ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೨ ಶ್ರೀಮದ್ಭಾಗವತ [ಅಧ್ಯಾ: ೮. ಆಮೇಲೆ ವಸಂತನು, ಚಂದ್ರೋದಯದಿಂದ ಕೂಡಿದ ಸಾಯಂಕಾಲದಲ್ಲಿ, ಅನೇಕಶಾಖೋಪಶಾಖೆಗಳಿಂದ ಕೂಡಿದ ಒಂದೊಂದುಗಿಡುಬಳ್ಳಿಗಳಲ್ಲಿಯೂ, ಅಂದವಾದ ಚಿಗುರಿನ ಗೊಂಚಲುಗಳನ್ನು ಹೊರಡಿಸಿ, ತನ್ನ ಶಕ್ತಿಯನ್ನು ತೋರಿಸಲಾರಂಭಿಸಿದನು. ಆಗಲೇ ಮನ್ಮಥನೂಕೂಡ, ಪುಟ್ಟಮಯವಾದ ಧನುರ್ಬಾಣಗಳನ್ನು ಕೈಯಲ್ಲಿ ಹಿಡಿದು, ತನ್ನ ಪರಿವಾರಗಳಾದ ಅಪ್ಪರ ಸ್ತ್ರೀಯರ ಮತ್ತು ಗಂಧಶ್ವರ ಗಾನವಾದ್ಯಗಳೊಡನೆ, ಹೊರಟುಬಂದು ಆ ಋಷಿಯಮುಂದೆ ಗೋಚರಿಸಿದನು. ಈ ಕಾಲಕ್ಕೆ ಸರಿಯಾಗಿ ಮಾ ರ್ಕಂಡೇಯನು ತನ್ನ ಪ್ರೇಮಕಾವ್ಯವನ್ನು ಮುಗಿಸಿಕೊಂಡು, ಶರೀರ ವತ್ತಾದ ಅಗ್ನಿ ಯಂತೆ ದುಸ್ಸಹವಾದ ತೇಜಸ್ಸಿನಿಂದ ಜ್ವಲಿಸುತ್ತ, ಕಣ್ಣು ಮುಚ್ಚಿಕೊಂಡು ಧ್ಯಾನದಲ್ಲಿ ಕುಳಿತಿದ್ದನು ಇಂದ್ರನ ಪರಿವಾರದವ ರೆಲ್ಲರೂ ಅವನನ್ನು ಅಕ್ಷರದಿಂದ ನೋಡಿದರು. ಆಮೇಲೆ ಅವನಮುಂದೆ ಅಪ್ಪರಸಿಯು ನರ್ತನವನ್ನಾರಂಭಿಸಿದರು. ಗಾಯಕರು ಗಾನಮಾರು ತಿದ್ದರು. ವಾದ್ಯಗಾರರು ಮೃದಂಗ, ವೀಣೆ, ಪಣವ, ಮೊದಲಾದ ವಾದ್ಯ ಗಳನ್ನು ನುಡಿಸಿದರು. ಇದೇ ಸಮಯದಲ್ಲಿ ಮನ್ಮಥನು ಐದಗಿನ ತನ್ನ ಬಾಣವನ್ನು ಪುಷ್ಟಧನುಸ್ಸಿನಲ್ಲಿ ಸಂಧಾನಮಾಡಿ, ಆ ಋಷಿಯಕಡೆಗೆ ಗುರಿ ಯಿಟ್ಟು ಸಿದ್ಧವಾಗಿ ನಿಂತನು. ವಸಂತನೂ, ಇಂದ್ರನಿಂದ ಪ್ರೇರಿತಗಳಾದ ಕಾಮ, ಮದ, ಲೋಭಗಳೂ, ಆ ಋಷಿಯ ಮನಸ್ಸನ್ನು ನಾನಾವಿಧವಾಗಿ ಕಲಗಿಸುವುದಕ್ಕೆ ಪ್ರಯತ್ನಿಸಿದರು. ಪಂಜಿಕಸ್ಥಲಿಯೆಂಬ ಅರಸಿಯು ಆ ಋಷಿಯಮುಂದೆ ನಿಂತು, ಸ್ತನಗಳನ್ನು ಕುಲುಕಿಸುತ್ತ, ಚಂಡಾಡತೊಡ ಗಿದಳು. ಈ ಚಂಡಾಟದಲ್ಲಿ ಏನಭಾರದಿಂದ ಅವಳ ಸಣ್ಣ ನಡುವು ಬಳುಕು ತಿತ್ತು. ಅವಳ ತುರುಬಿನಿಂದ ಹೂಗಳು ಉದರುತಿದ್ದವು. ಆ ವೇಶೈಯು ತನ್ನ ಚಂಡು ಪಟಹಾರಿದಕಡೆಗೆ ಚಾತುರದಿಂದ ದೃಷ್ಟಿಯನ್ನು ತಿರುಗಿಸುತ್ತ ಸುತ್ತಿಸು ಅಚಂದನ್ನು ಹೊಡೆಯುತ್ತಿರುವಾಗ, ಮಲಯಮಾರುತವು ಅವಳು ಉಟ್ಟಿದ್ದ ದುಕೂಲವನ್ನು ಹಾರಿಸಿಬಿಟ್ಟನು. ಇದೇ ಸಮಯದಲ್ಲಿ ಮನ್ಮಥನು ತನ್ನ ತಪ್ಪಬಾಣವನ್ನೂ ಪ್ರಯೋಗಿಸಿದನು. ಆದ ರೇನು ? ದರಿದ್ರನ ಪ್ರಯತ್ನದಂತೆ, ಆ ಯಷಿಯಲ್ಲಿ ಮನ್ಮಥನ ಪ್ರಯ