಮನ್ವಂತರದಲ್ಲಿ, ಇವನ ದೃಢತಪಸ್ಸನ್ನು ನೋಡಿ ಇಂದ್ರನಿಗೆ ಮನಸ್ಸಿನಲ್ಲಿ ಭಯವು ಹುಟ್ಟಿತು. ತನ್ನ ಪದವಿಯನ್ನು ಕಿತ್ತು ಕೊಳ್ಳುವುದಕ್ಕಾಗಿಯೇ ಆ ಯೋಗಿಯು, ಅಂತಹ ದೃಢತಪಸ್ಸನ್ನು ಸಾಧಿ ಸುತ್ತಿರಬೇಕೆಂದು ಶಂಕಿಸಿ, ಇಂದ್ರನು ಆತನ ತಪೋವಿಫು ಲ್ಯಾಗಿ ಗಂಧಪ್ಪ ರನ್ನೂ, ಅಪ್ಪರಸ್ತ್ರೀಯರನ್ನೂ , ಮನ್ಮಥನನ್ನೂ, ವಸಂತನನ್ನೂ, ಮಲಯಾ ನಿಲವನ , ಕಾಮ ಮದ ಲೋಭಗಳನ್ನೂ, ಆ ಋಷಿಯಿದ್ದಲ್ಲಿಗೆ ಕಳುಹಿಸಿ ದನು. ಇವರೆಲ್ಲರೂ, ಹಿಮವತ್ಸರದ ಉತ್ತರಪಾರ್ಶ್ವದಲ್ಲಿರುವ ಈ ಮಾ ರ್ಕಂಡೇಯಾಶ್ರಮಕ್ಕೆ ಬಂದು ಸೇರಿದರು ಓ! ಮಹರ್ಷಿಗಳೇ ! ಅಲ್ಲಿ ಪುಷ್ಪ ಭದ್ರೆಯೆಂಬ ಒಂದಾನೊಂದು ವಾಯು ಪ್ರವಹಿಸುತ್ತಿರುವುದು. ಆ ನಹೀ ೫ರದಲ್ಲಿ ಚಿತ್ರೆಯೆಂಬ ಒಂದಾನೊಂದು ದೊಡ್ಡ ಶಿಲೆಯಿರುವುದು. ಆ ಸ್ಥಳದಲ್ಲಿಯೇ ಮಾರ್ಕಂಡೇಯನು ತಪೋನಿರತನಾಗಿದ್ದನು. ಈ ಆಶ್ರಮ ಪ್ರದೇಶವು ಬಹಳ ಪವಿತ್ರವಾದುದು. ಪುಣ್ಯಕರಗಳಾದ ಗಿಡಬಳ್ಳಿಗಳಿಂದ ರಮ್ಯವಾಗಿರುವುದು. ಅನೇಕಬ್ರಾಹ್ಮಣೋತ್ತಮರಿಂದಲೂ, ಪುಣ್ಯಕರ ನಾಗಿಯೂ, ಶುದ್ಧವಾಗಿಯೂ ಇರುವ ಕೊಳಗಳಿಂದಲೂ ಶೋಭಿಸುತ್ತಿರು ವುದು. ಮಧುಪಾನದಿಂದ ಮದಿಸಿದ ಭ್ರಮರಗಳೂ, ಕೋಗಿಲೆಗಳೂ, ಕಿವಿಗಿಂಪಾಗಿ ಕೂಗುತ್ತಿರುವುದು, ನವಿಲುಗಳು ನರ್ತಿಸುತ್ತಿರುವವ, ಪಕ್ಷ ಗಳು ಅಮನೋಹರವಾದ ಕಿಲಕಿಲಧ್ವನಿಯಿಂದ ಕೂಗುತ್ತಿರುವುದು. ಹೀಗೆ ಸಹಜವಾಗಿಯೇ ಮನಸ್ಸನ್ನು ಕಲಗಿಸತಕ್ಕ ಆ ಆಶ್ರಮದಲ್ಲಿ, ಮೊದಲು ಮಲಯಾನಿಲವು ಪ್ರವೇಶಿಸಿ, ಹಿಮಕಣಗಳಿಂದಲೂ, ಪಕ್ಷಗಂಧದಿಂದಲೂ, ಮಿತ್ರವಾಗಿ ಕಾಮೋದ್ದೀಪನವನ್ನುಂಟುಮಾಡುವಂತೆ ಬೇಡಗಿತು.