ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಅಭ್ಯಾ. ಆ.) ದತಕ್ಕಂಧವು, ತ್ನಗಳೆಲ್ಲವೂ ವಿಫಲವಾದುವು. ಕೊನೆಗೆ ಮನ್ಮಥಾದಿಗಳೆಲ್ಲರೂ ವಿಫಲ ಪ್ರಯತ್ನ ರಾಗಿ, ಆ ಋಷಿಯ ತೇಜಸ್ಸಿನಮುಂದೆ ನಿಲ್ಲಲಾರದೆ, ಹಾವನ್ನು ಕಣಕಿದ ಬಾಲಕರಂತೆ ಭಯಪಟ್ಟು ಓಡಿಹೋದರು. ಓ! ಬ್ರಾಹ್ಮಕೂ ಮತ್ತೆ ! ಆ ಮಾರ್ಕಂಡೇಯನ ದೃಢಮನಸ್ಸನ್ನು ನೋಡಿದಿರಾ. ಇಂದ್ರನ ಅನುಚರರು ಎಷ್ಟೆಷ್ಟು ವಿಧದಿಂದ ಭಂಗಪಡಿಸಿದರೂ, ಆ ಮಹ ರ್ಷಿಯು ಮನಸ್ಸು ಕಲಗದೆ, ದೃಢಭಾವದಿಂದಿದ್ದನು. ಮಹಾತ್ಮರಲ್ಲಿ ಇದೊಂದು ವಿಶೇಷವಲ್ಲ!ಅತ್ತಲಾಗಿ ದೇವೇಂದ್ರನೂಕೂಡ,ತನ್ನಿಂದ ಕಳುಹಿ ಸಲ್ಪಟ್ಟ ಮನ್ಮಥ ವಸಂತಾದಿಗಳೆಲ್ಲರೂ, ಆ ಮಾರ್ಕಂಡೇಯನ ತೇಜಸ್ಸಿ ನಿಂದ ತಿರಸ್ಕೃತರಾಗಿ ಬಂದುದನ್ನು ಕೇಳಿ, ಆ ಮಹರ್ಷಿಯ ಪ್ರಭಾವಕ್ಕಾಗಿ ಬಹಳ ಆಶ್ರಪಟ್ಟನು. ಆಮೇಲೆ ಇತ್ತಲಾಗಿ ಮಾರ್ಕಂಡೇಯನು, ಸಮಾಧಿನಿಷ್ಠ ನಾಗಿ ಕುಳಿತಿದ್ದಾಗ, ಅವನನ್ನು ಅನುಗ್ರಹಿಸುವುದಕ್ಕಾಗಿ ನರನಾರಾಯಣರಿಬ್ಬರೂ ಅಲ್ಲಿಗೆ ಬಂದರು. ಇವರಲ್ಲಿ ಒಬ್ಬನ (ನಾರಾಯ ಣವ) ಮೈಬಣ್ಣವು ಕಪ್ಪ! ಮತ್ತೊಬ್ಬನ (ನರನ) ದೇಹಕಾಂತಿಯು ಬಿಳುಪ! ಇಬ್ಬರ ಕಮಲದಂತೆ ಕಣ್ಣುಗಳುಳ್ಳವರು. ಇಬ್ಬರೂ ನಾರುಮಡಿಯ ನ್ನು ಟ್ಯ, ಕೃಷ್ಣಾಜಿನವನ್ನು ಹೊದೆಸಿರುವರು. ಇಬ್ಬರ ಬೆರಳುಗಳಲ್ಲಿಯೂ ಪವಿತ್ರಗಳು! ಕಂಠದಲ್ಲಿ ಯಜ್ಯೋಪವೀತಗಳು! ಇಬ್ಬರ ಕೈಯಲ್ಲಿಯೂ ತ್ರಿದಂಡಕಮಂಡಲಗಳು! ಪದ್ಮಾಕ್ಷಮಾಲಿಕೆ: ಇಬ್ಬರ ಕೈಯಲ್ಲಿಯೂ, ಮುಖಕ್ಕೆ ಮುತ್ತುವ ಕ್ರಿಮಿಗಳನ್ನೋಡಿಸುವುದಕ್ಕಾಗಿ ಕೈ : ಸ್ತಗಳು. ಇಬ್ಬರ ಕೈಯಲ್ಲಿಯೂ ದರ್ಭೆಯ ಮುಷ್ಟಿಗಳು. ಇಬ್ಬರೂ ತಪಸ್ಸೇ ಮೂರ್ತಿಭವಿಸಿದಂತೆ ತೋರುತ್ತಿರುವರು. ಇಬ್ಬರಿಗೂ ಮಿಂಚಿನಂತ ಕೂಳೆ ಯುವ ದೇಹಕಾಂತಿ! ದೇವತೆಗಳು ಗೌರವಿಸತಕ್ಕ ಗಂಭೀರವಾದ, ಮತ್ತು ಮಹೋನ್ನತವಾದ ಆಕೃತಿ!ಹೀಗೆ ಭಗವಂತನ ಅಂಶಭರರದ ನರನಾಂ ಯಣರೆಂಬ ಋಷಿಗಳಿಬ್ಬರೂ ಬಂದುದನ್ನು ಕಂಡೊಡನೆ,ಮಾರ್ಕಂಡೇಯನ ಥಟ್ಟನ ಇದಿರೆದ್ದು, ಅವರಿಗೆ ಸಾಷ್ಟಾಂಗವಾಗಿ ಪ್ರಣಾಮಮಾಡಿದನು. ಆಗ ಮಾರ್ಕಂಡೇಯನಿಗೆ ಅವರ ದರ್ಶನದಿಂದುಂಟಾದ ಆನಂದದಿಂದ ದೇಹವು, ಇಂದ್ರಿಯಗಳೂ, ಮನಸೂ ಪರವಶವಾದುವು, ಮೈಯಲ್ಲಿ +72 B